ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದಲ್ಲಿ ರೈಲ್ವೆ ಪ್ರಯಾಣವನ್ನು ಮತ್ತಷ್ಟು ಪ್ರಯಾಣಿಕ ಸ್ನೇಹಿಗೊಳಿಸುವ ನಿಟ್ಟಿನಲ್ಲಿ ಏಳು ಹೈಸ್ಪೀಡ್ ರೈಲು ಮಾರ್ಗವನ್ನು ಘೋಷಣೆ ಮಾಡಲಾಗಿದೆ.
ಈ ಕುರಿತಂತೆ ಬಜೆಟ್ ಭಾಷಣದಲ್ಲಿ ಘೋಷಣೆ ಮಾಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ದೇಶದಲ್ಲಿ ಒಟ್ಟು 78 ಮಾರ್ಗಗಳನ್ನು ಹೈಸ್ಪೀಡ್ ರೈಲು ಮಾರ್ಗದ ಎಂದು ಘೋಷಣೆ ಮಾಡುತ್ತಿದ್ದೇವೆ. ಇದರಿಂದಾಗಿ ವೇಗ ಸಂಪರ್ಕದೊಂದಿಗೆ ಅಭಿವೃದ್ಧಿಗೂ ಸಹ ಸಹಕಾರಿಯಾಗಲಿದೆ ಎಂದರು.
ಎಲ್ಲೆಲ್ಲಿ ಹೈಸ್ಪೀಡ್ ರೈಲು ಮಾರ್ಗ?
- ಬೆಂಗಳೂರು-ಹೈದರಾಬಾದ್
- ಬೆಂಗಳೂರು-ಚೆನ್ನೈ
- ಮುಂಬೈ-ಪುಣೆ
- ಪುಣೆ-ಹೈದರಾಬಾದ್
- ಹೈದರಾಬಾದ್-ಚೆನ್ನೈ
- ನವದೆಹಲಿ-ವಾರಣಾಸಿ
- ವಾರಣಾಸಿ-ಸಿಲಿಗುರಿ
ಕರ್ತವ್ಯ ಭವನದ ಮೊದಲ ಬಜೆಟ್
ಕರ್ತವ್ಯ ಭವನದಲ್ಲಿ ಸಿದ್ದಗೊಂಡ ಮೊಟ್ಟ ಮೊದಲ ಬಜೆಟ್ ಇದಾಗಿದ್ದು, ನಮ್ಮ ಕರ್ತವ್ಯಕ್ಕೆ ಈ ಭವನ ಪ್ರೇರಣೆ ನೀಡಿದೆ. 2026 ಬಜೆಟ್ ಯುವಶಕ್ತಿಯ ಬಜೆಟ್ ಆಗಿದೆ. ಜನಸೇವೆಯನ್ನೇ ಕರ್ತವ್ಯ ಎಂದು ತಿಳಿದು ಈ ಬಜೆಟ್ ಸಿದ್ದಪಡಿಸಿದ್ದೇವೆ. ನಾವು 12 ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡಾಗಿನಿಂದ. ಭಾರತದ ಆರ್ಥಿಕ ಪಥವು ಸ್ಥಿರತೆಯಿಂದ ಗುರುತಿಸಲ್ಪಟ್ಟಿದೆ ಎಂದರು.
ವಿತ್ತ ಸಚಿವರು ಹೇಳಿದ ಮೂರು ಕರ್ತವ್ಯಗಳು:
ಕರ್ತವ್ಯ-1 : ಉತ್ಪಾದನೆ ಹೆಚ್ಚಳ
ಕರ್ತವ್ಯ -2 : ಜನರ ಆಶೋತ್ತಗಳನ್ನು ಈಡೇರಿಸುವುದು
ಕರ್ತವ್ಯ-3 : ಸಬ್ ಕಾ ಸಾಥ್ ಸಬ್ ಕಾ ವಿಕಾಸ್
ಸರ್ಕಾರವು ಅಭಿವೃದ್ಧಿ ಹೊಂದಿದ ಭಾರತದತ್ತ ಹೆಜ್ಜೆ ಇಡಲು ಬಲವಾದ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ. ಭಾರತವು ಜಾಗತಿಕ ಮಾರುಕಟ್ಟೆಯೊಂದಿಗೆ ಆಳವಾಗಿ ಸಂಯೋಜಿಸಲ್ಪಡುತ್ತದೆ ಎಂದರು.
ವಿಶ್ವದ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದನ್ನಾಗಿ ಮಾಡಿದ ಈ ದೇಶದ ನಾಗರಿಕರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮೂಲಕ ನಾನು ಭಾಗ ಅ ಅನ್ನು ಪ್ರಾರಂಭಿಸಲು ಬಯಸುತ್ತೇನೆ. ರೈತರು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು, ಯುವಕರು, ಮಹಿಳೆಯರು ಮತ್ತು ಬಡವರು ಪ್ರಯೋಜನ ಪಡೆಯುವುದನ್ನು ನಾವು ಖಚಿತಪಡಿಸಿಕೊಂಡಿದ್ದೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















