ಕಲ್ಪ ಮೀಡಿಯಾ ಹೌಸ್ | ಹೊಳೆಹೊನ್ನೂರು |
ಶ್ರೀಮದುತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ತಮ್ಮ 28ನೆಯ ಚಾತುರ್ಮಾಸ್ಯ ವ್ರತವನ್ನು ಇಂದು ಕೈಗೊಂಡರು.
ತಮ್ಮ 28ನೆಯ ಚಾತುರ್ಮಾಸ್ಯ ವ್ರತ ಮಹೋತ್ಸವಕ್ಕಾಗಿ ಶ್ರೀ ಸತ್ಯಧರ್ಮ ತೀರ್ಥರ ಮೂಲ ಬೃಂದಾವನ ಸನ್ನಿಧಾನವಿರುವ ಹೊಳೆಹೊನ್ನೂರು ಕ್ಷೇತ್ರಕ್ಕೆ ನಿನ್ನೆ ಆಗಮಿಸಿದರು. ಗುರುಗಳ ಆಗಮನದ ಹಿನ್ನೆಲೆಯಲ್ಲಿ ಪಟ್ಟಣವನ್ನು ವಿದ್ಯುತ್ ದೀಪಾಲಂಕಾರ, ಬಾಳೆ ಕಂದುಗಳಿಂದ ಸಿಂಗರಿಸಲಾಗಿತ್ತು. ಬಸ್ ನಿಲ್ದಾಣದ ಬಳಿಯಲ್ಲಿ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಅದ್ದೂರಿಯಾಗಿ ಸಾವಿರಾರು ಭಕ್ತರು ಸ್ವಾಗತಿಸಿದರು.
ಶ್ರೀಮಠಕ್ಕೆ ತೆರಳಿದ ಗುರುಗಳು ಪ್ರಾಣದೇವರ ದರ್ಶನ ಪಡೆದು, ತಮ್ಮ ಪೂರ್ವ ಯತಿಗಳಾದ ಶ್ರೀ ಸತ್ಯಧರ್ಮ ತೀರ್ಥರ ದರ್ಶನ ಪಡೆದರು. ನಂತರ ದಿಗ್ವಿಜಯ ಮೂಲರಾಮ ದೇವರ ಮೂರ್ತಿಯುಳ್ಳ ಪೆಟ್ಟಿಗೆಗೆ ಮಂಗಳಾರತಿ ನೆರವೇರಿಸಿದರು.
ಚಾತುರ್ಮಾಸ್ಯ ವ್ರತ ಸಂಕಲ್ಪ
ಹೊಳೆಹೊನ್ನೂರಿನ ಶ್ರೀ ಸತ್ಯಧರ್ಮ ತೀರ್ಥರ ಮೂಲ ಬೃಂದಾವನ ಸನ್ನಿಧಾನದಲ್ಲಿ ಶ್ರೀ ಸತ್ಯಾತ್ಮತೀರ್ಥರು ದಶಮಿಯಾದ ಇಂದು ತಮ್ಮ 28ನೆಯ ಚಾತುರ್ಮಾಸ್ಯ ವ್ರತ ಸಂಕಲ್ಪವನ್ನು ನೆರವೇರಿಸಿದರು.
ಇಂದು ಮುಂಜಾನೆ ದಿಗ್ವಿಜಯ ಮೂಲರಾಮ ದೇವರ ಪೂಜೆ ನೆರವೇರಿಸಿದ ಗುರುಗಳು ತಮ್ಮ 28ನೆಯ ಚಾತುರ್ಮಾಸ್ಯ ವ್ರತವನ್ನು ಸಂಕಲ್ಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post