ಕಲ್ಪ ಮೀಡಿಯಾ ಹೌಸ್ | ಹಾವೇರಿ |
ಕಳೆದ ಆರೇಳು ತಿಂಗಳಿನಿಂದ ಶಿಗ್ಗಾವಿ ತಾಲೂಕಿನಲ್ಲಿ ಜೂಜಾಟ, ಒಸಿ ಅಲ್ಲದೇ ಡ್ರಗ್ ಸೇವನೆ ಹೆಚ್ಚಾಗಿರುವ ಸುದ್ದಿ ಬರುತ್ತಿವೆ. ಒಂದು ಸುಸಂಸ್ಕೃತ ಕ್ಷೇತ್ರವನ್ನು ಜೂಜುಗಾರರ ಕ್ಷೇತ್ರವಾಗಿ ಪರಿವರ್ತನೆ ಆಗುತ್ತಿರುವುದು ನನಗೆ ದುಖ ತಂದಿದೆ. ಎಲ್ಲ ಚಟುವಟಿಕೆಗಳಿಗೆ ಪೊಲಿಸರು ಸಾಥ್ ಕೊಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ಈ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಡಿಜಿಪಿ ಹಾಗೂ ಹಾವೇರಿ ಎಸ್ಪಿ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ #Basavaraja Bommai ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಲವಾರು ಬಾರಿ ಜೂಜಾಟದಲ್ಲಿ ಕೆಲವರು ಸಿಕ್ಕರೂ ಕೂಡ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರಲ್ಲಿ ಇದೂವರೆಗೆ ಎರಡು ಪ್ರಕರಣಗಳು ಜೂಜುಕೋರರ ಮೇಲೆ ದಾಖಲಾಗಿದ್ದು ಯಾರೋಬ್ಬರನ್ನು ಬಂಧಿಸದೇ ನಕಲಿ ಎಫ್ ಐ ಆರ್ ದಾಖಲಿಸಿದ್ದಾರೆ . ಹಾಗೂ ಮೊನ್ನೆ ಶಿಗ್ಗಾಂವಿ ಡಿ ವಾಯ್ ಎಸ್ ಪಿ ನಾಲ್ಕು ಜನ ಗಾಂಜಾ ಮಾರುವವರನ್ನು ಕರೆತಂದು ಪ್ರಕರಣ ದಾಖಲಿಸದೆ ಸುಮ್ಮನೆ ಬಿಟ್ಟು ಕಳುಹಿಸಿದ್ದಾರೆ ಎಂಬ ಮಾಹಿತಿ ಇದೆ. ಅದಕ್ಕೆ ಸ್ಥಳೀಯ ಶಾಸಕರ ಆಪ್ತರು ಮತ್ತು ಆಶ್ರಯ ಸಮಿತಿ ಸದಸ್ಯರು ಈ ಜೂಜಾಟ ಆಡಿಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಮಾಧ್ಯಮದಲ್ಲಿ ಸೆರೆ ಹಿಡಿದಿದ್ದಾರೆ ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಯಾರ ಮೇಲೆ ಎಫ್ ಐ ಆರ್ ಆಗಿದೆ ಅವರನ್ನು ತಕ್ಷಣವೇ ಬಂಧಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯ ಸಿಸಿಬಿ ಪೊಲಿಸರು ಬಿಸ್ನಳ್ಳಿ ಬಳಿ 50 ಕೆಜಿ ಗಾಂಜಾ ಸಿಕ್ಕಿದ್ದನ್ನು ಕೇವಲ 10 ಕೆಜಿ ಎಂದು ತೋರಿಸಿದ್ದಾರೆ ಎಂದು ಕೇಸುಗಳ ಮುಖಾಂತರ ಗೊತ್ತಾಗುತ್ತಿದೆ. ಕೂಡಲೆ ತಾಲೂಕಿನಲ್ಲಿ ಒಸಿ, ಜೂಜಾಟ ಗಾಂಜಾ ಸೇವನೆ ನಿಲ್ಲಿಸಬೇಕು ಅವರು ಎಷ್ಟೇ ದೊಡ್ಡವರಿದ್ದರೂ ರಾಜಕೀಯ ಒತ್ತಡಕ್ಕೆ ಮಣಿಯದೆ ಎಲ್ಲರನ್ನು ಬಂದಿಸಬೇಕು, ಅವರ ವಿರುದ್ಧ ಕಾನೂನು ಕ್ರಮ ಕೈಕೊಗಳ್ಳಬೇಕು. ಅಲ್ಲದೇ ಈ ಅಕ್ರಮದಲ್ಲಿ ಯಾರು ಭಾಗಿಯಾಗಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಜಿಪಿ ಹಾಗೂ ಹಾವೇರಿ ಎಸ್ಪಿ ಅವರಿಗೆ ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post