ಶಿವಮೊಗ್ಗ: ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘವು ಮಾರ್ಚ್ 11ರಂದು ಸಂಜೆ 6ಗಂಟೆಗೆ ಶಿವಮೊಗ್ಗ ವಿನೋಬನಗರದ ಶಿವಾಲಯದ ಆವರಣದಲ್ಲಿ ವೀರಯೋಧರಿಗೆ ಗೌರವ ಸಮರ್ಪಣಾ ಸಮಾರಂಭವನ್ನು ಏರ್ಪಡಿಸಿದೆ.
ಈ ಕಾರ್ಯಕ್ರಮಕ್ಕೆ ನಿವೃತ್ತ ಏರ್‌ವೇಸ್ ಮಾರ್ಷಲ್ ಡಾ॥ಆರ್.ಎಸ್. ವಸಂತಕುಮಾರ್ ಅವರು ಚಾಲನೆ ನೀಡುವರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶೇಖರ್ ಎಚ್.ಟೆಕ್ಕನ್ನವರ್, ಉಪವಿಭಾಗಾಧಿಕಾರಿ ಪ್ರಕಾಶ್ ಟಿ.ವಿ., ರಾಜ್ಯ ಲೆಖ್ಖ-ಪತ್ರ(ನಿ) ಜಾಯಿಂಟ್ ಕಂಟ್ರೋಲರ್ ಡಾ.ಎಚ್.ಎಂ. ನಟರಾಜ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು.
ಭಾರತೀಯ ಭೂಸೇನೆಯ ನಿವೃತ್ತ ಕರ್ನಲ್ ರಾಮಚಂದ್ರ, ಭಾರತೀಯ ನೌಕಾಪಡೆಯ ನಿವೃತ್ತ ಕಮಾಂಡರ್ ಬಿ.ಮಂಜುನಾಥ್ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿರುವರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಿ.ವಿ. ಕೃಷ್ಣಾರೆಡ್ಡಿ ಉಪಸ್ಥಿತರಿರುವರು. ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘದ ಅಧ್ಯಕ್ಷ ಪಿ.ಒ. ಶಿವಕುಮಾರ್ ಅಧ್ಯಕ್ಷತೆ ವಹಿಸುವರು.
ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಯುದ್ಧ ಸನ್ನಿವೇಶಗಳ ವಿಡಿಯೋ ಚಿತ್ರಪ್ರದರ್ಶನ, ದೇಶಭಕ್ತಿಗೀತೆಗಳ ಗಾಯನ ಹಾಗೂ ಸೇನಾ ಸೇವೆಯ ಅನುಭನ ಕಥನಗಳನ್ನು ಕೇಳಬಹುದಾಗಿದೆ.
(ವರದಿ: ಡಾ.ಸುಧೀಂದ್ರ)
Discussion about this post