ಕಲ್ಪ ಮೀಡಿಯಾ ಹೌಸ್
ಹೊಸನಗರ: ಕೋವಿಡ್ ಲಸಿಕೆ ಪಡೆಯಲು ಆನ್ ಲೈನ್ ರಿಜಿಸ್ಟೇಶನ್ ಮಾಡುವುದನ್ನು ಕೈ ಬಿಡಬೇಕು ಎಂದು ಹೊಸನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಬುಕ್ಕಿವರೆ ಆಗ್ರಹಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಕೋ ವಾಕ್ಸಿನ್’ಗೆ ಅನ್ ಲೈನ್’ನಲ್ಲಿ ಮೊದಲು ರಿಜಿಸ್ಟರ್ ಮಾಡಿಕೊಂಡು ಮೆಸೇಜ್ ಬಂದ ಮೇಲೆ ಲಸಿಕೆ ಪಡೆಯುವಂತೆ ನಿಯಮ ಜಾರಿ ಮಾಡಿದೆ. ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ ನೆಟ್ವರ್ಕ್ ಸಮಸ್ಯೆ ಹೆಚ್ಚಿದ್ದು, ಗ್ರಾಮೀಣ ಭಾಗದ ಜನರು ರಿಜಿಸ್ಟ್ರೇಶನ್ ಮಾಡಿಕೊಳ್ಳುವುದು ತುಂಬಾ ಕಷ್ಟವಾಗಿದೆ. ಅದ್ದರಿಂದ ತತಕ್ಷಣ ಅನ್ಲೈನ್ ರಿಜಿಸ್ಟೇಶನ್ ಕೈ ಬಿಡಬೇಕು. ಹೊಸನಗರ ತಾಲೂಕಿನ ಎಲ್ಲಾ ಜನರಿಗೂ ತಕ್ಷಣ ಲಸಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ವ್ಯಾಪ್ತಿಯಲ್ಲಿ ಸೋಂಕಿತ ಜನರು ಬೆಡ್ ಇಲ್ಲದೆ, ವೆಂಟಿಲೇಟರ್ ಇಲ್ಲದೆ, ಆಕ್ಸಿಜನ್ ಸಿಗದೆ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರ ಜನರ ಪ್ರಾಣದ ವಿಚಾರದಲ್ಲಿ ಕಣ್ಣಮುಚ್ಚಾಲೆ ಆಡುತ್ತಿದೆ. 18- 45 ವರ್ಷದವರಿಗೆ ಮೇ ತಿಂಗಳ ಒಂದರಿಂದ ನಿಡುವುದಾಗಿ ಸರ್ಕಾರ ಜನರಿಗೆ ಭರವಸೆ ನೀಡಿತು. ಅದರೆ ವ್ಯಾಕ್ಸಿನೇಷನ್ ಪ್ರಾರಂಭವಾಗಿಲ್ಲ ಹಾಗೂ ಹಿರಿಯರಿಗೆ ನೀಡುವ ಎರಡನೆ ವ್ಯಾಕ್ಸಿನೇಷನ್ ಮಾಡದೆ ಜನರು ಹಾಸ್ಪಿಟಲ್ ಗೆ ಪರದಾಡುವಂತೆ ಮಾಡಿದೆ ಎಂದು ಅರೋಪಿಸಿದ್ದಾರೆ.
ಸರ್ಕಾರ ಯಾವುದೇ ವ್ಯವಸ್ಥೆಗಳನ್ನು ಮಾಡಿಕೊಳ್ಳದೇ ಕೋ ವ್ಯಾಕ್ಸಿನ್ ಸ್ಟಾಕ್ ಮೆಂಟೈನ್ ಮಾಡದೆ ವ್ಯಾಕ್ಸಿನ್ ಕೇಂದ್ರದಲ್ಲಿ ವ್ಯಾಕ್ಸಿನ್ ಖಾಲಿಯಾಗಿದೆ ಎಂದು ಜನರನ್ನು ವಾಪಸ್ ಕಳಿಸುತ್ತಿರುವುದು ಖಂಡನೀಯ. ತಕ್ಷಣ ವ್ಯವಸ್ಥೆ ಸರಿಮಾಡಿಕೊಳ್ಳಬೇಕು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news










Discussion about this post