ಕಲ್ಪ ಮೀಡಿಯಾ ಹೌಸ್ | ಹೊನ್ನಾವರ |
ಇಲ್ಲಿನ ಗುಣವಂತೆಯಲ್ಲಿ ಇತ್ತೀಚೆಗೆ ನಡೆದ ಕವಿ ಜಾನಕೈ ತಿಮ್ಮಪ್ಪ ಹೆಗಡೆ ವಿರಚಿತ ನೂತನ ಪ್ರಸಂಗವಾದ ಸತ್ಯ ಹರಿಶ್ಚಂದ್ರ ಪೌರಾಣಿಕ ಯಕ್ಷಗಾನ ಪ್ರಸಂಗ ಸುಮಾರು ನಾಲ್ಕು ವರೆ ಗಂಟೆಗಳ ಕಾಲ ಮನೋಜ್ಞವಾಗಿ ಮೂಡಿ ಬಂದು, ಕಲಾರಸಿಕರ ಗಮನ ಸೆಳೆಯಿತು.
ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆಯಿಂದ ಹೊನ್ನಾವರ ತಾಲೂಕಿನ ಗುಣವಂತೆಯ ಕೆರೆಮನೆ ಶಂಭು ಹೆಗಡೆ ಬಯಲು ರಂಗಮAದಿರದಲ್ಲಿ ಹೊಸ ಹಾದಿಯಲ್ಲಿ ಈ ಪ್ರಸಂಗ ಸತ್ಯ ಹರಿಶ್ಚಂದ್ರ ಪ್ರದರ್ಶನಗೊಂಡಿತು.
ಈ ಪೌರಾಣಿಕ ಯಕ್ಷಗಾನ ಪ್ರಸಂಗದಲ್ಲಿ ಸತ್ಯ ಹರಿಶ್ಚಂದ್ರನಾಗಿ ಕೆರೆಮನೆ ಶಿವಾನಂದ ಹೆಗಡೆ, ತಿಮ್ಮಪ್ಪ ಹೆಗಡೆ ಶಿರಳಗಿ ನಕ್ಷತ್ರಿಕ ಹಾಗೂ ಈಶ್ವರನಾಗಿ, ಅನಂತ ಹೆಗಡೆ ನಿಟ್ಟೂರು ಪುರಜನ, ಅಗ್ನಿ ಬ್ರಾಹ್ಮಣನಾಗಿ, ಸುಬ್ರಹ್ಮಣ್ಯ ಹೆಗಡೆ ಮೂರೂರು ಚಂದ್ರಮತಿಯಾಗಿ, ಈಶ್ವರ ಭಟ್ಟ ಅಂಸಳ್ಳಿ ವಿಶ್ವಾಮಿತ್ರನಾಗಿ, ವಿಘ್ನೇಶ್ವರ ಹಾವಗೋಡಿ ದೇವೇಂದ್ರ ಹಾಗೂ ವೀರಭಾಹುಕನಾಗಿ, ಮಹಾವೀರ ಇಂದ್ರ ಜೈನ್ ಮತ್ತು ವಿನಾಯಕ ನಾಯ್ಕ ಮಾತಂಗ ಕನ್ಯೆಯಾಗಿ ಎನ್. ಚಂದ್ರಶೇಖರ ಮತ್ತು ನಕುಲಗೌಡ ಬಾಲಗೋಪಾಲರಾಗಿ, ಶ್ರೀಕೃಷ್ಣ ಮರಾಠಿ ವೀರಭಂಟರಾಗಿ ಶ್ರೀ ಗಣಪತಿ ಕುಣಬಿ ಪುರಜನ, ಬ್ರಹ್ಮ ಹಾಗೂ ಕುಮಾರ ಅಮರ ನಾಯ್ಕ ಲೋಹಿತಾಶ್ವನಾಗಿ ವೇಷಭೂಷಣ ಸಹಾಯಕರಾಗಿ ನಾಗರಾಜ ನಾಯ್ಕ ಸಹಕರಿಸಿದರು.
Also read: ಮತ್ತೆ ಅಪರಿಚಿತರ ಗುಂಡಿನ ದಾಳಿ | ಪಾಕಿಸ್ಥಾನದ ಡಾನ್ ಅಮೀರ್ ಟಿಪು ಫಿನಿಶ್ | ವೀಡಿಯೋ ನೋಡಿ
ಹಿಮ್ಮೇಳನದಲ್ಲಿ ಅನಂತ ಹೆಗಡೆ ದಂತಳಿಗೆ, ಮೂರುರು ನರಸಿಂಹ ಹೆಗಡೆ ಹಾಗೂ ರಾಮನ್ ಹೆಗಡೆ ಮೂರುರು ಸಹಕರಿಸಿದರು ಎಂದು ನಿರ್ದೇಶಕರಾದ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post