ಕಲ್ಪ ಮೀಡಿಯಾ ಹೌಸ್ | ಹೊಸನಗರ |
ತಾಲೂಕಿನ 30 ಗ್ರಾಮ ಪಂಚಾಯ್ತಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಬೃಹತ್ ಯೋಜನೆಗೆ ಅನುಮೋದನೆ ನೀಡಿರುವ ರಾಜ್ಯ ಸರ್ಕಾರಕ್ಕೆ ಶಾಸಕ ಎಚ್. ಹಾಲಪ್ಪ MLA Halappa ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಹೊಸನಗರ ಪಟ್ಟಣ ಹಾಗೂ ತಾಲೂಕಿನ 30 ಗ್ರಾಮ ಪಂಚಾಯ್ತಿಗಳ 1167 ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಸಂತಸ ಮೂಡಿಸಿದೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ತಾಲೂಕಿನ ಜನತೆಯ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದರು.

Also read: ಪಂಚಭೂತಗಳು ಮತ್ತು ಪರಿಸರದ ಭಾರತೀಯ ಚಿಂತನೆಗಳು ವಿಚಾರ ಸಂಕಿರಣ ಸಂಪನ್ನ
ಒಟ್ಟು 780 ಕಿಮೀ ಪೈಪ್ ಲೈನ್ ನಿರ್ಮಾಣವಾಗಲಿದ್ದು, ಅಂದಾಜು ಒಂದೂವರೆ ಲಕ್ಷ ಮಂದಿ ಇದರ ಪ್ರಯೋಜನ ಪಡೆಯಲಿದ್ದಾರೆ. ತಾಲೂಕಿನ ಅತಿ ದೊಡ್ಡ ಪಟ್ಟಣವಾಗಿರುವ ರಿಪ್ಪನ್’ಪೇಟೆ ಅತಿ ಹೆಚ್ಚು ಪ್ರಯೋಜನವನ್ನು ಈ ಯೋಜನೆಯಲ್ಲಿ ಪಡೆಯಲಿದೆ ಎಂದರು.

ಅತ್ಯಂತ ಪರಿಶುದ್ಧ ನೀರು ನಮ್ಮ ನೆಲದಲ್ಲೇ ಇದೆ. ಇದನ್ನು ಜನರಿಗೆ ತಲುಪಿಸುವುದು ನಮ್ಮ ಆದ್ಯತೆಯಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಸಹಕಾರ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಎಲ್ಲರಿಗೂ ತಾಲೂಕಿನ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.












Discussion about this post