ಕಲ್ಪ ಮೀಡಿಯಾ ಹೌಸ್ | ಹೊನ್ನಾವರ |
ಭಾಗವತ ಘರಾಣೆಯ ಪ್ರವೀಣ ಸುಬ್ರಾಯ ಭಾಗವತರು ಪರಿಪೂರ್ಣತೆ ಹೊಂದಿರುವ ಕಲಾವಿದರು ಎಂದು ಡಾ.ಜಿ.ಕೆ. ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಎರಡನೆಯ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾಗವತಿಕೆಯಲ್ಲಿ ಪರಿಪೂರ್ಣತೆ ಇರುವ ಇವರು ಚಂಡೆ, ಮದ್ದಳೆ ವಾದನ ಮತ್ತು ನೃತ್ಯ ಶೈಲಿಯಲ್ಲೂ ಅವರ ಪಾಂಡಿತ್ಯವನ್ನು ಕೊಂಡಾಡಿದರು.
ಶ್ರೀ ಗಜಾನನ ಹೆಗಡೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುಬ್ರಾಯ ಭಾಗವತ ಕಪ್ಪೆಕೆರೆಯವರು, ಪರಂಪಾರಗತ ಭಜನೆ ಮಾಡುವುದರಿಂದ ಆರಂಭಗೊಂಡ ನನ್ನ ಕಲಾ ಸೇವೆ ಇಡಗುಂಜಿ ಮೇಳದ ಸಂಪರ್ಕದಿಂದ ಭಾಗವತಿಕೆಯನ್ನು ಬದ್ಧತೆಯಲ್ಲಿ ಸ್ವೀಕರಿಸಿ, ಶಿಸ್ತು ಬದ್ಧವಾಗಿ ಅಧ್ಯಯನ ಮಾಡಿ, ಸಮಾಜ ಗುರುತಿಸಿ, ಗಜಾನನ ಹೆಗಡೆ ವೇದಿಕೆಯಲ್ಲಿ ಅವರ ಹೆಸರಿನಲ್ಲಿ ಇರುವ ಪ್ರಶಸ್ತಿ ಸ್ವೀಕಸುವ ಭಾಗ್ಯ ಬಂದದ್ದು ನನ್ನ ಕಲಾ ಸೇವೆಯ ಪಥದ ಅನನ್ಯತೆಯ ಸಂಕೇತ ಎಂದರು.
ಕಲಾವಿದರು ಸಮಾಜದ ಸ್ವತ್ತಾಗಿದ್ದರೂ, ಪ್ರೇಕ್ಷಕರ ಬದಲಾದ ಭಾವ ತರಂಗಗಳಿಗೆ ಸಮೀಕರಿಸುವ ಕಲಾಭಿನಯ ಪರಂಪರೆಗೆ ತೊಡಕಾಗಿ ಶಾಸ್ತ್ರೀಯತೆಗೆ ಭಂಗ ಬರುವ ಸಾಧ್ಯತೆ ಕಾಣುತ್ತಿದೆ ಎಂಬ ಎಚ್ಚರಿಕೆಯ ಅಭಿಪ್ರಾಯಪಟ್ಟರು.
ನಾಟ್ಯೋತ್ಸವದ ಕಾರ್ಯಾಧ್ಯಕ್ಷರಾದ ಶ್ರೀಲಕ್ಷ್ಮೀ ನಾರಾಯಣ ಕಾಶಿಯವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಭಾಧ್ಯಕ್ಷರಾದ ಎಂ.ಕೆ. ಭಾಸ್ಕರ ರಾವ್ ಮತ್ತು ಅಭ್ಯಾಗತರೆಲ್ಲರೂ ಸೇರಿ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.
ಯಕ್ಷಗಾನ ಸಂಶೋಧಕ ಡಾ.ಪಾದೇಕಲ್ಲು ವಿಷ್ಣು ಭಟ್, ಸಾಹಿತಿಗಳಾದ ಎಲ್.ಆರ್. ಭಟ್, ಸುಮುಖಾನಂದ ಜಳವಳ್ಳಿ, ಮದ್ದಲೆ ವಾದಕರಾದ ಮಂಜುನಾಥ ಭಂಡಾರಿ ಅವರನ್ನು ಸನ್ಮಾನಿಸಲಾಯಿತು.
ಪೋಕ್ ಲ್ಯಾಂಡ್ ಅಧ್ಯಕ್ಷ ಡಾ.ವಿ. ಜಯರಾಜನ್, ನಾರಾಯಣ ಯಾಜಿ ಮಾತನಾಡಿದರು. ಶಿವಾನಂದ ಹೆಗಡೆ ವಂದಿಸಿ, ಬಿ.ಎಂ. ಭಟ್, ಸುಧೀಶ್ ನಾಯ್ಕ್, ಎಲ್.ಎಂ. ಹೆಗಡೆ ಕೆರೆಮನೆ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜ್ಯೋತಿ ಹೆಗಡೆ, ಶಿರಶಿ ಅವರು ರುದ್ರವೀಣೆಯನ್ನು ಪ್ರಸ್ತುತ ಪಡಿಸಿದರು. ಗುರುಮೂರ್ತಿ ವೈದ್ಯ ಅವರು ಪಖವಾಜ್’ದಲ್ಲಿ ಸಾಥ್ ನೀಡಿದರು. ಫೋಕ್ ಲ್ಯಾಂಡ್ ಕೇರಳ, ಕರಿವೆಲ್ಲೂರ್ ರತ್ನಕುಮಾರ್ ಮತ್ತು ತಂಡದವರಿಂದ ಒಟ್ಟನ್ ತುಳ್ಳಾಲ್ ಮತ್ತು ಶೀತಂಕನ್ ತುಳ್ಳಾಲ್ ನೃತ್ಯ ಮನೋಜ್ಞವಾಗಿ ಪ್ರದರ್ಶಿಸಲ್ಪಟ್ಟಿತು. ನೃತ್ಯ ನಿಕೇತನ , ಕೊಡವೂರು ತಂಡದವರಿಂದ ನಾರಸಿಂಹ (ಒಳಿತಿನ ವಿಜಯದ ಕಥನ) ನೃತ್ಯ ರೂಪಕವು ಪ್ರದರ್ಶಿಸಲ್ಪಟ್ಟಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post