ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಬಿಸಿಲಿನಿಂದ ಕಾದ ಕಾವಲಿಯಂತಾಗಿದ್ದ ಉಕ್ಕಿನ ನಗರಿಯಲ್ಲಿ ಇಂದು ಮಧ್ಯಾಹ್ನ ಸುರಿದ ಮಳೆ ಕೊಂಚ ತಂಪೆರೆದಿದೆ.
ಸುಮಾರು 1 ಗಂಟೆಯಿಂದಲೇ ಮೋಡ ಮುಸುಕಿದ ವಾತಾವರಣವಿದ್ದು, 2.30ರ ವೇಳೆಗೆ ಭಾರೀ ಸಿಡಿಲು ಹಾಗೂ ಗುಡುಗಿನಿಂದ ಕೂಡಿದ ಮಳೆ ಸುರಿದಿದ್ದು, ಇಳೆಯನ್ನು ಕೊಂಚ ತಂಪಾಗಿಸಿದೆ.

ನಗರ ಮಾತ್ರವಲ್ಲದೇ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲೂ ಸಹ ಮಳೆಯಾಗಿದ್ದು, ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಮಳೆರಾಯ ಕೃಪೆ ತೋರಿದ್ದಾನೆ.
ಶಿವಮೊಗ್ಗದಲ್ಲೂ ಮಳೆ
ಇನ್ನು, ಶಿವಮೊಗ್ಗ ನಗರ, ಗಾಜನೂರು, ಹೊಸಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲೂ ಮಳೆಯಾಗಿದೆ.
Get in Touch With Us info@kalpa.news Whatsapp: 9481252093
















