ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಾಗಸಮುದ್ರಂ ರೈಲ್ವೆ ನಿಲ್ದಾಣದಲ್ಲಿ ಹಾಲಿ ಇರುವ ಲೂಪ್ ಲೈನ್ (ರೋಡ್-3) ಅನ್ನು ಮುಖ್ಯ ಲೈನ್ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಮತ್ತು ಒಎಚ್’ಇ ಪೋರ್ಟಲ್’ಗಳನ್ನು #OHEPortal ಸ್ಥಳಾಂತರಿಸುವ ಕಾಮಗಾರಿಯಿಂದಾಗಿ ಕೆಲವು ದಿನಗಳ ಕಾಲ ಬೆಂಗಳೂರು-ಕಲಬುರಗಿ ಸೇರಿ ಹಲವು ವಂದೇ ಭಾರತ್ ಎಕ್ಸ್’ಪ್ರೆಸ್ ರೈಲುಗಳ ಸಂಚಾರದಲ್ಲಿ ವ್ಯತ್ಯಾಸ ಉಂಟಾಗಲಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ಜುಲೈ 2 ರಿಂದ ಜುಲೈ 28 ರವರೆಗೆ 27 ದಿನಗಳ ಕಾಲ ಲೂಪ್ ಲೈನ್ ಅನ್ನು ಸ್ಥಗಿತಗೊಳಿಸಲಾಗುವುದು. ಈ ಕಾಮಗಾರಿಯ ಹಿನ್ನೆಲೆಯಲ್ಲಿ, ಕೆಳಗಿನ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲುಗಳ ಮಾರ್ಗವನ್ನು ಈ ಕೆಳಗಿನಂತೆ ಬದಲಾಯಿಸಲಾಗುತ್ತಿದೆ.
1. ರೈಲು ಸಂಖ್ಯೆ 22231 ಕಲಬುರಗಿ – ಎಸ್’ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್’ಪ್ರೆಸ್ (ಶುಕ್ರವಾರ ಹೊರತುಪಡಿಸಿ) ಅನಂತಪುರ, ಧರ್ಮಾವರಂ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ ಮತ್ತು ಯಲಹಂಕ ಮಾರ್ಗವಾಗಿ ಸಂಚರಿಸಲಿದೆ.
2. ರೈಲು ಸಂಖ್ಯೆ 20703 ಕಾಚೇಗುಡ – ಯಶವಂತಪುರ ವಂದೇ ಭಾರತ್ ಎಕ್ಸ್’ಪ್ರೆಸ್ (ಬುಧವಾರ ಹೊರತುಪಡಿಸಿ) ಧರ್ಮಾವರಂ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ.
3. ರೈಲು ಸಂಖ್ಯೆ 22232 ಎಸ್’ಎಂವಿಟಿ ಬೆಂಗಳೂರು – ಕಲಬುರಗಿ ವಂದೇ ಭಾರತ್ ಎಕ್ಸ್’ಪ್ರೆಸ್ (ಗುರುವಾರ ಹೊರತುಪಡಿಸಿ) ಯಲಹಂಕ, ಪೆನುಕೊಂಡ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಧರ್ಮಾವರಂ ಮತ್ತು ಅನಂತಪುರ ಮಾರ್ಗವಾಗಿ ಸಂಚರಿಸಲಿದೆ.
ಮಾರ್ಗ ಬದಲಾವಣೆಯ ಅವಧಿಯಲ್ಲಿ, ಮೇಲೆ ತಿಳಿಸಿದ ಯಾವುದೇ ರೈಲುಗಳ ನಿಲುಗಡೆಗಳನ್ನು ಬಿಟ್ಟು ಬಿಡುವುದಿಲ್ಲ. ಎಲ್ಲಾ ನಿಗದಿತ ನಿಲುಗಡೆಗಳನ್ನು ನಿರ್ವಹಿಸಲಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post