ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ/ಹಂಪಿ: ಶತಮಾನಗಳ ಹಿಂದೆ ವೈಭವೋಪೇತವಾಗಿ ಮೆರದಿದ್ದ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸಾರುವ ಹಂಪಿ ಹಾಗೂ ಆನಗೊಂದಿ ಉತ್ಸವ ಸಂಪನ್ನಗೊಂಡಿದೆ.
ಆಕರ್ಷಕ ಬೆಳಕಿನಲ್ಲಿ ವಿವಿಧ ಕಲಾತಂಡಗಳ ವೈಭವದ ನೃತ್ಯ, ಸಂಗೀತ, ಜಾನಪದ ತಂಡಗಳ ಸಂಗೀತ ಕಾರ್ಯಕ್ರಮಗಳು ರಸಮಂಜರಿ ಕಾರ್ಯಕ್ರಮಗಳು ಜನಮನ್ನಣೆಗೆ ಪಾತ್ರವಾದವು. ಕಥಕ್ಕಳಿ, ಜೋಗತಿ ನೃತ್ಯ, ಭರತನಾಟ್ಯ, ಸುಗಮ ಸಂಗೀತ, ವಚನ ಗಾಯನದ ಅನೇಕ ಕಾರ್ಯಕ್ರಮಗಳು ಸಂಗೀತ ಶಿಲೆಗಳ ನಾಡಿನಲ್ಲಿ ಹೊರಹೊಮ್ಮಿದವು.
ಆನೆಗುಂದಿ ಉತ್ಸವದಲ್ಲಿ ಎರಡು ವೇದಿಕೆಯಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಸಾರುವ ಆನೆಗುಂದಿ ಹೆಸರಾಂತ ಗಾಯಕರು ಹಿನ್ನೆಲೆ ಗಾಯಕರಾದ ವಿಜಯಪ್ರಕಾಶ್ ಆಗಮಿಸಿ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮನರಂಜನೆ ನೀಡಿದರು.
ಶ್ರೀವಿದ್ಯಾರಣ್ಯ ವೇದಿಕೆ ಮತ್ತು ಶ್ರೀಕೃಷ್ಣದೇವರಾಯ ವೇದಿಕೆ ಉತ್ತಮ ಕಾರ್ಯಕ್ರಮಗಳು ಪ್ರಸ್ತುತಗೊಂಡವು. ವಿವಿಧ ಕಲಾ ತಂಡಗಳ, ವೈವಿಧ್ಯಮಯ ಸಂಗೀತ, ನಾಟಕ, ರೂಪಕಗಳು, ವಿಚಾರ ಸಂಕಿರಣ ಮಹಿಳಾ ಗೋಷ್ಠಿ ಮತ್ತು ಯುವ ಗೋಷ್ಠಿಗಳು ಈ ಬಾರಿಯ ಉತ್ಸವ ಕೇಂದ್ರಬಿಂದುವಾಗಿತ್ತು.
ವಸ್ತು ಪ್ರದರ್ಶನದಲ್ಲಿ ಕೃಷಿ ಉತ್ತೇಜನ, ನೀರು ಉಳಿತಾಯ ಮರಳಿನಿಂದ ಮಾಡಿದ ಅನೇಕ ಚಿತ್ರಕಲಾ ಕೃತಿಗಳು ಮತ್ತು ಪುಸ್ತಕ ಭಂಡಾರ ಮತ್ತು ಇತರ ಮಳಿಗೆಗಳು ಜನಾಕರ್ಷಣೆಯ ಕೇಂದ್ರಗಳಾಗಿದ್ದವು.
ಶ್ರೀ ವಿದ್ಯಾರಣ್ಯ ವೇದಿಕೆಯಲ್ಲಿ ಈ ಬಾರಿ ನಮ್ಮ ಕಲ್ಪ ನ್ಯೂಸ್ ವರದಿಗಾರರಾದ ಮುರಳಿಧರ್ ನಾಡಿಗೇರ್ ನಿರೂಪಕರಾಗಿ ಕಾರ್ಯನಿರ್ವಹಿಸಿದರು. ಅವರಿಗೆ ನಮ್ಮ ವತಿಯಿಂದ ಅಭಿನಂದನೆಗಳು
ಗತವೈಭವದ ಹಂಪಿ ಉತ್ಸವ
ಬಿಸಿಲಲ್ಲೂ ಹಂಪಿಯಲ್ಲಿ 2 ದಿನಗಳ ಕಾಲ ನಡೆದ ಕಲೆ, ನಾಡು-ನುಡಿ ಸಂಗೀತ, ಸಂಸ್ಕೃತಿಗಳ ವಿಜಯನಗರ ಸಾಮ್ರಾಜ್ಯದ ಗತ ವೈಭವದ ಪುನರ್ ದರ್ಶನವಾದ ಹಂಪಿ ಉತ್ಸವ ಸಮಾರೋಪಗೊಂಡಿದೆ.
ಆಕರ್ಷಕ ಬೆಳಕಿನಲ್ಲಿ ವಿವಿಧ ಕಲಾತಂಡಗಳ ವೈಭವದ ನೃತ್ಯ, ಸಂಗೀತ, ಜಾನಪದ ತಂಡಗಳ ಸಂಗೀತ ಕಾರ್ಯಕ್ರಮಗಳು ರಸಮಂಜರಿ ಕಾರ್ಯಕ್ರಮಗಳು ಜನಮನ್ನಣೆಗೆ ಪಾತ್ರವಾದವು. ಕಥಕ್ಕಳಿ, ಜೋಗತಿ ನೃತ್ಯ, ಭರತನಾಟ್ಯ, ಸುಗಮ ಸಂಗೀತ, ವಚನ ಗಾಯನದ ಅನೇಕ ಕಾರ್ಯಕ್ರಮಗಳು ಸಂಗೀತ ಶಿಲೆಗಳ ನಾಡಿನಲ್ಲಿ ಹೊರಹೊಮ್ಮಿದರೆ, ಶ್ರೀ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಹೊಸಪೇಟೆಯ ಸ್ವರಗಂಗಾ ಸುಗಮ ಸಂಗೀತ ಅಕಾಡಮಿಯ ಅನುಪ್ ಕುಮಾರ್ ಮತ್ತು ತಂಡದವರ ಕಂಠಸಿರಿಯಲ್ಲಿ ಪ್ರತಿಧ್ವನಿಸಿದವು.
ಹಂಪಿ ಉತ್ಸವಕ್ಕೆ ರಂಗು ತುಂಬಿದ ರಾಕಿಂಗ್ ಸ್ಟಾರ್ ಯಶ್
ವಿಜಯನಗರ ಸಾಮ್ರಾಜ್ಯದ ವೈಭವವನ್ನು ಸಾರುವ ಹಂಪಿ ಉತ್ಸವಕ್ಕೆ ರಾಕಿಂಗ್ ಸ್ಟಾರ್ ಯಶ್ ಪಾಲ್ಗೊಂಡು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಕಿ ಭಾಯ್ ಯಶ್ ಅಣ್ತಮ್ಮರಿಗೆ ಮನರಂಜನೆ ನೀಡಿದ್ದಾರೆ. ಕಡುನೀಲಿ ಬಣ್ಣದ ಕುರ್ತಾದಲ್ಲಿ ಮಿಂಚಿದ ಯಶ್ ತಮ್ಮ ಅಭಿಮಾನಿಗಳಿಗಾಗಿ ಡೈಲಾಗ್ ಹೇಳಿ ಮನರಂಜನೆ ನೀಡಿದರು.
ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ, ಕಡಲೆಕಾಳು ಗಣಪ ಎದುರು ಬಸವ ಸೇರಿ 4 ವೇದಿಕೆಗಳಲ್ಲಿ ಉತ್ತಮ ಕಾರ್ಯಕ್ರಮಗಳು ಪ್ರಸ್ತುತಗೊಂಡವು. ವಿವಿಧ ಕಲಾ ತಂಡಗಳ ಶೋಭಾಯಾತ್ರೆ, ವೈವಿಧ್ಯಮಯ ಸಂಗೀತ, ನಾಟಕ, ರೂಪಕಗಳು, ದೇಶದ ಬೆನ್ನೆಲುಬು ಅನ್ನದಾತರ ವಿಚಾರಸಂಕಿರಣ ಈ ಬಾರಿಯ ಉತ್ಸವದ ಕೇಂದ್ರಬಿಂದುವಾಗಿತ್ತು.
ಸಾಹಿತ್ಯ-ಸಂಸ್ಕೃತಿಯ ವಿಚಾರಸಂಕಿರಣ, ಕವಿಗೋಷ್ಠಿ ಸೇರಿ ನಾನಾ ಕಾರ್ಯಕ್ರಮಗಳು ಉತ್ಸವಕ್ಕೆ ಕಳೆ ಕಟ್ಟಿದವು. ವಸ್ತು ಪ್ರದರ್ಶನಕ್ಕೆ ಕೃಷಿ ಉತ್ತೇಜನ, ನೀರು ಉಳಿತಾಯ ಮರಳಿನಿಂದ ಮಾಡಿದ ಅನೇಕ ಚಿತ್ರಕಲಾಕೃತಿಗಳು ಮತ್ತು ಪುಸ್ತಕ ಭಂಡಾರ ಮತ್ತು ಇತರ ಮಳಿಗೆಗಳು ಜನಾಕರ್ಷಣೆಯ ಕೇಂದ್ರಗಳಾಗಿದ್ದವು.
ಬಿಸಿಲು, ವಿದ್ಯಾರ್ಥಿಗಳ ಪರೀಕ್ಷಾ ಸಮಯ ಹಾಗೂ ಕಡಿಮೆ ಕಾಲಾವಕಾಶದಿಂದಾಗಿ ಪ್ರಚಾರದ ಕೊರತೆ ಮಧ್ಯೆಯೂ ಮೊದಲ ದಿನ 1 ಲಕ್ಷಕ್ಕೂ ಅಧಿಕ ಜನರು ಉತ್ಸವದಲ್ಲಿ ಪಾಲ್ಗೊಂಡಿದ್ದರೆ, ಕಡೇ ದಿನ ಶನಿವಾರ ಇನ್ನೂ ಹೆಚ್ಚಿನ ಜನರು ಆಗಮಿಸಿ ಸಾಂಸ್ಕೃತಿಕ ಕಾಯಕ್ರಮಗಳನ್ನು ಕಣ್ತುಂಬಿಕೊಂಡರು.
ಕಾರ್ಯಕ್ರಮದ ಅಂಗವಾಗಿ ನಡೆದ ಮಹಿಳಾ-ಪುರುಷ ಜಗಜಟ್ಟಿಗಳ ಕುಸ್ತಿ ಕಾಳಗ ನೋಡುಗರಿಗೆ ರೋಮಾಂಚನ ಮೂಡಿಸಿದರೆ, ಕಮಲಾಪುರ ಕೆರೆಯಲ್ಲಿ ನಡೆದ ಜಲ ಕ್ರೀಡೆ, ತೆಪ್ಪದ ಓಟ ಸ್ಪರ್ಧೆ, ಸಾಹಸ, ಗ್ರಾಮೀಣ ಕ್ರೀಡೆಗಳು ನೋಡುಗರನ್ನು ಮೂಕ ವಿಸ್ಮಿತಗೊಳಿಸಿದವು. ಮೆಹೆಂದಿ, ರಂಗೋಲಿ ಸ್ಪರ್ಧೆಗಳು ಜನರನ್ನು ಆಕರ್ಷಿಸಿದವು.
ಒಟ್ಟಾರೆಯಾಗಿ, ಈ ಹಿಂದೆ ನವೆಂಬರ್’ನಲ್ಲಿ ನಡೆಯುತ್ತಿದ್ದ ಹಂಪಿ ಉತ್ಸವಕ್ಕೆ ಹೋಲಿಸಿದರೆ ಈ ಬಾರಿ ಜನಸಂಖ್ಯೆ ಕಡಿಮೆಯಾದರೂ, ಮಧ್ಯಾಹ್ನದ ಬಿಸಿಲಿಗೆ ಹೊರಬರದ ಜನರು ಸಂಜೆಯಾಗುತ್ತಿದ್ದಂತೆ ತಡೋಪತಂಡವಾಗಿ ಬಂದಿಳಿದರು. ಕಿಕ್ಕಿರಿದಿದ್ದ ಉತ್ಸವದ ಕಾರ್ಯಕ್ರಮಗಳೇ ಜನಪ್ರಿಯತೆಯನ್ನು ಸಾರಿದವು.
ಸರ್ಕಾರ ಹಂಪಿ ಉತ್ಸವವನ್ನು ಇನ್ನಷ್ಟು ಅದ್ದೂರಿಯಾಗಿ ಮಾಡಬೇಕಿತ್ತು ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬಂತು. ಸಮಾರಂಭಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಸಿ.ಟಿ ರವಿ. ಅವರು ಮುಂದಿನ ದಿನಗಳಲ್ಲಿ ಹಂಪಿ ಉತ್ಸವವನ್ನು ಮೈಸೂರು ದಸರಾ ಆಚರಣೆಯಂತೆ ಆಚರಿಸಲಾಗುವುದು ಎಂದು ಜನರಿಗೆ ಸಂತಸ ಹೆಚ್ಚಿಸಿದರು.
ಬಳ್ಳಾರಿ ಶಾಸಕರು ಹಾಗೂ ಆರೋಗ್ಯ ಸಚಿವರಾದ ಬಿ. ಶ್ರೀರಾಮುಲು ಅವರು ತುಂಗಭದ್ರ ನದಿ ನೀರನ್ನು ವರ್ಷದಲ್ಲಿ ಎರಡು ಬಾರಿ ರೈತರಿಗೆ ಒದಗಿಸಿಕೊಡಬೇಕು ಮತ್ತು ಬೆಳೆಯನ್ನು ಬೆಳೆಯಲು ಅನುಕೂಲ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿಗಳನ್ನು ವಿನಂತಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ವಿಜಯನಗರ ಕ್ಷೇತ್ರದ ಶಾಸಕರಾದ ಬಿ.ಎಸ್. ಆನಂದ್ ಸಿಂಗ್ ರವರು ಸಚಿವರಾಗವುದು ನನ್ನ ಕನಸಲ್ಲ. ವಿಜಯನಗರ ಕ್ಷೇತ್ರವನ್ನು ಜಿಲ್ಲೆಯನ್ನಾಗಿ ಮಾಡುವುದೇ ನನ್ನ ಮೊದಲನೆಯ ಕರ್ತವ್ಯ ಎಂದರು.
ಕಣ್ಮನ ಸೆಳೆದ ವಿದ್ಯುತ್ ದೀಪಾಲಂಕಾರ
ವಿದ್ಯುತ್ ದೀಪಾಲಂಕಾರದಿಂದ ವಿಜಯನಗರ ಸಾಮ್ರಾಜ್ಯದ ಗತಕಾಲದ ಕಲ್ಲಿನ ಮಂಟಪದ ಕಂಬಗಳು, ರಥಬೀದಿ ಸೇರಿ ಇತರೆಡೆ ಪ್ರಜ್ವಲಿಸುತ್ತಿದ್ದರೆ, ಹಂಪಿಯ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ಬಿಷ್ಠಪ್ಪಯ್ಯ ಗೋಪುರವು ಬಂಗಾರದ ಹೊಳಪಿನ ಬೆಳಕಿನಲ್ಲಿ ಕಣ್ಮನ ಸೆಳೆಯುವಂತಿತ್ತು.
ನಿಗದಿಯಂತೆ ಹಂಪಿಯ ಸ್ಮಾರಕಗಳ ಮದ್ಯ ನಾಲ್ಕು ವೇದಿಕೆಗಳು ಈ ಬಾರಿ ಪ್ರಮುಖ ವೇದಿಕೆ ಎಂಬ ಪಟ್ಟವನ್ನ ಬಸವಣ್ಣ ಮಂಟಪ ಕಳೆದುಕೊಂಡಿದ್ದು, ಎರಡನೆ ವೇದಿಕೆಯಾಗಿ. ಅದೇ ರೀತಿಯಾಗಿ ಪ್ರಮುಖ ವೇದಿಕೆಯಾಗಿ ಗಾಯತ್ರಿ ಪೀಠ ವೇದಿಕೆ ಸಿದ್ಧತೆ ಮಾಡಿ ಸಿಎಂ ಯಡಿಯೂರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇನ್ನು ಈ ಸಂಬಂಧ ಹಂಪಿಯಲ್ಲಿ ವೇದಿಕೆಗಳು ಸೇರಿದಂತೆ ಪ್ರಮುಖ ಸ್ಮಾರಕಗಳಿಗೆ ಬಣ್ಣ ಬಣ್ಣದ ದೀಪಾಲಂಕಾರ ಮಾಡಲಾಗಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆದಂತೆ ಎರಡು ದಿನಗಳ ಕಾಲ ನಡೆದ ಹಂಪಿ ಉತ್ಸವದಲ್ಲಿ ಈ ಬಾಗದ ಕಲಾ ರಸಿಕರನ್ನು ತಣಿಸಲು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಕಲಾವಿದರು ಇಲ್ಲಿಗೆ ಆಗಮಿಸಿ ಪ್ರದರ್ಶನ ನೀಡಿದರು.
ಮೊದಲನೆಯ ದಿನ ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಮನೋಮೂರ್ತಿ ತಂಡದವರು ಪ್ರಮುಖ ವೇದಿಕೆಯಲ್ಲಿ ಪ್ರದರ್ಶನ ನೀಡಿದರೆ, ಎರಡನೆಯ ದಿನ ಖ್ಯಾತ ಹಿಂದಿ ಗಾಯಕಿ ನೀತಿ ಮೋಹನ್ ತಮ್ಮ ಸಂಗೀತ ರಸದೌತಣದಿಂದ ಉತ್ಸವಕ್ಕೆ ಮೆರಗು ನೀಡಿದರು. ಅಲ್ಲದೆ ವಿಜಯನಗರ ಸಾಮ್ರಾಜ್ಯದ ಘತ ವೈಭವವನ್ನು ಸಾರುವಂತ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಹಂಪಿಯ ಆನೆ ಲಾಳ ಮೈದಾನದಲ್ಲಿ ನಡೆಯುತ್ತಿದ್ದು, ಇದು ಜ.16ರವರೆಗೂ ನಡೆಯಲಿದೆ.
ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ
Get in Touch With Us info@kalpa.news Whatsapp: 9481252093
Discussion about this post