ಭದ್ರಾವತಿ: ಜಮ್ಮುವಿನ ಪುಲ್ವಾಮಾದಲ್ಲಿ ಗುರುವಾರ ಪಾಕ್ ಉಗ್ರರು ನಡೆಸಿದ ಭೀಕರ ಸ್ಫೋಟಕ್ಕೆ ಸಿಆರ್’ಪಿಎಫ್’ನ 42 ಯೋಧರು ವೀರಸ್ವರ್ಗ ಸೇರಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ ಭದ್ರಾವತಿಯಲ್ಲೂ ಸಹ ತೀವ್ರ ಆಕ್ರೋಶ ಭುಗಿಲೆದ್ದಿದೆ.
ಈ ದೇಶದ 42 ಯೋಧರನ್ನು ಕಳೆದುಕೊಂಡು ಭದ್ರಾವತಿ ಜನರ ಒಡಲಲ್ಲಿದ್ದ ನೋವು ನಿನ್ನೆ ರಾತ್ರಿ ಸ್ಫೋಟಗೊಂಡಿದ್ದು, ಪಾಕಿಸ್ಥಾನದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರದ ಮೇಲೆ ಒತ್ತಡ ತಂದರು.
ರಂಗಪ್ಪ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೂ ಸಾವಿರಾರು ಹಿಂದೂ ದೇಶಪ್ರೇಮಿಗಳು ಬೃಹತ್ ಪ್ರತಿಭಟನೆ ನಡೆಸಿದರು. ಪಾಕಿಸ್ಥಾನದ ಧ್ವಜಕ್ಕೆ ಚಪ್ಪಲಿ ಸೇವೆ ಮಾಡಿ, ಚಪ್ಪಲಿ ಹಾರ ಹಾಕಿ, ಕೊನೆಯಲ್ಲಿ ಪಾಕ್ ಧ್ವಜವನ್ನು ದಹಿಸಿ ಕಿಚ್ಚನ್ನು ಹೊರಹಾಕಲಾಯಿತು.
ಮೋಸದಿಂದ ನಮ್ಮ ಸೈನಿಕರನ್ನು ಬಲಿ ಪಡೆದ ಪಾಪಿ ಪಾಕಿಸ್ಥಾನಕ್ಕೆ ಸರಿಯಾದ ಪಾಠ ಕಲಿಸುವ ತೀರ್ಮಾನವನ್ನು ಕೇಂದ್ರ ಸರ್ಕಾರ ತತಕ್ಷಣ ಕೈಗೊಳ್ಳಬೇಕು. ನಕಾಶೆಯಿಂದ ಪಾಕ್ ಭೂಪಟವನ್ನು ಅಳಿಸಿ ಹಾಕುವಂತಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
ವಿಶ್ವ ಹಿಂದೂ ಪರಿಷತ್, ಬರಂಗದಳ, ಆಜಾದ್ ಹಿಂದೂ ಪಡೆ, ಎಬಿವಿಪಿ ಹಾಗೂ ಹಿಂದೂ ಪರ ಸಂಘಟನೆಗಳು ಒಟ್ಟಾಗಿ ಪ್ರತಿಭಟನೆ ನಡೆಸಿದ್ದು ಸಾವಿರಾರು ಮಂದಿ ನೆರೆದಿದ್ದರು.
Discussion about this post