ಕಲ್ಪ ಮೀಡಿಯಾ ಹೌಸ್ | ಹೊಸನಗರ |
ತಾಲೂಕಿನ ದರ್ಗಾ ಹೆರಗೂಡಿನ ಬಳಿ ಬೈಕ್ ಸವಾರನೋರ್ವ ಕೂದಲಳತೆಯಲ್ಲಿ ಚಿರತೆಯ ದಾಳಿಯಿಂದ ಪಾರಾಗಿದ್ದಾನೆ.
ನಗರ ನಿವಾಸಿ ಸುಬ್ರಹ್ಮಣ್ಯ ನಾವುಡ ಹೊಸನಗರದಿಂದ ನಗರಕ್ಕೆ ಬೈಕ್‌ನಲ್ಲಿ ಬರುವಾಗ ಈ ಘಟನೆ ನಡೆದಿದ್ದು, ಚಲಿಸುತ್ತಿದ್ದ ಬೈಕ್ ಮೇಲೆ ಚಿರತೆಯೊಂದು ಎಗರಿದ್ದು, ಕೂದಲೆಳೆ ಅಂತರದಲ್ಲಿ ಸವಾರ ಬಚಾವಾಗಿದ್ದಾನೆ.
ಗುರಿ ತಪ್ಪಿ ಬೈಕ್ ಮುಂಭಾಗಕ್ಕೆ ಜಿಗಿದು ಚಿರತೆ ಘರ್ಜಿಸಿದೆ. ಏನು ಮಾಡಲು ತೋಚದೆ ಬೈಕ್ ಹಾರನ್ ಒತ್ತಿಕೊಂಡೇ ಕಿರುಚಲು ಶುರು ಮಾಡಿದಾಗ, ಚಿರತೆ ರಸ್ತೆಯ ಮತ್ತೊಂದು ಬದಿಗೆ ನೆಗೆದು ಮೆರೆಯಾಗಿದೆ ಎಂದು ಅರ್ಚಕ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















