ಕಲ್ಪ ಮೀಡಿಯಾ ಹೌಸ್ | ಹಾವೇರಿ |
ಮಾಸೂರಿನಲ್ಲಿ ಇತ್ತೀಚೆಗೆ ದುಷ್ಕರ್ಮಿಯಿಂದ ಹತ್ಯೆಯಾದ ಸ್ವಾತಿ #Swathi ಮನೆಗೆ ಭೇಟಿ ನೀಡಿದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ಅವರು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಮಾಸೂರಿನ ಕೊಪ್ಪಿಕೊಂಡದಲ್ಲಿರುವ ಸ್ವಾತಿ ನಿವಾಸಕ್ಕೆ ಭೇಟಿ ನೀಡಿದ ಅವರು, ಮೃತೆಯ ತಾಯಿಯನ್ನು ಭೇಟಿಯಾಗಿ ಸಾಂತ್ವಾನ ಹೇಳಿದರು.

Also read: ಅಂಬೇಡ್ಕರ್ ವಿರುದ್ದ ಜವಾಹರಲಾಲ್ ನೆಹರೂ ಪ್ರಚಾರ ಮಾಡಿ ಅವರನ್ನು ಸೋಲಿಸಿದ್ದು: ಬಸವರಾಜ ಬೊಮ್ಮಾಯಿ
ಪರಿಹಾರಕ್ಕಾಗಿ ಈಶ್ವರಪ್ಪ ಒತ್ತಾಯ
ಹಾವೇರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳ ಜೊತೆ ಫೋನ್ ಮೂಲಕ ಮಾತನಾಡಿದ ಕೆ.ಎಸ್. ಈಶ್ವರಪ್ಪ ಹಿಂದುಳಿದ ವರ್ಗದ ಸ್ವಾತಿ ಕುಟುಂಬಕ್ಕೆ ಸರ್ಕಾರದ ವತಿಯಿಂದ ಅತಿ ಶೀಘ್ರದಲ್ಲಿ ಪರಿಹಾರ ದೊರಕಿಸಿಕೊಡುವಂತೆ ತಾಕೀತು ಮಾಡಿದರು.

ಮಗಳ ದುರಂತ ಸಾವಿನಿಂದ ಕಂಗಾಲಾಗಿರುವ ಸ್ವಾತಿ ತಾಯಿ ಶಶಿರೇಖಾ ಎಲ್ಲಿಯೂ ಇಂತಹ ಘಟನೆ ಮತ್ತೊಮ್ಮೆ ನಡೆಯಬಾರದು. ನನಗೆ ಯಾವುದೇ ರೀತಿಯ ಹಣದ ಸಹಾಯ ಬೇಡ, ಬದಲಾಗಿ ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post