ಕಲ್ಪ ಮೀಡಿಯಾ ಹೌಸ್ | ಹೊಳೆಹೊನ್ನೂರು |
ಪಟ್ಟಣದಲ್ಲಿ ನಿನ್ನೆ ಒಂದೇ ದಿನ 11 ಮಂದಿಗೆ 11 ಮಂದಿಗೆ ಹುಚ್ಚು ಬೀದಿ ನಾಯಿಗಳು #StreetDog ಕಡಿದ ಪ್ರಕರಣ ವರದಿಯಾಗಿದೆ.
ಹೊಳೆಹೊನ್ನೂರು #Holehonnur ಪಟ್ಟಣ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಗರದ ಬಹುತೇಕ ವಾರ್ಡ್’ಗಳಲ್ಲಿ ಒಟ್ಟಾರೆಯಾಗಿ ನೂರಾರು ಬೀದಿನಾಯಿಗಳಿವೆ. ಹಲವು ದಿನಗಳಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿ ಪರಿಣಮಿಸಿದೆ.
ಪರಿಣಾಮವಾಗಿ ಸೋಮವಾರ ಒಂದೇ ದಿನ ವಯಸ್ಕ ಸಾರ್ವಜನಿಕರೂ ಹಾಗೂ ಮಕ್ಕಳೂ ಸೇರಿದಂತೆ 11 ಮಂದಿಗೆ ಕಡಿದಿದೆ.
ಸೋಮವಾರ ಮಧ್ಯಾಹ್ನ 12.30 ಒಳಗೆ ಒಟ್ಟಾರೆಯಾಗಿ ಪಟ್ಟಣದ ವ್ಯಾಪ್ತಿಯಲ್ಲಿ 11 ನಾಯಿ ಕಡಿತ #DogBite ಪ್ರಕರಣಗಳು ದಾಖಲಾಗಿವೆ. ಎಲ್ಲರಿಗೂ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಕುರಿತಂತೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದು, 2026ರ ಜನವರಿ 26 ರಂದು ಮದ್ಯಾಹ್ನ 12.30 ಗಂಟೆಯ ಒಳಗೆ 11 ನಾಯಿಕಡಿತದ ಪ್ರಕರಣಗಳು ದಾಖಲಾಗಿ ಎಲ್ಲಾ ನಾಯಿಕಡಿತಕ್ಕೆ ಒಳಗಾದವರಿಗೆ ಚಿಕಿತ್ಸೆಯನ್ನು ನೀಡಲಾಗಿರುತ್ತದೆ. ಸಾರ್ವಜನಿಕರು ನಾಯಿಯು ಹುಚ್ಚುನಾಯಿಯೆಂದು ತಿಳಿಸಿರುತ್ತಾರೆ. ಪ್ರಯುಕ್ತ ಸಾರ್ವಜನಿಕ ಹಿತದೃಷ್ಠಿಯಿಂದ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಈ ಕುರಿತಂತೆ ಮಾತನಾಡಿದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಆರ್. ಉಮೇಶ್, ಪಟ್ಟಣ ಪಂಚಾಯಿತಿಯಾಗಿ ಜನಪ್ರತಿನಿಧಿಗಳಿಲ್ಲದೆ ಬರೀ ಅಧಿಕಾರಿಗಳ ಆಡಳಿತವಿದೆ. ಅಧಿಕಾರಿಗಳು ಜನರ ಸಮಸ್ಯೆ ಆಲಿಸದೆ ಜನರ ಮಧ್ಯೆ ಬಾರದೆ ಅವರ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ ಎಂದು ದೂರಿದರು.
ಕುಡಿಯುವ ನೀರು, ಬೀದಿ ನಾಯಿಗಳ ಉಪಟಲ ಸೇರಿದಂತೆ ಇನ್ನು ಹತ್ತು ಹಲವಾರು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಅದಕ್ಕೆ ಸ್ಪಂಧಿಸದೆ ಬಂದ ಪುಟ ಹೋದಪುಟ್ಟ ಅಂದುಕೊಂಡು ಅಧಿಕಾರಿಗಳು ಕೆಲಸ ಮಾಡಿ ಮನೆಗೆ ಹೋಗುತ್ತಾರೆ. ನಮ್ಮ ಪಟ್ಟಣ ಪಂಚಾಯತ್ ಬಿಟ್ಟು ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಒಂದೇ ದಿನ ಇಷ್ಟೊಂದು ಮಂದಿಗೆ ಬೀದಿ ನಾಯಿಗಳು ಕಡಿದಿದೆ. ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಈ ಬೀದಿ ನಾಯಿಗಳನ್ನು ಸೆರೆ ಹಿಡಿಸಿ, ಅವರುಗಳಿಗೆ ದೂರದಲ್ಲಿ ಶೆಡ್ ಮಾಡಿ ಇರಿಸಬೇಕು. ಸಾರ್ವಜನಿಕರ ಜೀವಕ್ಕೆ ಮಾರಕವಾಗಿರುವ ಬೀದಿ ನಾಯಿಗಳಿಂದ ಮುಕ್ತಿ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















