ಕಲ್ಪ ಮೀಡಿಯಾ ಹೌಸ್ | ಹೊಳೆಹೊನ್ನೂರು |
ಇಲ್ಲಿನ ಶ್ರೀಮದುತ್ತರಾದಿ ಮಠದ ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದಂಗಳವರ Shri Sathyathma thirtharu Uttaradi Mutt ಮೂಲ ಸನ್ನಿಧಾನದಲ್ಲಿ ಶ್ರೀ ಸತ್ಯಾತ್ಮತೀರ್ಥರು ಕೈಗೊಂಡಿದ್ದ ತಮ್ಮ 28ನೆಯ ಚಾರ್ತುಮಾಸ್ಯ ವ್ರತವನ್ನು ನಿನ್ನೆ ಸಂಪನ್ನಗೊಳಿಸಿದ್ದಾರೆ.
ಹೊಳೆಹೊನ್ನೂರಿನ ಶ್ರೀಮಠದಲ್ಲಿ ಸುಮಾರು 80 ದಿನಗಳ ಕಾಲ ಸತ್ಯಾತ್ಮ ತೀರ್ಥಶ್ರೀಪಾದಂಗಳವರು ಚಾರ್ತುಮಾಸ್ಯ ಕೈಗೊಂಡಿದ್ದರು. ನಿನ್ನೆ ವ್ರತ ಮುಕ್ತಾಯಗೊಂಡಿದ್ದು, ಸತ್ಯಧರ್ಮ ತೀರ್ಥರ ಬೃಂದಾವನಕ್ಕೆ ಪೂಜೆ ಸಲ್ಲಿಸಿ, ಗುರುಗಳಿಗೆ ಸಮರ್ಪಣೆ ಮಾಡಿದರು. ಆನಂತರ ಶ್ರೀಗಳು ತಳ್ಳಿಕಟ್ಟೆಗೆ ತೆರಳಿ ಸಂಪನ್ನಗೊಳಿಸಿದ್ದಾರೆ.
80 ದಿನಗಳ ಕಾಲ ನಡೆದ ಐತಿಹಾಸಿಕ ಚಾರ್ತುಮಾಸ್ಯದ ಸಂದರ್ಭದಲ್ಲಿ ಸನ್ನಿಧಾನಕ್ಕೆ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿ ಶ್ರೀಗಳ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.
ಅತ್ಯಂತ ಪ್ರಮುಖವಾಗಿ ವ್ರತದ ಸಂದರ್ಭದಲ್ಲಿ ನಿರ್ಮಿಸಲಾಗಿದ್ದ ಮೂರು ಭವ್ಯ ಮಂಟಪದಲ್ಲಿ ಶ್ರೀಮೂಲರಾಮ ದೇವರ ಪೂಜೆ, ಶ್ರೀಸತ್ಯಧರ್ಮ ಮಹಾಸ್ವಾಮಿಗಳ ಮಹಾ ಆರಾಧನೆ, ನೂರಾರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನದಾನ, ಉಪನ್ಯಾಸ, ಭಜನೆ, ವೈದ್ಯಕೀಯ ಶಿಬಿರಗಳು, ಹೋಮ ಹವನಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.
80 ದಿನಗಳ ಕಾಲ ನಡೆದ ನೂರಾರು ಸ್ವಯಂ ಸೇವಕರು ಚಾರ್ತುಮಾಸ್ಯ ವ್ರತದ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದ್ದು, ಶ್ರೀಮಠ ಸರ್ವರಿಗೂ ಅಭಿನಂದನೆ ಸಲ್ಲಿಸಿದೆ.
Also read: ನೀವು ಹೈಸ್ಕೂಲ್ ವಿದ್ಯಾರ್ಥಿಗಳಾ? ಹಾಗಾದರೆ ರಾವ್ಸ್ ಅಕಾಡೆಮಿಯ ಈ ಅಭ್ಯಾಸ ಪುಸ್ತಕಗಳನ್ನು ನೀವು ಓದಲೇಬೇಕು
ಭಾವನಾತ್ಮಕ ಬೀಳ್ಕೊಡುಗೆ
ಇನ್ನು, 80 ದಿನಗಳ ಚಾರ್ತುಮಾಸ್ಯ ವ್ರತವನ್ನು ಸಂಪನ್ನಗೊಳಿಸಿ ಶ್ರೀಮಠದಿಂದ ಗುರುಗಳು ವಿಜಯಂಗೈಯ್ಯುವ ವೇಳೆ ಮಠದ ಆಪ್ತರು ಹಾಗೂ ಭಕ್ತರು ಅತ್ಯಂತ ಭಾವನಾತ್ಮಕವಾಗಿ ಬೀಳ್ಕೊಟ್ಟರು.
ಚಾರ್ತುಮಾಸ್ಯ ಸಂದರ್ಭದಲ್ಲಿ ವ್ರತದ ಯಶಸ್ಸಿಗಾಗಿ ಶ್ರಮಿಸಿ, ಗುರುಗಳೊಂದಿಗೆ ಎಲ್ಲ ಸೇವಾಕಾರ್ಯದಲ್ಲಿ ಭಾಗಿಯಾದ ಶಿಷ್ಯವರ್ಗ ಭಾವನಾತ್ಮಕವಾಗಿ ಬೀಳ್ಕೊಟ್ಟ ಕ್ಷಣಕ್ಕೆ ಶ್ರೀಮಠ ಸಾಕ್ಷಿಯಾಯಿತು.
ಸಾಕ್ಷಾತ್ ತಂದೆಯಂತೆ ತಮ್ಮ ಶಿಷ್ಯರನ್ನು ಸಲಹುವ ಗುರುಗಳೊಂದಿಗೆ ಶಿಷ್ಯವರ್ಗ ಅಕ್ಷರಶಃ ಮಕ್ಕಳಂತೆ ಭಾವನಾತ್ಮಕ ಬೆಸುಗೆ ಹೊಂದಿದ್ದಾರೆ. ಹೀಗಾಗಿ, ಗುರುಗಳು ತೆರಳುವ ವೇಳೆ ಶಿಷ್ಯರು ಚಿಕ್ಕಮಕ್ಕಳಂತೆ ಅಳುತ್ತಾ, ಭಕ್ತಿಪೂರ್ವಕವಾಗಿ ಬೀಳ್ಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post