ನಮಸ್ಕಾರ ಓದುಗರೆ
ನಿಮ್ಮೆದುರು ಒಂದು ವಿಚಾರ ಪ್ರಸ್ತಾಪ ಮಾಡಲಿಚ್ಛಿಸುತ್ತೇನೆ. ಅದೇನೆಂದರೆ ಭಾರತ ಕ್ರಿಕೆಟ್ ತಂಡ ಯಾವದಾದರೂ ಪ್ರಶಸ್ತಿ ಗೆದ್ದರೆ ಇಡೀ ಒಂದು ವಾರ ಸುದ್ದಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆ ವಿಷಯ ಬಹುದೊಡ್ಡ ಮಟ್ಟಿಗೆ ಸದ್ದು ಮಾಡುತ್ತದೆ. ಮಾಡಲಿ ನನ್ನದೇನೂ ತಕರಾರಿಲ್ಲ. ಏಕೆಂದರೆ ಮಾಧ್ಯಮ ಅವರದ್ದು. ಅದು ಅವರಿಚ್ಛೆ. ಆದರೆ ಅದೇ ಸಾಧನೆ ವಿಶೇಷ ಚೇತನ ತಂಡ ಮಾಡಿದರೆ ಅದು ಜಾಸ್ತಿ ಸದ್ದು ಮಾಡುವುದೇ ಇಲ್ಲ. ಇದು ಬೇಸರದ ಸಂಗತಿ. ಇದು ವಿಶೇಷ ಚೇತನರಿಗೆ ನಮ್ಮ ದೇಶ ನೋಡುವ ದೃಷ್ಟಿಕೋನವನ್ನು ಬಿಂಬಿಸುತ್ತದೆ. ಕ್ರಿಕೆಟ್ ಹೊರತುಪಡಿಸಿ ಬೇರೆ ಕ್ರೀಡೆಗಳ ಸ್ಥಿತಿಯೂ ನಮ್ಮ ದೇಶದಲ್ಲಿ ವಿಭಿನ್ನವಾಗೇನೂ ಇಲ್ಲ.
ಯಾಕೆ ಈ ಮಾತು ಅಂದುಕೊಂಡಿರಾ? ಅದಕ್ಕೆ ಕಾರಣ ಇದೆ. ಅದುವೇ ಜಗದೀಶ್ ಪೂಜಾರಿ ಎನ್ನುವ ದೇಹದಾರ್ಢ್ಯಪಟು. ಹೌದು ದೇಹಧಾರ್ಢ್ಯ ಕ್ರೀಡೆಯಲ್ಲಿ ಹಲವು ಸಾಧನೆ ಮಾಡಿರುವ ಇವರು ಒಬ್ಬ ವಿಶೇಷ ಚೇತನ.
ಈಗಾಗಲೇ ವಿಶೇಷ ಚೇತನರ ವಿಭಾಗದ ದೇಹದಾರ್ಡ್ಯ ಸ್ಪರ್ಧೆಗಳಲ್ಲಿ ಜಿಲ್ಲಾ, ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ಸುಮಾರು ನಾಲ್ವತ್ತೆಂಟು ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆಲ್ಲುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ.

ಅಲ್ಲದೆ ಇವರಿಗೆ ಪ್ರಾಯೋಜಕರ ಕೊರತೆ ಕೂಡಾ ಇದೆ. ಯಾರಾದರೂ ಪ್ರಾಯೋಜಕರು ದೊರೆತಲ್ಲಿ ದೇಶಕ್ಕೆ ಇನ್ನಷ್ಟು ಕೀರ್ತಿ ದೊರೆಯುವ ಕಳಶದ ರೀತಿ ಕಂಗೋಳಿಸುತ್ತಾರೆ. ಇಲ್ಲಿ ನಾನು ಈ ಲೇಖನ ಬರೆಯುತ್ತಿರುವ ಉದ್ದೇಶ ಆರ್ಥಿಕ ಸಹಾಯ ಕೇಳುವುದಲ್ಲ. ಬದಲಾಗಿ ಅವರನ್ನು ಆರ್ಥಿಕವಾಗಿ ಸ್ವಾವಲಂಭಿ ಮಾಡುವುದಾಗಿದೆ. ಅರ್ಥಾತ್ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ಉದ್ಯೋಗ ನೀಡುವಂತೆ ಮಾಡುವುದಾಗಿದೆ.


ಇವರನ್ನು ಹಲವು ಸುದ್ದಿ ಮಾಧ್ಯಮಗಳು ಮತ್ತು ದಿನಪತ್ರಿಕೆಗಳು ಇವರನ್ನು ಸಂದರ್ಶನ ಮಾಡಿವೆ. ಮತ್ತು ಇವರು ಹಲವು ಬಾರಿ ಗಣ್ಯರನ್ನು ಭೇಟಿಯಾಗಿ ಉದ್ಯೋಗಕ್ಕೆ ಪ್ರಯತ್ನಿಸಿದ್ದರು. ಆದರೆ ಅವರ ಮಾತುಗಳು ಆಶ್ವಾಸನೆಗೆ ಮಾತ್ರ ಸೀಮಿತವಾಗಿವೆ.



Jagadish poojary
Adyar padav
Adyar post
Mangalore-575007
DK
Mob.9886638761







Discussion about this post