ಶ್ರೀನಗರ: ಕಳೆದ ಒಂದು ವಾರದಿಂದ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆ ನಿನ್ನೆ ರಾತ್ರಿಯಿಂದ ಮತ್ತೊಂದು ತಿರುವನ್ನು ಪಡೆದುಕೊಂಡಿದ್ದು, ಮಾಜಿ ಸಿಎಂಗಳಾದ ಮೆಹಬೂಬಾ ಮುಫ್ತಿ ಹಾಗೂ ಓಮರ್ ಅಬ್ದುಲ್ಲಾ ಅವರುಗಳನ್ನು ಗೃಹಬಂಧನದಲ್ಲಿರಿಸಲಾಗಿದೆ.
ಅಲ್ಲದೇ, ಇಡಿಯ ರಾಜ್ಯಕ್ಕೆ ಆಗಮಿಸಿರುವ ಎಲ್ಲ ಪ್ರವಾಸಿಗರೂ ಸಹ ತತಕ್ಛ್ಷಣವೇ ರಾಜ್ಯವನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿರುವ ಕಾಶ್ಮೀರ ಪೊಲೀಸರು ಅಲ್ಲಿನ ಪ್ರತಿಯೊಂದು ಹೊಟೇಲ್, ಲಾಡ್ಜ್, ರೆಸ್ಟೋರೆಂಟ್, ಪ್ರವಾಸಿಕೇಂದ್ರಗಳಿಗೆ ತೆರಳಿ ಅಲ್ಲಿರುವ ಪ್ರವಾಸಿಗರಿಗೆ ರಾಜ್ಯವನ್ನು ತೊರೆಯುವಂತೆ ಸೂಚನೆ ನೀಡುತ್ತಿದ್ದಾರೆ.
ಇನ್ನು, ಗೃಹಬಂಧನದಲ್ಲಿರಿಸಿರುವ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಒಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಅವರುಗಳು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ತಮ್ಮನ್ನು ಮಧ್ಯರಾತ್ರಿಯಿಂದ ಗೃಹಬಂಧನದಲ್ಲಿ ಇರಿಸಲಾಗಿದೆ. ಇತರ ಮುಖಂಡರ ಬಂಧನಕ್ಕೂ ಪ್ರಕ್ರಿಯೆ ಆರಂಭವಾಗಿದೆ. ಇದು ನಿಜ ಎಂದು ತಿಳಿಯಲು ಅನ್ಯ ಮಾರ್ಗವಿಲ್ಲ, ಒಂದು ವೇಳೆ ನಿಜವಾಗಿದಲ್ಲಿ ಬೇರೊಂದು ಕಡೆಯಿಂದ ನಿಮ್ಮನ್ನು ಗೃಹ ಬಂಧನದಲ್ಲಿಡುವುದನ್ನು ನೋಡುತ್ತೇನೆ ಅಲ್ಲಾಹನು ನಮ್ಮನ್ನು ರಕ್ಷಿಸು ಎಂದು ಪ್ರತಿಕ್ರಿಯಿಸಿದ್ದಾರೆ.
ಕೊಂಚ ಭಯಮಿಶ್ರಿತ ವಿರೋಧಿ ಪ್ರತಿಕ್ರಿಯೆ ನೀಡಿರುವ ಮೆಹಬೂಬಾ ಮುಫ್ತಿ, ಇಂಟರ್’ನೆಟ್, ಮೊಬೈಲ್ ಪೋನ್ ಸೇವೆ ಕಡಿತದ ಬಗ್ಗೆ ವರದಿ ಕೇಳಿದ್ದೇನೆ. ಕರ್ಪ್ಯೂ ಜಾರಿ ಮಾಡಲಾಗುತ್ತಿದೆ. ನಾಳೆಗಾಗಿ ನಾವು ಏನನ್ನು ಕಾಯುತ್ತಿದ್ದೇವೆ ಎಂಬುದು ದೇವರಿಗೆ ಗೊತ್ತಿದೆ. ಇದು ಸಂಕಷ್ಟದ ಸಂದರ್ಭವಾಗಿದ್ದು, ಇದರ ವಿರುದ್ಧ ಒಟ್ಟಾಗಿ ಹೋರಾಟ ಮಾಡೋಣ ಎಂದಿದ್ದಾರೆ.
ಇನ್ನು, ಕಣಿವೆ ರಾಜ್ಯದಾದ್ಯಂತ ಬಂದೋಬಸ್ತನ್ನು ಬಿಗಿಗೊಳಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಜನಸಂಚಾರನವನ್ನು ನಿಷೇಧೀಸಲಾಗಿದೆ. ಇಂಟರ್’ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಹಲವು ಭಾಗಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp
Kalpa Media House | Manipal | Manipal Institute of Technology (MIT), Manipal, a constituent unit of Manipal Academy of Higher...
Read moreDetails
















