ಕಲ್ಪ ಮೀಡಿಯಾ ಹೌಸ್ | ಚಿಕ್ಕಜಾಜೂರು |
ವಿವಿಧ ರೈಲ್ವೆ ಕಾಮಗಾರಿಗಳ ಹಿನ್ನೆಲೆಯಲ್ಲಿ ತಿರುಪತಿ ಹಾಗೂ ಚಿಕ್ಕಜಾಜೂರು ಸಂಪರ್ಕಿಸುವ ವಿವಿಧ ರೈಲುಗಳ ಸಂಚಾರವನ್ನು ಕೆಲವು ದಿನಾಂಕಗಳಂದು ರದ್ದು ಮಾಡಲಾಗಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ಸೊಮಲಾಪುರಂ- ರಾಯದುರ್ಗ ರೈಲು ನಿಲ್ದಾಣಗಳ ನಡುವೆ ಬದನಹಲ್ಲುಯಲ್ಲಿ ಹೊಸ ಕ್ರಾಸಿಂಗ್ ನಿಲ್ದಾಣ ನಿರ್ಮಾಣ ಕಾರ್ಯಕ್ಕಾಗಿ ಕಟ್ ಹಾಗೂ ಕನೆಕ್ಷನ್ ಕೆಲಸಗಳನ್ನು ನಡೆಸಲು ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕೈಗೊಳ್ಳಲಾಗಿರುವುದರಿಂದ ಕೆಳಗಿನ ರೈಲು ಸೇವೆಗಳು ಎರಡು ದಿನಗಳ ಕಾಲ ರದ್ದುಗೊಳ್ಳುತ್ತವೆ. ನಿಯಂತ್ರಣಕ್ಕೊಳಪಡುತ್ತವೆ ಮತ್ತು ಮರುನಿಗದಿಗೊಳ್ಳುತ್ತವೆ ಎಂದು ತಿಳಿಸಿದೆ.
ರದ್ದುಪಡಿಸಲಾದ ರೈಲುಗಳು
- 57415 ಸಂಖ್ಯೆಯ ಗುಂತಕಲ್ – ಚಿಕ್ಕಜಾಜೂರು ಪ್ಯಾಸೆಂಜರ್ 2025 ಸೆಪ್ಟೆಂಬರ್ 2 ಮತ್ತು 2025ರ ಸೆಪ್ಟೆಂಬರ್ 9 ರಂದು ರದ್ದುಗೊಳ್ಳುತ್ತದೆ.
- 57416 ಸಂಖ್ಯೆಯ ಚಿಕ್ಕಜಾಜೂರು – ಗುಂತಕಲ್ ಪ್ಯಾಸೆಂಜರ್ 2025ರ ಸೆಪ್ಟೆಂಬರ್ 2 ಮತ್ತು 2025ರ ಸೆಪ್ಟೆಂಬರ್ 9 ರಂದು ರದ್ದುಗೊಳ್ಳುತ್ತದೆ.
ನಿಯಂತ್ರಿತ ಮತ್ತು ಮರುನಿಗದಿಪಡಿಸಲಾದ ರೈಲುಗಳು
- 57405 ಸಂಖ್ಯೆಯ ತಿರುಪತಿ – ಕದಿರಿದೇವರಪಳ್ಳಿ ಪ್ಯಾಸೆಂಜರ್ 2025ರ ಸೆಪ್ಟೆಂಬರ್ 1 ಮತ್ತು 2025ರ ಸೆಪ್ಟೆಂಬರ್ 8 ರಂದು ಮಾರ್ಗಮಧ್ಯದಲ್ಲಿ 60 ನಿಮಿಷ ನಿಯಂತ್ರಿಸಲಾಗುತ್ತದೆ.
- 57406 ಸಂಖ್ಯೆಯ ಕದಿರಿದೇವರಪಳ್ಳಿ – ತಿರುಪತಿ ಪ್ಯಾಸೆಂಜರ್ 2025ರ ಸೆಪ್ಟೆಂಬರ್ 2 ಮತ್ತು 2025ರ ಸೆಪ್ಟೆಂಬರ್ 9 ರಂದು ಕದಿರಿದೇವರಪಳ್ಳಿಯಿಂದ 60 ನಿಮಿಷ ಮರುನಿಗದಿಗೊಳಿಸಲಾಗುತ್ತದೆ ಎಂದು ತಿಳಿಸಿದೆ.
ಬೀರೂರು-ಶಿವಪುರ, ಬೀರೂರು-ತಾಳಗುಪ್ಪ ಹಾಗೂ ಬೀರೂರು-ನಾಗವಂಗಲ ಸ್ಟೇಷನ್‌ಗಳ ನಡುವೆ ಲೈನ್ ಮತ್ತು ವಿದ್ಯುತ್ ತಡೆ ಹಾಗೂ ಎನ್.ಎಚ್.-206 ರಲ್ಲಿ ಎನ್‌ಎಚ್‌ಎಐ ರಸ್ತೆ ಮೇಲ್ಸೇತುವೆಗೆ (ಆರ್.ಓ.ಬಿ) ಬೋಸ್ಟ್ರಿಂಗ್ ಗರ್ಡರ್ ಅಳವಡಿಸುವ ಕಾರ್ಯಕ್ಕಾಗಿ (ಎಲ್.ಸಿ ಸಂಖ್ಯೆ 128 ಮತ್ತು 2 ಬದಲಿಗೆ) ಕೆಳಕಂಡ ಕೆಲವು ರೈಲುಗಳು ರದ್ದುಗೊಳ್ಳುತ್ತವೆ, ನಿಯಂತ್ರಣಕ್ಕೊಳಪಡುತ್ತವೆ ಹಾಗೂ ಮರುನಿಗದಿಗೊಳ್ಳುತ್ತವೆ.
ಯಾವೆಲ್ಲಾ ರೈಲುಗಳ ಸಂಚಾರ ರದ್ದು?
- ರೈಲು ಸಂಖ್ಯೆ. 16567 ತುಮಕೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ 31 ಆಗಸ್ಟ್, 1, 8, 14 ಮತ್ತು 15 ಸೆಪ್ಟೆಂಬರ್ 2025 ರಂದು ರದ್ದು
- ರೈಲು ಸಂಖ್ಯೆ. 16568 ಶಿವಮೊಗ್ಗ ಟೌನ್ – ತುಮಕೂರು ಎಕ್ಸ್‌ಪ್ರೆಸ್ 1, 2, 9, 15 ಮತ್ತು 16 ಸೆಪ್ಟೆಂಬರ್ 2025 ರಂದು ರದ್ದು
- ರೈಲು ಸಂಖ್ಯೆ. 16214 ಎಸ್ಎಸ್ಎಸ್ ಹಬ್ಬಳ್ಳಿ – ಅರಸೀಕೆರೆ ಎಕ್ಸ್‌ಪ್ರೆಸ್ 8 ಸೆಪ್ಟೆಂಬರ್ 2025 ರಂದು ರದ್ದು
- ರೈಲು ಸಂಖ್ಯೆ. 16213 ಅರಸೀಕೆರೆ – ಎಸ್ಎಸ್ಎಸ್ ಹಬ್ಬಳ್ಳಿ ಎಕ್ಸ್‌ಪ್ರೆಸ್ 9 ಸೆಪ್ಟೆಂಬರ್ 2025 ರಂದು ರದ್ದು
- ರೈಲು ಸಂಖ್ಯೆ. 12089 ಕೆಎಸ್‌ಆರ್ ಬೆಂಗಳೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ 8 ಸೆಪ್ಟೆಂಬರ್ 2025 ರಂದು ರದ್ದು
- ರೈಲು ಸಂಖ್ಯೆ. 12090 ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ 9 ಸೆಪ್ಟೆಂಬರ್ 2025 ರಂದು ರದ್ದು
ಮರುನಿಗದಿಪಡಿಸಿದ ರೈಲುಗಳು
ರೈಲು ಸಂಖ್ಯೆ. 12090 ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಶಿವಮೊಗ್ಗ ಟೌನ್ ನಿಂದ 1, 2, 15 ಮತ್ತು 16 ಸೆಪ್ಟೆಂಬರ್ 2025 ರಂದು 75 ನಿಮಿಷ ತಡವಾಗಿ ಹೊರಡಲಿದೆ.
ರೈಲು ಸಂಖ್ಯೆ. 16213 ಅರಸೀಕೆರೆ – ಎಸ್ಎಸ್ಎಸ್ ಹಬ್ಬಳ್ಳಿ ಎಕ್ಸ್‌ಪ್ರೆಸ್ ಅರಸೀಕೆರೆಯಿಂದ 1, 2, 15 ಮತ್ತು 16 ಸೆಪ್ಟೆಂಬರ್ 2025 ರಂದು 45 ನಿಮಿಷ ತಡವಾಗಿ ಹೊರಡಲಿದೆ.
ನಿಯಂತ್ರಿತ ರೈಲುಗಳು
ರೈಲು ಸಂಖ್ಯೆ. 20652 ತಾಳಗುಪ್ಪ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ 9 ಸೆಪ್ಟೆಂಬರ್ 2025 ರಂದು ಮಾರ್ಗಮಧ್ಯದಲ್ಲಿ 75 ನಿಮಿಷ ನಿಯಂತ್ರಿಸಲಾಗುವುದು.
ರೈಲು ಸಂಖ್ಯೆ. 56272 ಚಿಕ್ಕಮಗಳೂರು – ಶಿವಮೊಗ್ಗ ಟೌನ್ ಪ್ಯಾಸೆಂಜರ್ 9 ಸೆಪ್ಟೆಂಬರ್ 2025 ರಂದು ಮಾರ್ಗಮಧ್ಯದಲ್ಲಿ 30 ನಿಮಿಷ ನಿಯಂತ್ರಿಸಲಾಗುವುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post