ವಾಷಿಂಗ್ಟನ್: ಅವನೊಬ್ಬ ಹೇಡಿ… ಅಮೆರಿಕಾದ ವಿಶೇಷ ಪಡೆಗಳ ದಾಳಿಯ ವೇಳೆ ಬಾಂಬ್ ಸ್ಪೋಟಿಸಿಕೊಂಡು ತನ್ನ ಕುಟುಂಬದೊಂದಿಗೆ ಬೀದಿ ನಾಯಿಯಂತೆ ಸತ್ತಿದ್ದಾನೆ ಎಂದು ಮೋಸ್ಟ್ ವಾಂಟೆಡ್ ಉಗ್ರ ಬಾಗ್ದಾದಿ ಸಾವಿಗೆ ಸಂಬಂಧಿಸಿದಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಐಸಿಸಿ ನಾಯಕ ಅಬೂಬಕರ್ ಅಲ್ ಬಾಗ್ದಾದಿ ಓರ್ವ ಹೇಡಿ. ಭಯೋತ್ಪಾದಕ ನಾಯಕ ತನ್ನ ಮೂವರು ಮಕ್ಕಳನ್ನು ಸೇರಿಕೊಂಡು ಆತ್ಮಾಹುತಿ ಬಾಂಬ್’ಗೆ ಬಲಿಯಾಗಿದ್ದಾನೆ. ಅಮೆರಿಕಾ ಸೇನೆ ದಾಳಿಯ ವೇಳೆ ತಾನೇ ಆತ್ಮಾಹುತಿ ದಾಳಿ ನಡೆಸಿಕೊಂಡು ಬಾಗ್ದಾದಿ ಸಾವಿಗೆ ಶರಣಾಗುವ ಮೂಲಕ ನಾಯಿಯಂತೆ ಸತ್ತಿದ್ದಾನೆ. ವಾಯುವ್ಯ ಸಿರಿಯಾದಲ್ಲಿ ನಡೆದ ಮಾರಕ ದಾಳಿಯ ವೇಳೆ ವಿಶ್ವದ ನಂಬರ್ ಒನ್ ಭಯೋತ್ಪಾದಕ ಅಂತ್ಯವಾಗಿದೆ ಎಂದು ಟ್ರಂಪ್ ಅಧಿಕೃತವಾಗಿ ಘೋಷಿಸಿದರು.
Last night, the United States brought the world’s number one terrorist leader to justice. President @realDonaldTrump addresses the death of Abu Bakr al-Baghdadi, the founder and leader of ISIS. Full remarks: https://t.co/3ucibNVOU8 | More: https://t.co/b4fBx9qyY6 pic.twitter.com/odrheyNRtc
— Department of State (@StateDept) October 27, 2019
Get In Touch With Us: info@kalpa.news Whatsapp: 9481252093
Discussion about this post