ಕಲ್ಪ ಮೀಡಿಯಾ ಹೌಸ್ | ಹೊನ್ನಾಳಿ |
ಕ್ಷೇತ್ರದ ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ರಾಜಿಯಿಲ್ಲದೇ ಹಗಲಿರುಳು ಶ್ರಮಿಸುತ್ತಾ ಜನಮಾನಸದಲ್ಲಿ ನೆಲೆಸಿರುವುದು ಮಾತ್ರವಲ್ಲ ಸರಳತೆಯಿಂದಲೂ ಹೆಸರುವಾಸಿಯಾಗಿರುವ ನಾಯಕ ಸಂಸದ ಬಿ.ವೈ. ರಾಘವೇಂದ್ರ. MPBYRagavendra
ಹೌದು… ಸಂಸದ ರಾಘವೇಂದ್ರ ಅವರು ಇಂದು ಶಿಕಾರಿಪುರದಲ್ಲಿ ಕಾರ್ಯಕರ್ತರ ಸಭೆ ಮುಗಿಸಿ ಹೊನ್ನಾಳಿ ಮಾರ್ಗವಾಗಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಪ್ರವಾಸಕ್ಕೆ ತೆರಳುತ್ತಿದ್ದರು. ಈ ವೇಳೆ ಹೊನ್ನಾಳಿ ಕಾರ್ಯಕರ್ತರು ಚಹಾ ಕುಡಿದು ಹೋಗಿ ಎಂದು ಪ್ರೀತಿಯಿಂದ ಆಹ್ವಾನ ನೀಡಿದರು.
ಕಾರ್ಯಕರ್ತರ ಪ್ರೀತಿಗೆ ಒಪ್ಪಿದ ರಾಘವೇಂದ್ರ ನೇರವಾಗಿ ಅಲ್ಲಿಯೇ ಇದ್ದ ಶ್ರೀ ಸತ್ಯನಾರಾಯಣ ಉಪಹಾರ ದರ್ಶಿನಿ ಎಂಬ ಸಣ್ಣ ಕ್ಯಾಂಟೀನ್’ಗೆ ತೆರಳಿದರು. ಕಾರ್ಯಕರ್ತರು ಮಾತ್ರವಲ್ಲ ಅಲ್ಲಿದ್ದ ಸಾರ್ವಜನಿಕರನ್ನೂ ಸಹ ಅತ್ಯಂತ ಆತ್ಮೀಯ ಹಾಗೂ ಪ್ರೀತಿಯಿಂದ ಕುಶಲೋಪರಿ ವಿಚಾರಿಸಿದ ಸಂಸದರು ಅವರೊಂದಿಗೆ ಚಹಾ ಸವಿದರು.
Also read: ಮೇಜರ್ ಹುದ್ದೆಗೆ ಪದೋನ್ನತಿ ಹೊಂದಬೇಕಿದ್ದ ರಾಜ್ಯ ವೀರ ಯೋಧ ಕ್ಯಾ. ಪ್ರಾಂಜಲ್ ಹುತಾತ್ಮ
ಪ್ರಧಾನಿಯವರಿಗೂ ಸಹ ಆಪ್ತರಾದ ರಾಘವೇಂದ್ರ ಅವರು ಶಿವಮೊಗ್ಗದಂತಹ ಪ್ರತಿಷ್ಠಿತ ಕ್ಷೇತ್ರದ ಸಂಸದರಾಗಿದ್ದರೂ ಯಾವುದೇ ಹಮ್ಮುಬಿಮ್ಮುಗಳಿಲ್ಲದೇ ಜನರೊಂದಿಗೆ ಸರಳವಾಗಿ ಬೆರೆಯುವುದನ್ನು ಕಂಡು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post