ಹಿಂದಿನ ಕಾಲದಲ್ಲಿ ಒಂದು ಗಾದೆ ಮಾತು ಇತ್ತು. ‘ಲಾಭ ಇಲ್ಲದೆ ಸೆಟ್ಟಿ ಹೊಳೆಗೆ ಹಾರಲ್ಲ’ ಎಂದು. ಅದೇ ರೀತಿ ಪ್ರಿಯಾಂಕ ಗಾಂಧಿಯ ರಾಜಕೀಯ ಪ್ರವೇಶವೂ ಆಗಿದೆ.
ಜನ ನಾಯಕರು ಆಗುವವರು ತಮ್ಮ ಇಡೀ ಜೀವನವನ್ನೇ ದೇಶಕ್ಕೆ ಅರ್ಪಿಸಿರುತ್ತಾರೆ. ಆದರೆ ಈ ಪ್ರಿಯಾಂಕ ಹನ್ನೆರಡು ವರ್ಷಕ್ಕೊಮ್ಮೆ ಹೂ ಬಿಡುವ ಮರದಂತೆ. ನಾವು ಪ್ರೈಮರಿ ಶಾಲೆಗೆ ಹೋಗುವಾಗ ಯಾವುದೋ ಕೆಲ ದಡ್ಡ ಪೋಲಿ ಹುಡುಗರು ಅಮವಾಸ್ಯೆಗೊಮ್ಮೆ, ಹುಣ್ಣಿಮೆಗೊಮ್ಮೆ ಶಾಲೆಯ ಮುಖ ನೋಡಿದರೆ ಮೇಷ್ಟ್ರು ಏನೋ ಅಮಾಸೇ?’ ಅಂತ ತಮಾಷೆ ಮಾಡ್ತಿದ್ರು. ಆದರೆ ಕೋಪಗೊಳ್ಳುತ್ತಿರಲಿಲ್ಲ. ಯಾಕೆಂದರೆ ಶಾಲೆಯ ನಿತ್ಯ ಸ್ವಚ್ಛತೆಯ ಕೆಲಸದಲ್ಲಿ ಅವನನ್ನು ಹುರಿದುಂಬಿಸಿ ಕೆಲಸ ಮಾಡಿಸಲು ಸುಲಭ ಎಂದು ಮೇಷ್ಟ್ರ ಚಿಂತನೆ.
ಈ ಪ್ರಿಯಾಂಕ ಈಗ ರಾಜಕೀಯಕ್ಕೆ ಬಾರದೇ ಉಪಾಯವಿಲ್ಲದಂತಾಗಿದೆ. ಗಂಡ ವಾದ್ರಾನ ಕಿತಾಪತಿಗಳು ಅಷ್ಟಿವೆ. ಒಂದು ವೇಳೆ ಇವಳು ರಾಜಕೀಯದಲ್ಲಿ ಆಸಕ್ತಿ ತೋರಿಸದೆ ಇದ್ದರೆ ಅಷ್ಟೂ ಕರ್ಮಕಾಂಡಗಳಿಗೆ ಸ್ವತಃ ಅವರ ಪಕ್ಷವೇ ಬೆಂಬಲ ನೀಡಲ್ಲ. ಯಾವಾಗ ರಾಜಕೀಯ ಪ್ರವೇಶ ಆಯಿತೋ ಆಗ ಕಾಂಗ್ರೆಸ್ಸಿಗರು ಇವಳ ಹೆಡ್ಡತನ, ತಿಳುವಳಿಕೆ ರಹಿತ ನಾಯಕತ್ವಗಳನ್ನು ಮುಚ್ಚಿ ಹಾಕಲು ಇಲ್ಲ ಸಲ್ಲದ ಮಹಾ ಪಟ್ಟ ನೀಡಬೇಕಾಗುತ್ತದೆ.
ಅಜ್ಜಿ ಇಂದಿರಾಗಾಂಧಿಯವರ ತದ್ರೂಪ ಎಂದು ಅದೇ ರೀತಿಯ Hair Style, ವಸ್ತ್ರ ವಿನ್ಯಾಸಗಳನ್ನು ಮಾಡಿ’ ಇದು ಮತ್ತೆ ಇಂದಿರಾಜೀಯವರ ಕನಸನ್ನು ನನಸಾಗಿಸಲು ಬಂದಂತಹ ಅವರ ದಿವ್ಯಾತ್ಮ’ ಎಂದು ಭೋ ಪರಾಕ್ ಹಾಡಬೇಕಾದ ದುಸ್ಥಿತಿ ಬಂದದ್ದಾಗಿದೆಯೇ ಹೊರತೂ, ನೈಜ ಭಕ್ತಿಯೇನಲ್ಲ.
ಈ ಪ್ರಿಯಾಂಕ ಪ್ರವೇಶ ಏನು ಮಾಡಬಹುದು ಎಂದು ರಾಜ ಮುತ್ಸದಿಗಳು ಯೋಚಿಸಿದರೆ, ಜೋತಿಷ್ಯ ರೀತಿಯು ಹೇಗಿದೆ ಎಂದು ನೋಡೋಣ.
ಆಲಸ್ಯ, ಐಷಾರಾಮಿತ್ವದ ಹೆಂಗಸು:
ಮೊದಲಾಗಿ ಇವರ ಜಾತಕ ರೀತಿಯ ಮನೋಭಾವನೆಗಳು ಹೇಗಿವೆ ನೋಡೋಣ. ಅವಸರದ ಸ್ವಭಾವ, ಶಿಸ್ತು ಜಾಸ್ತಿ, ತಾಳ್ಮೆ ಕಡಿಮೆ, ಆಲಸ್ಯ ಐಷಾರಾಮಿತ್ವ, ವಿಪರೀತ ನಿದ್ದೆ, ಆತಂಕ ಸ್ವಭಾವ(Anxiety), ಮೌನ, ಈಗೊ ಇತ್ಯಾದಿ ಸ್ವಭಾವಗಳಿರುವ ಹೆಂಗಸು.
ಇವರಿಗೆ ವೃಷಭದಲ್ಲಿ ಶನಿಯು ಪ್ರಥಮ ದ್ರೇಕ್ಕಾಣದಲ್ಲಿ ಇರುವುದರಿಂದ ಸ್ವಲ್ಪ Revolutionary Mentality ಯೂ ಇದೆ. ಆದರೆ ಯಾವುದಕ್ಕೆ, ಯಾವಾಗ ಎಂಬ ವಿಚಾರ ತಿಳಿದುಕೊಂಡು ವ್ಯವಹರಿಸಿದರೆ ಕ್ಷೇಮ. ಇದು ಇವರಲ್ಲಿ ಕಾಣುವುದಿಲ್ಲ. ಅಂದರೆ ಇಂತಹ ಪ್ರವೃತ್ತಿ ವಿವಾದಗಳನ್ನು ಸೃಷ್ಟಿಸಬಹುದು. ಇವರ ಜಾತಕದಲ್ಲಿನ ಕರ್ಮ ಸ್ಥಾನದ ಕೇತು ಕರ್ಮಾಸಕ್ತಿಗೆ ಮಾರಕ. ಅಂದರೆ Laziness ತರುತ್ತಾನೆ. ಇಂತಹ ಒಂದು ಗುಣವುಳ್ಳ ವ್ಯಕ್ತಿಯು ಪರಂಪರೆಯುಳ್ಳ ಕಾಂಗ್ರೆಸ್ ಪಕ್ಷವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯಬಹುದೇ? Lead ಮಾಡುವುದಕ್ಕೆ ಪ್ರಬುದ್ಧತೆ ಸಾಲದು ಎಂಬ ಅಭಿಪ್ರಾಯ.
ಈಕೆಗೆ ಅವಮಾನ ನಿಶ್ಚಿತ!
ಇನ್ನೊಂದೆಡೆ ಇವರ ಪ್ರವೇಶ ಕಾಲದ ವಿಶೇಷತೆ ಏನು? ಹೆಡ್ಡನಾದರೂ, ಬುದ್ಧಿ ಹೀನನಾದರೂ ರಾಜಕೀಯ ಪ್ರವೇಶ ಕಾಲ ಚೆನ್ನಾಗಿದ್ದರೆ ಸ್ವಲ್ಪ ಮಟ್ಟಿಗೆ ಉತ್ತಮ. ಆದರೆ ಈಕೆ ಪ್ರವೇಶಿಸುವಾಗ ಶನಿಯು ಧನುರಾಶಿಯಲ್ಲಿದ್ದಾನೆ. ಇವರ ಜನ್ಮ ಜಾತಕ ಶನಿಯು ವೃಷಭದಲ್ಲಿದ್ದು, ಈ ಧನುರಾಶಿಯ ಶನಿ ಸಂಚಾರವು ಶನಿಗೆ ಶನಿಯು ಅಷ್ಟಮ ಸಂಚಾರವಾಗುತ್ತದೆ. ಪರಿಣಾಮ- ಅವಮಾನ, ಅನಾರೋಗ್ಯ, ಪಕ್ಷದ ಪಥನ ಇತ್ಯಾದಿ ಅಶುಭ ಫಲವೇ ಅಧಿಕ.
ರಾಜಕಾರಣಿಗೆ ಶನಿಯೇ ಪ್ರಧಾನ. ಹೀಗಿರುವಾಗ ಇವರ ಜಾತಕವು ಮುಂದಿನ ಜನವರಿಯವರೆಗೆ ರಾಜಕೀಯಕ್ಕೆ ಹೊಂದಿಕೆಯಾಗುವುದಿಲ್ಲ ಮತ್ತು ಮಾರಕವೇ ಆಗುತ್ತದೆ.
ಇವೆಲ್ಲವೂ ಮೋದಿಯವರ ಮುಂದಿನ ಪ್ರಧಾನ ಮಂತ್ರಿಯಾಗುವ ಯೋಗಕ್ಕೆ ಬೆಂಬಲ ನೀಡಿದಂತೆಯೇ ಆಗುತ್ತದೆ. ಕೆಲವೊಮ್ಮೆ ಶತ್ರುಗಳ ಶತ್ರು ಕೃತ್ಯಗಳು ಲಾಭ ತರುವುದುಂಟು.
2019 ಚುನಾವಣೆಯಲ್ಲಿ ಒಂದನೆಯ ಲಾಭವು ಮೋದಿಯವರ ಸಾಧನೆ, ಎರಡನೆಯದ್ದು ಹಿಂದುತ್ವ, ಮೂರನೆಯದ್ದು ಶತ್ರುವಿನ ಹೆಡ್ಡತನವೇ ಆಗುತ್ತದೆ. ಹಾಗಾಗಿ ಒಟ್ಟಿನಲ್ಲಿ 2019ರಲ್ಲಿ ಪ್ರಧಾನಿಯಾಗಿ ಮತ್ತೊಮ್ಮೆ ಮೋದಿ ಎಂಬುದು ಖಚಿತ.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post