ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಕಳೆದ ಮೂರು-ನಾಲ್ಕು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಪುಷ್ಯ ಮಳೆಯ ಅಬ್ಬರಕ್ಕೆ ಜಿಲ್ಲೆಯಲ್ಲಿ ಹಲವು ಅನಾಹುತ ಸೃಷ್ಠಿಸಿದೆ.
ಭಾರೀ ಮಳೆಗೆ ಬೃಹದಾಕಾರದ ತೆಂಗಿನ ಮರ ಹಾಗೂ ಗೋಳಿ ಮರವೊಂದು ಏಕಕಾಲದಲ್ಲಿ ಗಾಳಿ ರಭಸಕ್ಕೆ ಬಿದ್ದು ಕೊಟ್ಟಿಗೆ ಹಂಚುಗಳು ಪುಡಿ ಪುಡಿಯಾಗಿರುವ ಘಟನೆ ದೇವಂಗಿ ಸಮೀಪದ ಇಂಗ್ಲಾದಿಯಲ್ಲಿ ನಡೆದಿದೆ.
ತಾಲೂಕಿನ ದೇವಂಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇಂಗ್ಲಾದಿಯಲ್ಲಿರುವ ರಘು ಪೂಜಾರಿಯವರ ಮನೆ ಹಾಗೂ ಕೊಟ್ಟಿಗೆ ಮೇಲೆ ಮರ ಬಿದ್ದಿದ್ದು ಕೊಟ್ಟಿಗೆಯಲ್ಲಿದ್ದ ದನಗಳಿಗೆ ಪೆಟ್ಟಾಗಿದ್ದು ಮನೆಯಲ್ಲಿದ್ದವರಿಗೆ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ದೇವಂಗಿ ಗ್ರಾಮ ಪಂಚಾಯತಿ ಪಿಡಿಒ, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗ್ರಾಮಸ್ಥರು ಮನೆಯ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post