ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ನನ್ನ ಬಾಸ್ ಎಂದು ಪ್ರಧಾನಿ ನರೇಂದ್ರ ಮೋದಿ #NarendraModi ಬಣ್ಣಿಸಿದರು.
ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ #NitinNabin ಅವರುಯ ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಪ್ರಧಾನಿಯವರು ನಾನು ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಇಷ್ಟು ವರ್ಷ ಕಾರ್ಯನಿರ್ವಹಿಸಿದ್ದೇನೆ. ಆದರೆ, ಬಿಜೆಪಿ ವಿಚಾರದಲ್ಲಿ ಬಂದಾಗ ನಾನು ಪಕ್ಷದ ಕಾರ್ಯಕರ್ತ, ನಿತಿನ್ ನಬಿನ್ ನನ್ನ ಬಾಸ್ ಎಂದರು.
ನಿತಿನ್ ನಬಿನ್ ಅವರು #MillennialGeneration ಮಿಲೇನಿಯಮ್ ಜನರೇಶನ್’ನವರು. ಅವರು ಭಾರತದಲ್ಲಿನ ಪ್ರಮುಖ ಆರ್ಥಿಕ, ಸಾಮಾಜಿಕ ಮತ್ತು ತಾಂತ್ರಿಕ ಬದಲಾವಣೆಗಳನ್ನ ಕಂಡ ಪೀಳಿಗೆಯವರು ಎಂದರು.
ನಿತಿನ್ ಅವರು ಬಾಲ್ಯದಲ್ಲಿ ರೇಡಿಯೋದಲ್ಲಿ ಮಾಹಿತಿ ಕೇಳಿ, ಈಗ ಎಐ ಬಳಸುವ ತಂತ್ರಜ್ಞಾನಕ್ಕೆ ಒಗ್ಗಿಕೊಂಡವರು. ನಿತಿನ್ ಜಿ ಅವರಲ್ಲಿ ಯುವಕರ ಉತ್ಸಾಹ ಮತ್ತು ಸಂಘಟನಾತ್ಮಕ ಕೆಲಸದ ಅನುಭವ ಎರಡೂ ಇದೆ. ಇದು ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಬಹಳ ಪ್ರಯೋಜನಕಾರಿ ಎಂದರು.
ಬಿಜೆಪಿ #BJP ಯಾವಾಗಲೂ ಹೊಸಬರಿಗೆ ವೇದಿಕೆ, ಅವಕಾಶ ನೀಡುತ್ತದೆ. ನಿತಿನ್ ಅವರು ರಾಷ್ಟ್ರಾಧ್ಯಕ್ಷರಾಗಿ ಜವಾಬ್ದಾರಿ ಕೇವಲ ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ. ಎನ್’ಡಿಎ ಒಕ್ಕೂಟ ಒಕ್ಕೂಟದಲ್ಲಿ ಸಮನ್ವಯ ಸಾಧಿಸುವುದೂ ಸಹ ಮುಖ್ಯವಾಗಿದೆ. ಅವರಿಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ ಎಂಬ ನಂಬಿಕೆಯಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















