ನವದೆಹಲಿ: ಭಾರೀ ನಿರೀಕ್ಷೆ ಹುಟ್ಟಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಕಡಿತಗೊಳಿಸಿದ್ದು, ಶೇ.0.25ರಷ್ಟು ಮೂಲ ಅಂಶದಲ್ಲಿ ಕಡಿತಗೊಳಿಸಿದ್ದು, ಇದರಿಂದಾಗಿ ಗೃಹ ಸಾಲ ಹಾಗೂ ಆಟೋ ಸಾಲಗಳ ಬಡ್ಡಿ ದರದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ.
ಈ ಕುರಿತಂತೆ ಆರ್’ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಆರು ಸದಸ್ಯರ ಮಾನಿಟರಿ ಪಾಲಿಸಿ ಕಮಿಟಿ ಈ ನಿರ್ಧಾರವನ್ನು ಕೈಗೊಂಡಿದ್ದು, ಇದರಂತೆ ಶೇ.6.25ರಷ್ಟಿದ್ದ ರೆಪೋ ದರ ಶೇ.6ಕ್ಕೆ ಇಳಿಕೆಯಾಗಿದೆ.
ಈ ಬೆಳವಣಿಗೆಯಿಂದ ಗೃಹ ಹಾಗೂ ವಾಹನ ಸಾಲದ ಮೇಲಿನ ಬಡ್ಡಿ ದರ ಹಾಗೂ ಇಎಂಐ ಕಡಿತವಾಗುವ ಸಾಧ್ಯತೆ ಹೆಚ್ಚಾಗಿದೆ.
ಈ ಹಿಂದೆ 2019-20ರ ಜಿಡಿಪಿ ದರವನ್ನು 7.2ರಷ್ಟು ನಿರೀಕ್ಷೆ ಮಾಡಲಾಗಿತ್ತು. ಆದರೆ, ಇಂದು ಈ ದರವನ್ನು 7.4ರಷ್ಟು ನಿರೀಕ್ಷೆ ಮಾಡಲಾಗಿದೆ.
ರಫ್ತು ಬೆಳವಣಿಗೆ ಜನವರಿ ಮತ್ತು ಫೆಬ್ರವರಿ 2019 ರಲ್ಲಿ ದುರ್ಬಲವಾಗಿದೆ. ಆದರೆ ವಿಶೇಷವಾಗಿ ತೈಲ ಆಮದು ಮಾಡಿಕೊಳ್ಳದ ಚಿನ್ನ ಆಮದು ಕುಸಿದಿದೆ. 2017-18ರ ಸಾಲಿಗೆ ಅಂದಾಜಿಸಲಾಗಿದ್ದ ಶೇ.6.6ರ ಜಿಡಿಪಿ ಬೆಳವಣಿಗೆಯನ್ನು ಆರ್‌ಬಿಐ ತನ್ನ ಹಣಕಾಸು ಪರಾಮರ್ಶೆ ವರದಿಯಲ್ಲಿ 2018-19ರ ಹಣಕಾಸು ವರ್ಷದಲ್ಲಿ ಶೇ.7.4ರ ಮಟ್ಟಕ್ಕೆ ಏರುವುದೆಂದು ಅಂದಾಜಿಸಿದೆ.
ಆರ್‌ಬಿಐ ತನ್ನ ಪ್ರಮುಖ ಬಡ್ಡಿ ದರವನ್ನು ನಿರಂತರ 2ನೆಯ ಬಾರಿಗೆ ಕಡಿತಗೊಳಿಸುತ್ತಿರುವುದು ಗಮನಾರ್ಹವಾಗಿದೆ. ಈ ಮೂಲಕ ಅದು ಕಳೆದ ಒಂದು ವರ್ಷದಲ್ಲಿ ತನ್ನ ಬಡ್ಡಿ ದರವನ್ನು ಕನಿಷ್ಠ ಮಟ್ಟಕ್ಕೆ ತಂದು ನಿಲ್ಲಿಸಿದೆ. ದೇಶದಲ್ಲಿನ ಹಣದುಬ್ಬರ ಮೃದುವಾಗುತ್ತಿರುವುದೇ ಇದಕ್ಕೆ ಕಾರಣವೆಂಬ ಸಮರ್ಥನೆಯನ್ನು ಅದು ನೀಡಿದೆ.
Discussion about this post