ಕಲ್ಪ ಮೀಡಿಯಾ ಹೌಸ್ | ಹೊಸನಗರ |
ಮಲೆನಾಡಿನಲ್ಲಿ ಅರಣ್ಯ ನಿರ್ಮಾಣ ಮಾಡುವ ಅಗತ್ಯ ನಿರ್ಮಾಣ ಆಗಬಾರದಿತ್ತು. ಹಾಗೆಯೇ ಮಲೆನಾಡು ಬರಗಾಲ ಪೀಡಿತ ಪ್ರದೇಶ ಎಂದೂ ಗುರುತಿಸಿಕೊಳ್ಳಬಾರದಿತ್ತು. ಆದರೆ ಅದೆರೆಡು ಕೂಡ ನಮ್ಮ ಸಂದರ್ಭದಲ್ಲಿ ಕಾಣಿಸಿಕೊಂಡು ಆಗಿದೆ ಎಂದು ರಾಜ್ಯ ಅಂಬೇಡ್ಕರ್ ನಿಗಮ ಸದಸ್ಯ ಎನ್. ಅರ್. ದೇವಾನಂದ್ ವಿಷಾದ ವ್ಯಕ್ತಪಡಿಸಿದರು.
ಚಿಕ್ಕ ಜೇನಿ ಗ್ರಾಮ ಪಂಚಾಯತ್ ಮುತ್ತಲ ಗ್ರಾಮದಲ್ಲಿ ಸಾರ ಸಂಸ್ಥೆ ಹಾಗೂ ನಾಡ ಚಾವಡಿ, ಹಾಗೂ ಸುಬ್ಬಣ್ಣ ರಂಗ ಸಮೂಹ, ಪರಿಸರ ಆಸಕ್ತ ಬಳಗ, ಹಾಗೂ ಅರಣ್ಯ ಇಲಾಖೆಯ ಸಹಯೋಗ ಸ್ವ ಗ್ರಾಮ ಸಮಿತಿ ಹಾಗೂ ಅದರ ಅಂಗ ಸಮಿತಿಗಳ ಮೇಲ್ವಿಚಾರಣೆಯಲ್ಲಿ ಕಿರು ಅರಣ್ಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಡಿದ್ದರೆ ನಾಡು ಸುಭೀಕ್ಷಾ ಆಗಲು ಸಾಧ್ಯ, ಅದರಿಂದ ಮಳೆ, ಅದರ ಮೂಲಕ ಜಲ, ತನ್ಮೂಲಕ ಕೃಷಿ ಸಮೃದ್ಧಿ ಒಟ್ಟಾರೆ ನಮ್ಮನ್ನು ಒಳಗೊಂಡಂತೆ ಜೀವ ವೈವಿಧ್ಯಗಳ ರಕ್ಷಣೆಯನ್ನು ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ ರಕ್ಷಾ ಕವಚದಂತೆ ನಮ್ಮನ್ನು ಕಾಪಾಡುತ್ತಿದೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರಾದ ನಾವುಗಳು ನಮ್ಮ ನಡುವಿನ, ಪರಿಸರ ಹಾಗೂ ಅರಣ್ಯ ಪ್ರದೇಶ ರಕ್ಷಣೆ ಹಾಗೂ ಪೋಷಣೆ ಮಾಡುವುದು ಆದ್ಯ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮುತ್ತಲ ಗ್ರಾಮದ ಹೃದಯ ಭಾಗದಲ್ಲಿನ ಕಿರು ಪ್ರದೇಶ ಆಯ್ಕೆ ಮಾಡಿಕೊಂಡು ಅರಣ್ಯ ಇಲಾಖೆಯ ಅಧಿಕಾರಿಗಳ ನೆರವು ಹಾಗೂ ಸಹಕಾರ ಪಡೆದು ಒಂದೇ ಪ್ರದೇಶದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚಿನ ಕಾಡುಜಾತಿಯ ಗಿಡಗಳೊಂದಿಗೆ ಹಣ್ಣಿನ ಗಿಡಗಳನ್ನು ಸೇರಿಸಿ ಸಾವಿರದ ಇನ್ನೂರು ಗಿಡಗಳನ್ನು ನೆಡುವ ಮೂಲಕ ಕಿರು ನೈಸರ್ಗಿಕ ದಟ್ಟ ಕಾಡು ನಿರ್ಮಾಣಕ್ಕೆ ಗ್ರಾಮಸ್ಥರೆಲ್ಲ ಸೇರಿ ಮುಂದಾದರು. ಈ ಕಾರ್ಯದಲ್ಲಿ ಶಿವಮೊಗ್ಗ ಬಾಲಕೃಷ್ಣ ನಾಯ್ಡು ಅವರು ವಿವಿಧ ಜಾತಿಯ 500 ಗಿಡ ಒದಗಿಸಿದ್ದು, ಪ್ರಥಮ ಬಾರಿಗೆ ಹೊಸನಗರ ತಾಲೂಕಿನಲ್ಲಿ ಈ ಪ್ರಯತ್ನ ನಡೆದಿದೆ.


ಈ ಸಂದರ್ಭದಲ್ಲಿ ಸುರೇಶ್ ಸ್ವಾಮಿ ರಾವ್, ಚಂದ್ರ ಮೌಳಿ, ಅಶ್ವಿನಿ ಕುಮಾರ್, ಮಾರುತಿಪುರ ಗ್ರಾಮ ಪಂಚಾಯತ್ ಅದ್ಯಕ್ಷ ಚಿದಂಬರ್ , ಹರತಾಳು ಗ್ರಾಮ ಪಂಚಾಯತ್ ಅಧ್ಯಕ್ಷ ಕಲ್ಲಿ ಯೋಗೇಂದ್ರ, ಪುರಪ್ಪೇ ಮನೆ ಗ್ರಾಮ ಪಂಚಾಯತ್ ಅಧ್ಯಕ್ಷ ಜೈ ಪ್ರಕಾಶ್ ಶೆಟ್ಟಿ,
ಕಡೆಕಲ್ ನಾಗರಾಜ್, ಸದಾಶಿವ ಶೆಟ್ಟಿ, ಡಿ. ಎಂ. ಬಾಲ ಕೃಷ್ಣ ನಾಯ್ಡು, ಶಿವಮೊಗ್ಗ, ಗ್ರಾಮ ಪಂಚಾಯತ್ ಸದಸ್ಯರುಗಳಾದ
ಇಂದ್ರೇಶ್, ಶಿವಮೂರ್ತಿ, ನಾರಿರವಿ, ಸುಧಾಕರ್, ರಾಧಾ ಕೃಷ್ಣಪ್ಪ. ಉಪ ಪ್ರಾಂಶುಪಾಲರಾದ ಕೆಸುವಿನ ಮನೆ ರತ್ನಾಕರ್, ಗ್ರಾರ್ಗಿ, ಮಾದ್ಯಮ ಮಿತ್ರರು, ಗೋಪಾಲ್ ಮೂರ್ತಿ ಭಾಗವತರು, ಉದ್ಯಮಿ ಉದಯ ನಾಯಕ್, ಉಪನ್ಯಾಸಕ ದಂಪತಿಗಳಾದ ರತ್ನಾಕರ್, ಪ್ರತಿಮಾ, ಶಾಂತ ಮೂರ್ತಿ ಗುರೂಜಿ ಶಾಲೆ, ಮಂಜುನಾಥ್ ಬ್ಯಾನದ್. ನಾಸಿರ್, ಆನಂದಪುರ ದ ರಾಯಲ್ ಕ್ಲಬ್ ಸದಸ್ಯರು, ಸ್ವ ಗ್ರಾಮ ಯೋಜನೆ ಸಂಚಾಲಕ ಯೇಸು ಪ್ರಕಾಶ್, ಸಾರ ಸಂಸ್ಥೆ ಯ ಧನುಷ್, ಶಿವ ಕುಮಾರ್, ಹಾಗೂ ಕುಮಾರ್, ಸ್ವ ಗ್ರಾಮ ಸಮಿತಿ ಅಧ್ಯಕ್ಷ ಗುರುಮೂರ್ತಿ, ಸಂಚಾಲಕ ರಮೇಶ್ ಹೊಸಳ್ಳಿ, ಸತೀಶ್ ಹಂಜ, ಶಂಕರಪ್ಪ ಮತ್ತು ಇತರ ಗ್ರಾಮಸ್ಥರು ಹಾಜರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















