ಕಲ್ಪ ಮೀಡಿಯಾ ಹೌಸ್ | ಹೊಸನಗರ |
ರಾಣೆಬೆನ್ನೂರು – ಬೆಳ್ಳಂದೂರು ರಾಷ್ಟ್ರೀಯ ಹೆದ್ದಾರಿಯ #Ranebennuru-Bellanduru National Highway ಕೊಲ್ಲೂರು ಮಾರ್ಗದ #Kolluru Way ಎಬಗೋಡು ಬಳಿ ನಿಧಿ ಆಸೆಗಾಗಿ ಗುಂಡಿ ತೋಡಿರುವುದು ಗುರುವಾರ ಬೆಳಕಿಗೆ ಬಂದಿದೆ.
ಹೆದ್ದಾರಿಗೆ ಹೊಂದಿಕೊಂಡಂತಿರುವ ಧರೆಯ ಮೇಲ್ಬಾಗದಲ್ಲಿ ಶಿವಲಿಂಗದತ್ತಿಗೆ ಪಕ್ಕದಲ್ಲಿಯೇ ಗುಂಡಿ ತೋಡಲಾಗಿದ್ದು, ಶಿವಲಿಂಗಕ್ಕೆ ಅರಿಶಿಣ, ಕುಂಕುಮ ಹಚ್ಚಲಾಗಿದೆ. ಪಕ್ಕದ ಮರದ ಪೊಟರೆಯೊಳಗೆ ಹೂವಿನ ಹಾರ, ಸುತ್ತಲೂ ಲಿಂಬೆಹಣ್ಣು ಎಸೆಯಲಾಗಿದೆ. ನಿಧಿ ಶೋಧಕ್ಕಾಗಿ #Search for Treasure ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
Also read: ಹೊಸನಗರ | ರಸ್ತೆ ಅಪಘಾತ: ವ್ಯಕ್ತಿ ಸಾವು
ಹೆದ್ದಾರಿಯಿಂದ 10-20 ಅಡಿ ಅಂತರದಲ್ಲಿ ಈ ಕೃತ್ಯ ನಡೆದಿದೆ. ಎರಡು ವರ್ಷದ ಹಿಂದೆ ಪಕ್ಕದ ಶ್ರೀಧರ ಗುಡ್ಡದ ಮೇಲ್ಬಾಗದಲ್ಲಿರುವ ಶಿವಲಿಂಗದ ಕೆತ್ತನೆ ಇರುವ ಕಲ್ಲಿನ ಪಕ್ಕದಲ್ಲಿ ಇದೇ ರೀತಿ ಗುಂಡಿ ತೋಡಲಾಗಿತ್ತು. ನಗರ ಭಾಗದಲ್ಲಿ ಹಲವು ವರ್ಷಗಳಿಂದ ನಿಧಿಗಾಗಿ ಶೋಧ ನಡೆಸುವ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಸಮಾಧಿ ಸ್ಥಳ ಗಳಿಗೆಬಟ್ಟಲು, ಬರೇಕಲ್ ಬತೇರಿ, ಅರೋಡಿ, ಬಸವನಬ್ಯಾಣ, ದರಗಲ್ ಗುಡ್ಡ ಸೇರಿ ಪುರಾತನ ಮಹತ್ವದ ಸ್ಥಳಗಳನ್ನು ನಿಧಿ ಅನೆಗಾಗಿ ಲೂಟಿಕೋರರು ಧ್ವಂಸಗೊಳಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post