ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ |
ಜ್ಞಾನಪೀಠ ಪ್ರಶಸ್ತಿ ವಿಜೇತ, ನಾಕುತಂತಿ ರೂವಾರಿ ದ.ರಾ. ಬೇಂದ್ರೆ #Da.Ra. Bendre ಅವರ 126ನೆಯ ಜನ್ಮದಿನದ ಅಂಗವಾಗಿ ಕೆಎಫ್’ಐಆಲ್ ಆಫೀಸರ್ ಲೇಡೀಸ್ ಕ್ಲಬ್ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಭಾವಪೂರ್ಣವಾಗಿ ಮೂಡಿಬಂದಿತು.
ವಿಜಯನಗರದ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದ ಪರಿಚಯ ಮಾಡಿಸಿ, ಆಮೂಲಕ ಸ್ಮರಣೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಳೆದ ತಿಂಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ದ.ರಾ. ಬೇಂದ್ರೆ ಕವನಗಳನ್ನು ಹಾಡಿನ ಮೂಲಕ ಹಾಡುವ ಹಾಡಿನ ಸ್ಪರ್ಧೆ, ದ.ರಾ. ಬೇಂದ್ರೆ ಯವರನ್ನು ನೆನಪು ಮಾಡುವ ಘಟನೆಯನ್ನು ವಾಯ್ಸ್ ರೆಕಾರ್ಡ್ ಮಾಡಿ ಕಳುಹಿಸುವ ಭಾಷಣ ಸ್ಪರ್ಧೆ ಮತ್ತು ಅವರ ಮತ್ತು ನಾಕುತಂತಿ ವಿಷಯವಾಗಿ ವಿಷಯ ಸಂಗ್ರಹಿಸಿ, ಕನ್ನಡದಲ್ಲಿ ಪ್ರಬಂಧ ಬರೆಯುವ, ಭಾಷೆ ಮತ್ತು ವಿಷಯ ಸಂಗ್ರಹ ಸ್ವಬರಹ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಹೊಸಪೇಟೆಯ ಶಂಕರ ಆನಂದ್ ಸಿಂಗ್ ಕಾಲೇಜು, ವಿಜಯನಗರ ಕಾಲೇಜು, ಕೆಎಸ್’ಪಿಎಲ್ ಪದವಿ ಕಾಲೇಜು ಮತ್ತು ಥಿಯಾಸಾಫಿಕಲ್ ಮಹಿಳಾ ಕಾಲೇಜುಗಳ ವಿದ್ಯಾರ್ಥಿಗಳು ವಿಷಯ ಸಂಗ್ರಹಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
Also Read: ಅಮೆಜಾನ್ ಪ್ರೈಮ್’ಗೆ ಲಗ್ಗೆಯಿಟ್ಟ ‘ಫ್ಯಾಮಿಲಿ ಪ್ಯಾಕ್’ ಚಿತ್ರ: ಅದ್ಬುತ ರೆಸ್ಪಾನ್ಸ್
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಫೆ.17ರ ನಿನ್ನೆ ಆಫೀಸರ್ ಕ್ಲಬ್ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ, ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ #Kirloskar Ferrous Industries Ltd ವ್ಯವಸ್ಥಾಪಕ ನಿರ್ದೇಶಕರಾದ ಆರ್.ವಿ. ಗುಮಾಸ್ತೆಯವರು ವಹಿಸಿದ್ದರು. ಕಿರ್ಲೋಸ್ಕರ್ ಲೇಡೀಸ್ ಕ್ಲಬ್ ಅಧ್ಯಕ್ಷರಾದ ಕಮಲಾ ಗುಮಾಸ್ತೆ, ಉಪಾಧ್ಯಕ್ಷರಾದ ರಚನಾ ಎಕತಾರೆ ಮತ್ತು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಪಿ. ನಾರಾಯಣ ವಹಿಸಿದ್ದರು.
ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಕ್ಲಬ್ ಸದಸ್ಯರು, ಕಾರ್ಖಾನೆಯ ಆಫೀಸರ್ ಮತ್ತು ಹಿರಿಯ ಅಧಿಕಾರಿಗಳು ಮತ್ತು ಸಾಹಿತ್ಯ ಪ್ರೇಮಿಗಳು ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.
ಇತ್ತೀಚೆಗೆ ನಿಧನರಾದ ಹಿರಿಯ ಕವಿ ಚನ್ನವೀರ ಕಣವಿ ಅವರಿಗೆ ಈ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಿ, ಒಂದು ನಿಮಿಷಗಳ ಕಾಲ ಮೌನಾಚರಣೆ ನಡೆಸಲಾಯಿತು.
ಸರಿತಾ ಪರುಶುರಾಮ್ ಅವರು ಸ್ವಾಗತಿಸಿ, ಶಂಕರ ಆನಂದ್ ಸಿಂಗ್ ಕಾಲೇಜಿನ ವಿದ್ಯಾರ್ಥಿ ಕುಮಾರ, ಉಪ್ಪಾರ ರವಿ ಅವರು ದ.ರಾ.ಬೇಂದ್ರೆಯವರ ಮರೆಯಲಾಗದ ಘಟನೆಗಳನ್ನು ನೆನಪು ಮಾಡುತ್ತಾ ಭಾಷಣ ಮಾಡಿದರು. ನಂತರ ಯೋಗೇಶ್ ಹಿಟ್ನಾಳ್ ಇವರು ದ.ರಾ. ಬೇಂದ್ರೆಯವರ ಭಾವಗೀತೆಯನ್ನು ಹಾಡಿದರು. ಕಮಲಾ ಗುಮಾಸ್ತೆಯವರು ಪ್ರಾಸ್ತಾವಿಕ ಭಾಷಣ ಮಾಡಿದರು.
ಅಧ್ಯಕ್ಷರ ಭಾಷಣದಲ್ಲಿ ಆರ್.ವಿ. ಗುಮಾಸ್ತೆಯವರು ತಮ್ಮ ವಿದ್ಯಾರ್ಥಿ ಜೀವನವನ್ನು ನೆನೆಯುತ್ತಾ ದ.ರಾ. ಬೇಂದ್ರೆ ಯವರ ಜೊತೆ ಕಾಲಕಳೆದು ತಿಳಿದಂತಹ ವಿಷಯ ಮತ್ತು ಸಂದರ್ಭಗಳನ್ನು ಕುರಿತು ತಿಳಿಸಿಕೊಟ್ಟರು.
Also Read: ಮಂತ್ರಿ ರಾಜೀನಾಮೆ ವಿಷಯದಲ್ಲಿ ಕಾಂಗ್ರೆಸ್ ಪ್ರತಿಷ್ಠೆಗೆ ಬಿದ್ದು ಕಲಾಪ ಹಾಳು ಮಾಡುತ್ತಿದೆ : ಹೆಚ್‌ಡಿಕೆ
ಕಾರ್ಖಾನೆಯ ಅಧ್ಯಕ್ಷರಾದ ಎನ್.ಬಿ. ಎಕತಾರೆ, ಹಣಕಾಸು ವಿಭಾಗದ ಮುಖ್ಯಸ್ಥರಾದ ಶ್ರೀವತ್ಸನ್ ಮತ್ತು ಲೇಡೀಸ್ ಕ್ಲಬ್ ಮುಖ್ಯಸ್ಥರುಗಳಾದ ರಚನಾ ಎಕತಾರೆ, ಲಕ್ಷ್ಮಿ ನಾರಾಯಣ ಮತ್ತು ಶಿಲ್ಪ ಶ್ರೀವತ್ಸನ್ ಇವರು ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದವರಿಗೆ ಬಹುಮಾನವನ್ನು ನೀಡಿ ಅಭಿನಂದಿಸಿದರು.
ಕೊನೆಯಲ್ಲಿ ನಿರ್ಮಲ ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಆಫೀಸರ್ ಕ್ಲಬ್ ಸದಸ್ಯರಾದ ಮುರುಳೀಧರ್ ನಾಡಿಗೇರ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಸಮಾರಂಭವನ್ನು ಎಚ್.ಆರ್. ವಿಭಾಗದವರು ಆಯೋಜಿದ್ದರು.
Also Read: 12 ಕಿಮೀ ರಿಂಗ್ ರೋಡ್ ಇನ್ನು ಪುನೀತ್ ರಾಜಕುಮಾರ್ ರಸ್ತೆ: ಬಿಬಿಎಂಪಿ ಅಧಿಕೃತ ಅನುಮೋದನೆ
ಕೊನೆಯಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕೊವೀಡ್ ಹಿನ್ನೆಲೆಯಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸಿರಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕೋವೀಡ್/ಒಮಿಕ್ರಾನ್ ಕಡಿಮೆಯಾಗಿದೆ. ಸಭೆ ಸಮಾರಂಭ ಆಯೋಜಿಸಲು ಸರ್ಕಾರದ ಮಾರ್ಗಸೂಚಿ ಸಡಿಲವಾಗಿದೆ. ಇಂದಿನಿಂದ ನಮ್ಮ ಕ್ಲಬ್ ಕಾರ್ಯಕ್ರಮಗಳು ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಸಾಹಿತ್ಯ, ಸಂಗೀತ ಮತ್ತು ಪರಿಸರಕ್ಕೆ ಹೊಂದುವ ಸಭೆ ಸಮಾರಂಭ ಆಯೋಜಿಸಿ ಮೊದಲಿನಂತೆ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಆಫೀಸರ್ ಕ್ಲಬ್ ಹಾಗೂ ಲೇಡೀಸ್ ಕ್ಲಬ್ ಸಮಾಜಕ್ಕೆ ಹೊಂದುವ ಕೆಲಸ ಮಾಡಲು ಮತ್ತು ಆಯೋಜಿಸಿ ಪ್ರೋತ್ಸಾಹ ನೀಡುವ ಭರವಸೆ ನೀಡಿದರು.
ಒಟ್ಟಾರೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಿರ್ಲೋಸ್ಕರ್ ಒಂದು ಹೆಚ್ಚೆ ಎಂಬುದನ್ನು ತೋರಿಸಿಕೊಟ್ಟರು.
(ವರದಿ: ಮುರುಳೀಧರ್ ನಾಡಿಗೇರ್, ವಿಶೇಷ ವರದಿಗಾರರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post