ಎಂ.ಎಸ್.ವಿ. ಕ್ರಿಯೇಷನ್‌ಸ್ ಲಾಂಛನದಲ್ಲಿ ವಿಷ್ಣುವರ್ಧನ್ ನಿರ್ಮಿಸುತ್ತಿರುವ ಚದುರಂಗ ಚಿತ್ರಕ್ಕೆ ಅದ್ದೂರಿ ಚಾಲನೆ ದೊರೆತಿದೆ.
ಕಂಠೀರವ ಸ್ಟುಡಿಯೋದಲ್ಲಿ ನಾಯಕ ಸುಮನ್ ಶರ್ಮ ಹಾಗೂ ನಾಯಕಿ ಸಂಭ್ರಮ ಅಭಿನಯದ ಮೊದಲ ದೃಶ್ಯಕ್ಕೆ ನಿರ್ಮಾಪಕ ಶ್ರೀನಿವಾಸ್ ಕ್ಯಾಮರಾ ಚಾಲನೆ ಮಾಡಿದರೆ, ನಟ ಜೈಜಗದೀಶ್ ಕ್ಲಾಪ್ ಮಾಡಿದರು.
ಈ ಹಿಂದೆ ಇಷ್ಟಾರ್ಥ ಗಾಯಿತ್ರಿ ಚತುರ ಚಿತ್ರಗಳನ್ನು ನಿರ್ದೇಶಿಸಿದ್ದ ಸತ್ಯ ಸಾಮ್ರಾಟ್ ಅವರ ನಿರ್ದೇಶನದಲ್ಲಿ ಚದುರಂಗ ಚಿತ್ರವನ್ನು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಸಸ್ಪೆನ್‌ಸ್ ಥ್ರಿಲ್ಲರ್ ಹಾಗೂ ಲವ್ ಕಥಾಹಂದರ ಹೊಂದಿರುವ ಈ ಚಿತ್ರವು ಕನ್ನಡ ಹಾಗೂ ತೆಲುಗು ಸೇರಿ ಎರಡು ಭಾಷೆಗಳಲ್ಲಿ ತಯಾರಾಗಲಿದೆ. ಬೆಂಗಳೂರು, ಸಕಲೇಶಪುರ ಹಾಗೂ ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
ಚಿತ್ರಕ್ಕೆ ಗುರುದತ್ ಮುಸುರಿ ಛಾಯಾಗ್ರಹಣ, ಬಾಬ್ ಜೀ ಸಂದೀಪ್ ಸಂಗೀತ, ಬಿ. ಶ್ರೀನಿವಾಸ್ ಸಾಹಿತ್ಯ, ಜಾಗ್ವಾರ್ ಸನ್ನಪ್ಪ ಸಾಹಸ, ಸುರೇಶ್ ವಂಶಿ ಸಹನಿರ್ಮಾಪಕರಾಗಿದ್ದು, ಸುಮನ್ ಶರ್ಮ, ಸಂಭ್ರಮ, ಅಪ್ಪು ಬಡಿಗಾರ್, ಸ್ವಾತಿ, ಚರಣ್, ಶಿವಂ, ಜೈಜಗದೀಶ್, ಕಿಲ್ಲರ್ ವೆಂಕಟೇಶ್, ಹೊನ್ನವಳ್ಳಿ ಕೃಷ್ಣ, ಐಶ್ವರ್ಯಾ, ಇನ್ನೂ ಮುಂತಾದವರ ತಾರಾಬಳಗವಿದೆ.
Discussion about this post