ನವದೆಹಲಿ: ಜಮ್ಮುವಿನ ಪುಲ್ವಾಮಾ ಜಿಲ್ಲೆಯಲ್ಲಿ ಗುರುವಾರ ಪಾಕ್ ಉಗ್ರರು ನಡೆಸಿದ ಭೀಕರ ಆತ್ಮಹತ್ಯಾ ದಾಳಿಗೆ ಬಲಿಯಾಗಿ ವೀರಸ್ವರ್ಗ ಸೇರಿದ ಸಿಆರ್’ಪಿಎಫ್’ನ 42 ಯೋಧರ ಬಗ್ಗೆ ಇಡಿಯ ದೇಶವೇ ಕಣ್ಣೀರು ಸುರಿಸುತ್ತಿದೆ.
ನಮ್ಮ ಯೋಧರ ರಕ್ತದೋಕುಳಿ ಆಡಿದ ಪಾಕಿನ ರಕ್ತವನ್ನೂ ನೋಡಬೇಕು, ಹತ್ಯೆಗೆ ಹತ್ಯೆಯೇ ಪ್ರತೀಕಾರವಾಗಬೇಕು ಎಂಬ ಆಕ್ರೋಶ ದೇಶವಾಸಿಗಳಲ್ಲಿ ಸ್ಫೋಟಗೊಂಡಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡವೂ ಹೆಚ್ಚಾಗಿದೆ.
ಇಡಿಯ ದೇಶ ಒಂದಾಗಿ ಹೋರಾಡಬೇಕಾದ ಈ ವೇಳೆ, ಇಂದು ಮುಂಜಾನೆ ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅತ್ಯಂತ ಗಂಭೀರವಾಗಿ ಘಟನೆಯನ್ನು ಖಂಡಿಸಿದ್ದರು. ಕೇಂದ್ರದ ಯಾವುದೇ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂದಿದ್ದರು.
ಸದಾ ಎಡವಟ್ಟುಗಳನ್ನೇ ಮಾಡಿಕೊಳ್ಳುವ ರಾಹುಲ್ ಗಾಂಧಿ ಇಂದಾದರೂ ಪ್ರಬುದ್ಧತೆ ಮೆರೆದರಲ್ಲಾ ಎಂದುಕೊಳ್ಳುವ ಮುನ್ನವೇ ಅತ್ಯಂತ ದೊಡ್ಡ ಅಗೌರವದ ಕೆಲಸ ಮಾಡಿದ್ದಾರೆ.
ನಿನ್ನೆ ಘಟನೆಯಲ್ಲಿ ವೀರಸ್ವರ್ಗ ಸೇರಿದ ಎಲ್ಲ ಯೋಧರ ಪಾರ್ಥಿವ ಶರೀರಗಳನ್ನು ಇಂದು ನವದೆಹಲಿಯ ಪಾಲಮ್ ವಾಯನೆಲೆ ನಿಲ್ದಾಣಕ್ಕೆ ತರಲಾಯಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ವೀರಯೋಧರಿಗೆ ದುಃಖತಪ್ತ ಅಂತಿಮ ನಮನ ಸಲ್ಲಿಸಿದರು. ಇಡಿಯ ಸನ್ನಿವೇಶ, ವಾತಾವರಣ ತೀರಾ ದುಃಖದಿಂದ ಕೂಡಿದ್ದು, ಆಕ್ರೋಶಭರಿತ ಗಂಭೀರವಾಗಿತ್ತು. ಹುತಾತ್ಮ ಯೋಧರಿಗೆ ಅಂತಿಮ ಗೌರವ ಸಲ್ಲಿಸುವ ಭಾಗವಾಗಿ ಮೌನಾಚರಣೆ ನಡೆಸಲಾಯಿತು.
ಮೌನಾಚರಣೆ ವೇಳೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಗಣ್ಯಾತಿಗಣ್ಯರಿದ್ದರು.
ಮೌನಾಚರಣೆ ನಡೆಸುತ್ತಿದ್ದರೆ ಗಣ್ಯರ ಸಾಲಿನಲ್ಲಿ ನಿಂತಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಲೆ ಬಗ್ಗಿಸಿಕೊಂಡು ಮೊಬೈಲ್ ನೋಡುವ ಮೂಲಕ ಹುತಾತ್ಮ ಯೋಧರಿಗೆ ಅವಮಾನ ಆಗುವಂತ ರೀತಿಯಲ್ಲಿ ವರ್ತಿಸಿದ್ದಾರೆ.
ಸೇನಾ ಮುಖ್ಯಸ್ಥರ ಪಕ್ಕದಲ್ಲಿ ನಿಂತಿದ್ದ ರಾಹುಲ್ ಮೌನಾಚರಣೆ ವೇಳೆ ಮೊಬೈಲ್ ವೀಕ್ಷಣೆ ಮಾಡಿದ್ದು, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಯೋಧರ ಬಲಿದಾನಕ್ಕೆ, ಆ ಮೂಲಕ ಇಡಿಯ ಸೇನೆಗೆ, ಆ ಮೂಲಕ ಇಡಿಯ ರಾಷ್ಟಕ್ಕೆ ಅವಮಾನ ಮಾಡಿದ್ದಾರೆ.
ಒಂದು ರಾಷ್ಟಿಯ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವ ಈ ಮನುಷ್ಯನಿಗೆ ಎಂತಹ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಪ್ರಜ್ಞೆಯಿಲ್ಲ. ಹಿಂದೆ ತಮಿಳುನಾಡು ಮಾಜಿ ಸಿಎಂ ಎಂ. ಕರುಣಾನಿಧಿ ಅವರ ಆರೋಗ್ಯ ಸ್ಥಿತಿ ಗಂಭೀವಾಗಿದ್ದ ವೇಳೆ ಅವರನ್ನು ನೋಡಲು ರಾಹುಲ್ ಆಸ್ಪತ್ರೆಗೆ ತೆರಳಿದ್ದರು. ಸಾವಿನ ಹಾಸಿಕೆಯಲ್ಲಿ ಮಲಗಿದ್ದ ವ್ಯಕ್ತಿಯನ್ನು ನಗುತ್ತಾ ನೋಡಿದ್ದ ರಾಹುಲ್ ಅವರನ್ನು ನೋಡಿ ಇಡಿಯ ರಾಷ್ಟ ಛೀಮಾರಿ ಹಾಕಿತ್ತು.
ಈಗ 42 ಯೋಧರನ್ನು ಕಳೆದುಕೊಂಡ ಕೋಟ್ಯಂತರ ಭಾರತೀಯರು ಶೋಕಸಾಗರಲ್ಲಿ ಮುಳುಗಿದೆ. ಈ ಮನುಷ್ಯನಿಗೆ ಯೋಧರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸುವ ಭಾಗ್ಯ ದೊರಕಿದೆ. ಆದರೆ, ಹುತಾತ್ಮರ ಗೌರವಾರ್ಥ ಪಾರ್ಥಿವ ಶರೀರಗಳ ಮುಂದೆಯೇ ನಡೆದ ಮೌನಾಚರಣೆ ವೇಳೆ ಮೊಬೈಲ್ ವೀಕ್ಷಣೆಗೆ ಮಾಡುವ ಮೂಲಕ ರಾಹುಲ್ ತಮ್ಮ ಯೋಗ್ಯತೆಯನ್ನು ತಾವೇ ಹರಾಜು ಹಾಕಿಕೊಂಡಿದ್ದಾರೆ.
ಧಿಕ್ಕಾರವಿರಲಿ ಇಂತಹ ಅಪ್ರಬುದ್ಧ ವ್ಯಕ್ತಿಗೆ!
Discussion about this post