ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ |
ಇಲ್ಲಿನ ಚಿಂತಾಮಣಿ Chinthamani ಪೀಠದ ಸದ್ಗುರು ಶ್ರೀ ಶಿವಾನಂದ ಭಾರತಿ ಚಿಂತಾಮಣಿ ಸ್ವಾಮಿಗಳು ಶ್ರೀಮಠದ ಭಕ್ತ ಮಂಡಳಿಯ (ಅಧ್ಯಕ್ಷ) ಪ್ರಮುಖ ಅಚಾರ್ಯರನ್ನಾಗಿ ಸತ್ಯನಾರಾಯಣ ಜೋಷಿ ಅವರನ್ನು ಆಯ್ಕೆ ಮಾಡಿದ್ದಾರೆ.
ಮಠದಲ್ಲಿ ನಡೆದ ಸಭೆಯ ನಿರ್ಣಾಯಕದಂತೆ ಲೋಕಕಲ್ಯಾಣಕಾಗಿ ಮುಂಬರುವ ಕಾರ್ಯಕ್ರಮಗಳನ್ನು ಗಣನೆಗೆ ತೆಗೆದುಕೂಂಡು ಆಯ್ಕೆ ಮಾಡಿ ಮಾತನಾಡಿದ ಶ್ರೀಗಳು, ಜೋಷಿ ಅವರು ಶ್ರೀಮಠಕ್ಕೂ ಭಕ್ತರಿಗೂ ಸೇತುವೆಯಂತ್ತಿದ್ದು ನಿಷ್ಕಾಮ ಸೇವಾ ಕಾರ್ಯಗಳ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಶ್ರೀ ಸದ್ಗುರು ಮಹಾಸಂಸ್ಥಾನಮ್ ಶ್ರೀ ಚಿಂತಾಮಣಿ ಮಠದ (ಆಸ್ಥಾನ ವೇದ ವಿದ್ವಾನ್) ವೇದಾಚಾರ್ಯರನ್ನಾಗಿ ಗಣೇಶ್ ಗೋಸಾವಿ ಯವರನ್ನು ಆಯ್ಕೆ ಮಾಡಲಾಗಿದೆ. ಇವರು ಶ್ರೀಮಠದಲ್ಲಿ ನಡೆಯುವ ವೈದಿಕ ಕಾರ್ಯಗಳ ಆಯೋಜನೆ ಮತ್ತು ನೇತೃತ್ವದ ಜವಾಬ್ದಾರಿಯನ್ನು ನಿಷ್ಕಾಮವಾಗಿ ವಹಿಸಲಿದ್ದಾರೆ ಎಂದರು.
ಇನ್ನು ಶ್ರೀಮಠದಲ್ಲಿ ವೇದ ಪಾರಾಯಣ, ದತ್ತ ಭಜನೆ, ನಂತರ ಸದ್ಗುರು ಶ್ರೀಶ್ರೀ ಶಿವಾನಂದ ಭಾರತೀ ಸ್ವಾಮಿಗಳು ಪ್ರವಚನ ಕಾರ್ಯಕ್ರಮ ನಡೆಯಿತು.
ಬಾಣಾವರದಿಂದ ಶ್ರೀ ನಾರಾಯಣ ಯೋಗೀಂದ್ರ ಆಶ್ರಮ ದ ಶಿಷ್ಯರು ಶ್ರೀ ಚಿಂತಾಮಣಿ ಮಠಕ್ಕೆ ಆಗಮಿಸಿ ಬಾಣಾವರದಲ್ಲಿ ನಡೆಯುವ ಗುರು ಚರಿತ್ರೆಯ ಪಾರಾಯಣ ಮತ್ತು ಇತರೆ ಕಾರ್ಯಕ್ರಮಗಳ ಸಲುವಾಗಿ ಭಿಕ್ಷಾ ಕಾಣಿಕೆಯ ನಿಮಿತ್ತ ದತ್ತ ಜೋಳಿಗೆಯನ್ನು ಭಕ್ತರ ಮುಂದೆ ತಂದಿದ್ದರು. ಶ್ರೀ ಚಿಂತಾಮಣಿ ಮಠದ ಭಕ್ತರು ದತ್ತ ಭಜನೆಯಾದ ನಂತರ ತಮ್ಮ ಕೈಲಾದ ಭಿಕ್ಷಾ ಕಾಣಿಕೆಯನ್ನು ದತ್ತ ಜೋಳಿಗೆಗೆ ಸಮರ್ಪಿಸಿ ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ಹೋಸಪೇಟೆ ಬ್ರಾಹ್ಮಣ ಸಮಾಜದ ಸದಸ್ಯರು ಮತ್ತು ಭಜನಾ ಮಂಡಳಿಯ ಮಹಿಳಾ ಸದಸ್ಯರು ಭಾಗವಹಿಸಿದ್ದರು.
ಭಜನೆ ಮತ್ತು ಕಾರ್ಯಕ್ರಮದ ನಂತರ ಸ್ವಾಮಿಗಳು ಶ್ರೀ ಚಿಂತಾಮಣಿ ಮಠದ ಭಕ್ತ ಮಂಡಳಿಗೆ ಗುರುವಂದನಾ ಭಕ್ತಿ ಸಂಗೀತ, ಭಜನಾ ಪುಸ್ತಕವನ್ನು ನೀಡಿ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
(ವರದಿ: ಮುರುಳೀಧರ ನಾಡಿಗೇರ್, ವಿಜಯನಗರ-ಹೊಸಪೇಟೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post