ಕಲ್ಪ ಮೀಡಿಯಾ ಹೌಸ್ | ಹಾವೇರಿ/ಹುಬ್ಬಳ್ಳಿ |
ಮಗ ಹೃದಯಾಘಾತದಿಂದ ಸಾವಿಗೀಡಾಗಿರುವ ವಿಷಯ ತಿಳಿದು, ತಂದೆಯೂ ಸಹ ತೀವ್ರ ಹೃದಯಘಾತದಿಂದ #Heart Attack ಮೃತಪಟ್ಟಿರುವ ಮನಕಲುಕುವ ಘಟನೆ ನಗರದ ಬಸವೇಶ್ವರ ನಗರದಲ್ಲಿ ನಡೆದಿದೆ.
ಮೃತ ತಂದೆ ಡಾ.ವೀರಭದ್ರಪ್ಪ ಗುಂಡಗಾವಿ(68) ಹಾಗೂ ಮಗನನ್ನು ಡಾ.ವಿನಯ್ ಗುಂಡಗಾವಿ ಎಂದು ವರದಿಯಾಗಿದೆ. ವೃತ್ತಿಯನ್ನು ತಂದೆ ಮಗ ಇಬ್ಬರೂ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.
ಮಗ ಡಾ.ವಿನಯ್ ಹುಬ್ಬಳ್ಳಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ತೀವ್ರ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದಿದ್ದರು.
Also read: ಸಂಡೂರು ವಿಧಾನಸಭೆ ಉಪಚುನಾವಣೆ: ರಜೆ ಮೇಲೆ ತೆರಳುವಂತಿಲ್ಲ
ಮಗನ ಸಾವಿನ ಸುದ್ದಿ ಕೇಳಿದ ತಂದೆ ಡಾ.ವೀರಭದ್ರಪ್ಪ ಗುಂಡಗಾವಿಗೆ ಹಾವೇರಿಯಲ್ಲಿ ಹೃದಯಾಘಾತವಾಗಿದೆ. ಹೃದಯಾಘಾತದಿಂದ ತಂದೆಯೂ ಕೊನೆಯುಸಿರೆಳೆದಿದ್ದಾರೆ. ಮಗ ಡಾ. ವಿನಯ ಹುಬ್ಬಳ್ಳಿಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು.
ತಂದೆ ಡಾ. ವೀರಭದ್ರಪ್ಪ ಹಾವೇರಿಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ತಂದೆ ಮತ್ತು ಮಗ ಯಾವಾಗಲೂ ಅತ್ಯಂತ ಪ್ರೀತಿಯಿಂದಲೆ ಇರುತ್ತಿದ್ದರು. ಹೀಗಾಗಿ ಮಗ ಡಾ. ವಿನಯನ ಸಾವಿನ ಸುದ್ದಿ ಕೇಳಿದ ತಂದೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















