ಕಲ್ಪ ಮೀಡಿಯಾ ಹೌಸ್ | ಹೊಳೆಹೊನ್ನೂರು |
ನನ್ನ ಕೊಟ್ಟಿಗೆಯಲ್ಲಿ ನಾಲ್ಕು ಹಸುಗಳಿವೆ. ಅವುಗಳನ್ನು ಬೆಳಗ್ಗೆ 8-11 ಮತ್ತು ಸಂಜೆ 4-6 ಗಂಟೆಯವರೆಗೂ ಮೇಯಿಸುತ್ತೇನೆ. ಆದರೆ ಕಳೆದ ನಾಲ್ಕೈದು ದಿನಗಳಿಂದ ಹಸುಗಳು ಹಾಲು ನೀಡುತ್ತಿಲ್ಲ. ಹಾಲು ಕರೆಯಲು ಹೋದರೆ ನನಗೆ ಹಾಗೂ ನನ್ನ ಪತ್ನಿಗೆ ಜಾಡಿಸಿ ಒದೆಯುತ್ತಿವೆ. ಹೀಗಾಗಿ ಅವುಗಳನ್ನ ಸ್ಟೇಷನ್‌ಗೆ ಕರೆದುಕೊಂಡು ಬಂದು ನಾಲ್ಕು ಬುದ್ದಿ ಮಾತು ಹೇಳಿ, ಏನಿದು ಯೋಚನೆ ಮಾಡುತ್ತಿದ್ದೀರಾ…?
ಕೆಲವೊಮ್ಮೆ ತಲೆಕೆಟ್ಟು ಚಿಟ್ಟು ಹಿಡಿದಾಗ ಯಾರಿಗಾದರೂ ಏನ್ ಮಾಡ್ಬೇಕು ಅಂತಾ ಗೊತ್ತಾಗಲ್ಲ. ಇದೇ ರೀತಿ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ರೈತನೊಬ್ಬ ತಾನೇ ಸಾಕಿದ ಹಸುಗಳಿಂದ ಬೇಸತ್ತು ಹೋಗಿದ್ದ. ಬೆಳಗ್ಗೆಯಿಂದ ಸಂಜೆವರೆಗೂ ಊರೆಲ್ಲಾ ಮೇಯಿಸಿಕೊಂಡು ಬಂದರೂ ಹಸುಗಳು ಹಾಲು ಕೊಡ್ತಿಲ್ಲ ಏಕೆ ಅನ್ನೋದನ್ನ ಅರಿಯದ ರೈತ ಇದಕ್ಕಾಗಿ ಪೊಲೀಸ್ ಠಾಣೆಗೆ ಹೋಗಿ ಕಂಪ್ಲೇಂಟ್ ಬರೆದಿದ್ದಾನೆ. ಹಾಗೂ ಹಾಲು ಕೊಡುವಂತೆ ಮಾಡಬೇಕು ಎಂದು ದೂರು ನೀಡಿದ್ದಾನೆ.
ಈ ದೂರನ್ನ ಕೇಳಿದ ಪೊಲೀಸರು ಸ್ವಲ್ಪ ಮಂಡೆ ಬೆಚ್ಚ ಮಾಡಿಕೊಂಡಿದ್ದಾರೆ. ಆಮೇಲೆ, ರೈತನನ್ನ ಎದುರುಗಡೆ ಕೂರಿಸಿಕೊಂಡು, ಸಮಾಧಾನ ಮಾಡಿ, ಎಲ್ಲಾ ಸರಿಯಾಗುತ್ತೆ ಹೋಗಿ ಎಂದು ಬುದ್ದಿ ಮಾತು ಹೇಳಿ ಕಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post