ಹೊಸಪೇಟೆ: ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿರುವ ಪ್ರಖ್ಯಾತ ಶ್ರೀ ಕೃಷ್ಣ ಮಠದಲ್ಲಿ ಆಯೋಜನೆ ಮಾಡಲಾಗಿದ್ದ ಶ್ರೀ ವಿಷ್ಣುಸೇವಾ ಸಮಿತಿಯ ಅದ್ದೂರಿ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆಯಿತು.
ಭಾನುವಾರ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಮುಂಜಾನೆ ಭಕ್ತಿ ಸಂಗೀತ, ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಸಂಗೀತ ಮತ್ತು ಧಾರ್ಮಿಕ ವಿಚಾರಧಾರೆಗಳ ಮೂಲಕದೊಂದಿಗೆ ಪ್ರಾರಂಭವಾಯಿತು.
ಹೊಸಪೇಟೆಯ ವಿವಿಧ ಸಮಾಜದ ವಿಷ್ಣು ಸೇವಾ ಸಮಿತಿ ಸದಸ್ಯರು ಒಟ್ಟಾಗಿ ಸೇರಿ ಯಾವುದೇ ಜಾತಿ ಭೇದ ಇಲ್ಲಾದೆ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸುಮಾರು 500 ಕ್ಕೂ ಅಧಿಕ ವಿಷ್ಣು ಸೇವಾ ಸಂಸ್ಥೆಯ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಹೊಸಪೇಟೆ ವಿಷ್ಣು ಸೇವಾ ಸಂಸ್ಥೆಯ ಮುಖ್ಯಸ್ಥ ಮತ್ತು ಜೆಪಿ ಭವನದ ಸಂಸ್ಥಾಪಕ ನಾರಾಯಣ ಭಟ್ಟರು, ಮಲ್ಲಿಗೆ ಹಾಸ್ಪಿಟಲ್ ಮುಖ್ಯಸ್ಥ ಡಾ. ವಿನಾಯಕ, ಶ್ರೀ ಪ್ರೆಸ್ ಮುಖ್ಯಸ್ಥ ಶ್ರೀಪತಿ ಮತ್ತು ವಿವಿಧ ಹೋಟೆಲ್ ಮತ್ತು ಬೇಕರಿ ಮುಖ್ಯಸ್ಥರುಗಳು ಮತ್ತು ಕುಟುಂಬದ ಸದಸ್ಯರು ಯಶಸ್ವಿಯಾಗಿ ಭಾಗವಹಿಸಿದ್ದರು.
ವರದಿ: ಮುರಳಿಧರ್ ನಾಡಿಗೇರ್, ಹೊಸಪೇಟೆ
Discussion about this post