ಕಲ್ಪ ಮೀಡಿಯಾ ಹೌಸ್ | ಹೊಸನಗರ |
ತಾಲೂಕಿನ ಹುಂಚ ಗ್ರಾಮದ ಸರ್ವೆ ನಂ. 52/2 ರಲ್ಲಿ ರಾಮಪ್ಪ ಬಿನ್ ಮರಿಯಪ್ಪ ಅವರ ಅಡಿಕೆ ತೋಟದ ಹೊಂಡದಲ್ಲಿ ಎರಡು ಕಾಡುಕೋಣಗಳ ಶವ ಪತ್ತೆಯಾಗಿದ್ದು, ಈ ಘಟನೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಸೋಮವಾರ ಬೆಳಿಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ವರದಿ ಹೊರಬಿದ್ದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಜೆಸಿಬಿ ಸಹಾಯದಿಂದ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಿದರು. ಈ ಕಾರ್ಯದಲ್ಲಿ ಸಾಗರ ವಲಯದ ಡಿಸಿಎಫ್ ಮೋಹನ್ ಕುಮಾರ್, ಹೊಸನಗರ ಎಸಿಎಫ್ ಕೆ.ಬಿ. ಮೋಹನ್ ಕುಮಾರ್ ಹಾಗೂ ಆರ್‌ಎಫ್‌ಓ ಅನಿಲ್ ಕುಮಾರ್ ಪಾಲ್ಗೊಂಡಿದ್ದರು. ಪಶು ವೈದ್ಯಾಧಿಕಾರಿ ಫಣಿರಾಜ್ ಮರಣೋತ್ತರ ಪರೀಕ್ಷೆ ನಡೆಸಿದರು.

ಈಗಾಗಲೇ ಹುಂಚ ಹಾಗೂ ನಾಗರಹಳ್ಳಿ ವ್ಯಾಪ್ತಿಯಲ್ಲಿ ಅನೇಕ ಬಾರಿ ಕಾಡುಕೋಣಗಳ ಮಾರಣಹೋಮ ನಡೆದಿರುವುದು ಸಾಬೀತಾಗಿದೆ. 2024ರ ಜೂನ್‌ನಲ್ಲಿ ಅಕ್ರಮ ಬಂದೂಕು ಬಳಸಿ ನಾಲ್ಕಕ್ಕೂ ಹೆಚ್ಚು ಕಾಡುಕೋಣಗಳ ಹತ್ಯೆ ನಡೆದ ಪ್ರಕರಣವೂ ಬೆಳಕಿಗೆ ಬಂದಿತ್ತು. ಆ ವೇಳೆಯೂ ಅರಣ್ಯ ಇಲಾಖೆ ತನಿಖೆ ನಡೆಸಿ ಲ್ಯಾಬ್ ವರದಿಗೆ ಕಳಿಸಿತ್ತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










Discussion about this post