ಹೊಸನಗರ: ಬೇಲಿಗೆ ಹಾಕಿದ್ದ ಮೀನು ಹಿಡಿಯುವ ಬಲೆಗೆ ಸಿಲುಕಿ ಜಿಂಕೆಯೊಂದು ಸಾವಿಗೀಡಾದ ಘಟನೆ ತಾಲೂಕಿನ ನಿಟ್ಟೂರು ಸಮೀಪದ ಬೇಳೂರಿನಲ್ಲಿ ನಡೆದಿದೆ.
ಬೇಳೂರಿನ ವಿನಯ್ ಎಂಬುವವರ ತೋಟದಲ್ಲಿ ಘಟನೆ ನಡೆದಿದ್ದು, ಭಾನುವಾರ ಈ ಘಟನೆ ನಡೆದಿದೆ. ನಿನ್ನೆ ಇದು ಬೆಳಕಿಗೆ ಬಂದಿದ್ದು, ಸೋಮವಾರ ಬೆಳಗ್ಗೆವರೆಗೂ ಜಿಂಕೆ ನಿತ್ರಾಣವಾಗಿತ್ತು. ಸ್ಥಳೀಯರಿಂದ ಅರಣ್ಯ ಇಲಾಖೆಗೆ ಸುದ್ದಿ ತಿಳಿಸಿದ ನಂತರ ಸ್ಥಳಕ್ಕೆ ನಗರ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಆದರೆ, ಬಲೆಯಿಂದ ಮುಕ್ತಿಗೊಳಿಸಿದ ಬಳಿಕ ಜಿಂಕೆ ಸಾವನ್ನಪ್ಪಿದೆ.
Discussion about this post