ಬೆಂಗಳೂರು: ಮಲ್ಲೇಶ್ವರಂನಲ್ಲಿರುವ ಅಖಿಲ ಹವ್ಯಕ ಮಹಾಸಭಾದ ಕಟ್ಟಡಕ್ಕೆ ಮೊದಲ ಬಾರಿಗೆ ಆಗಮಿಸಿದ ಶ್ರೀಶ್ರೀಧರ ಸ್ವಾಮಿಗಳ ಪಾದುಕೆಗಳನ್ನು ಉಪಾಧ್ಯಕ್ಷ ಕೆಕ್ಕಾರು ಶ್ರೀಧರ್ ಭಟ್ ದಂಪತಿಗಳು ಸ್ವಾಗತಿಸಿ, ಧೂಳಿ ಪಾದಪೂಜೆ ನೆರವೇರಿಸಿದರು.
ಭಗವಾನ್ ಸದ್ಗುರು ಶ್ರೀಶ್ರೀಧರ ಸ್ವಾಮಿಗಳವರ ಚರಿತೆಯನ್ನು ಹರಿದಾಸ ಗಣಪತಿ ಹೆಗಡೆ, ಗೋಪಿ, ಹಡಿನಬಾಳು ಇವರು ನಡೆಸಿಕೊಟ್ಟರು. ನಿರ್ದೇಶಕ ಪ್ರಸನ್ನ ಕುಮಾರ್ ಕೆ.ಎಸ್. ದಂಪತಿಗಳು ಭಿಕ್ಷಾಸೇವೆ ನೆರವೇರಿಸಿದರೆ, ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ ದಂಪತಿಗಳು ಮಹಾಸಭೆಯ ಪರವಾಗಿ ಭಿಕ್ಷಾಂಗ ಪಾದುಕಾಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ 100ಕ್ಕೂ ಅಧಿಕ ಋತ್ವಿಜರಿಂದ ಶ್ರೀಧರರ ಪಾದುಕೆಗಳಿಗೆ ಶತರುದ್ರಾಭಿಷೇಕ ಸೇವೆ ನಡೆಯಿತು. ವಿಶೇಷ ಪೂಜೆಯ ಮೂಲಕ ಹವ್ಯಕ ಮಹಾಸಭಾದಿಂದ ಶ್ರೀಧರ ಸ್ವಾಮಿಗಳ ಆರಾಧನೆ ಸಂಪನ್ನವಾಯಿತು.
ಇನ್ನು, ಇದೇ ಸಂದರ್ಭದಲ್ಲಿ ಹವ್ಯಕ ವೈದಿಕರ ಸಮಾವೇಶವನ್ನು ಆಯೋಜಿಸಿ ವೈದಿಕರ ಇಂದಿನ ಸಮಸ್ಯೆಗಳು – ಸವಾಲುಗಳ ಬಗ್ಗೆ ಚರ್ಚಿಸಲಾಯಿತು. ಪೌರೋಹಿತ್ಯ ಮತ್ತು ಪಾಠಶಾಲೆಗಳ ಮೂಲಕ ಸಾವಿರಾರು ವೇದಾದ್ಯಾಯಿಗಳನ್ನು ಸಮಾಜಕ್ಕೆ ನೀಡುತ್ತಿರುವ ವೈದಿಕರು ಮತ್ತು ಹಿರಿಯ ಪಾಠಶಾಲೆಗಳ ಹಿರಿಯ ಅಧ್ಯಾಪಕರಾದ ವಿದ್ವಾನ್ ಕೃಷ್ಣಮೂರ್ತಿ ಭಟ್, ಹುಳೇಗಾರು, ವಿದ್ವಾನ್ ಸುಬ್ರಾಯ ರಾಮಚಂದ್ರ ಭಟ್, ಆರೋಳ್ಳಿ, ವಿದ್ವಾನ್ ಕರುವಜೆ ಕೇಶವ ಜೋಯಿಸರು ವಿದ್ವಾನ್ ತಿಮ್ಮಣ್ಣ ಭಟ್ಟ ಕಲ್ಲಪ್ಪ, ಗೋಕರ್ಣ, ವಿದ್ವಾನ್ ಟಿ.ಎನ್. ಜನಾರ್ಧನ ಭಟ್, ವಿದ್ವಾನ್ ಪುಟ್ಟಯ್ಯ ನಾರಾಯಣ ಭಟ್ಟ, ವಿದ್ವಾನ್ ನರಸಿಂಹ ಭಟ್, ಅಗ್ನಿಹೋತ್ರಿ ವಿದ್ವಾನ್ ಶಂಕರ ಭಟ್, ಬಾಲಿಗದ್ದೆ, ವಿದ್ವಾನ್ ಗುರುಪಾದ ಮಹಾಬಲೇಶ್ವರ ಭಟ್, ಕೆಕ್ಕಾರು, ವಿದ್ವಾನ್ ರವೀಶ್ ಭಟ್, ವಿದ್ವಾನ್ ನೀಲಕಂಠ ಯಾಜಿ, ಬೈಲೂರು, ವಿದ್ವಾನ್ ರಘವೇಂದ್ರ ಭಟ್, ಸಂಪೇಕಟ್ಟೆ ಈ 12 ಜನರಿಗೆ ಹವ್ಯಕ ಮಹಾಸಭೆಯಿಂದ ಪ್ರಶಸ್ತಿ ಸವ್ಮಾನ ನೀಡಿ ಗೌರವಿಸಲಾತು.
ಈ ಎಲ್ಲಾ ಸವ್ಮಾನಿತರ ಪರವಾಗಿ ವಿದ್ವಾನ್ ಶಂಕರ ಭಟ್, ಬಾಲಿಗದ್ದೆ ಮಾತನಾಡಿ, ಹವ್ಯಕ ಮಹಾಸಭೆ ವೈದಿಕರು ಮತ್ತು ಅಧ್ಯಾಪಕರನ್ನು ಗೌರವಿಸಿರುವದು ತುಂಬಾ ಸಂತೋಷವಾಗಿದೆ ಮತ್ತು ವೈದಿಕರ ಬಗ್ಗೆ ವಿಶೇಷ ಗೌರವ ಸವ್ಮಾನ ನೀಡಿರುವುದು ವೈದಿಕರು ಮತ್ತು ಅಧ್ಯಾಪಕರಿಗೆ ಸಂದ ಗೌರವವಾಗಿದೆ. ವೈದಿಕರಿಗೆಲ್ಲಾ ಇನ್ನೂ ಹೆಚ್ಚಿನ ಸಮಯವನ್ನು ಕೇಂದ್ರ ಸಂಸ್ಥೆಯಾದ ಹವ್ಯಕ ಮಹಾಸಭೆಯೊಂದಿಗೆ ವಿಶೇಷ ಸಂಪರ್ಕ ಹೊಂದುವಂತಾಗಲಿ ಮತ್ತು ಇನ್ನೂ ಮುಂದಿಯೂ ಸಹಾ ಈ ರೀತಿ ಕಾರ್ಯಕ್ರಮ ಪ್ರತಿ ವರ್ಷ ನಡೆಯಲಿ ಎಂದರು.
ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ, ಶ್ರೀಧರ ಜೆ. ಭಟ್ಟ, ಕೆಕ್ಕಾರು, ಸಿ.ಎ. ವೇಣುವಿಘ್ನೇಶ ಸಂಪ ಸಭೆಯಲ್ಲಿ ಉಪಸ್ಥಿತರಿದ್ದರು. ಹವ್ಯಕ ವೈದಿಕ ಸಮಾವೇಶದ ಸಂಚಾಲಕ ಚಿದಂಬರ ಭಟ್, ತಲನೀರು, ಧಾರ್ಮಿಕ ಸಮಿತಿ ಸಂಚಾಲಕ ವಿ॥ ಗೋಪಾಲ್ ಭಟ್ಟ ಕಾರ್ಯಕ್ರಮ ನಡೆಸಿಕೊಟ್ಟರು, ಆದಿತ್ಯ ಹೆಗಡೆ ಕಲಗಾರ್ ಇವರು ಕಾರ್ಯಕ್ರಮ ನಿರೂಪಣೆ ನಡೆಸಿಕೊಟ್ಟರು.
ಆನಂತರ ವೇ.ಬ್ರ ರಾಮಕೃಷ್ಣ ಭಟ್, ಕೂಟೇಲು ಹಾಗೂ ಅವರಿಂದ ವಿದ್ವಾನ್ ಅನಂತಮೂರ್ತಿ ಭಟ್ಟ, ಯಲೂಗಾರ್ ಒವರುಗಳು ವೈದಿಕರ ಕರ್ತವ್ಯ ಮತ್ತು ಹೊಣೆ ಹಾಗೂ ವೈದಿಕ ವೃತ್ತಿಯಲ್ಲಿರುವ ಸವಾಲುಗಳು ಮತ್ತು ಪರಿಹಾರ ವಿಷಯದ ಕುರಿತಾಗಿ ಪ್ರವಚನ ಕಾರ್ಯಕ್ರಮ ನಡೆಯಿತು.
Discussion about this post