ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸಪೇಟೆ: ಆಹಾರ ಕಿಟ್ ಗಾಗಿ ಪ್ರಾಣವನ್ನು ಪಣಕ್ಕಿಟ್ಟಿರುವ ಜನ ಸಾಮಾಜಿಕ ಅಂತರ ಎಂಬ ಕಲ್ಪನೆಯನ್ನೇ ಮರೆತು ಬಿಟ್ಟಿದ್ದಾರೆ. ಅದರೆ ವಿಪರ್ಯಾಸವೆಂದರೆ ಇಲ್ಲಿನ ಅಧಿಕಾರಿ ವರ್ಗ ಕಣ್ಣಿದ್ದೂ ಕುರುಡಾಗಿರುತ್ತಾರೆ. ಸಾಮಾಜಿಕ ಅಂತರವಿರಲಿ ಸಾಮಾಜಿಕ ನ್ಯಾಯ ಕೂಡ ಇಲ್ಲ ಎಂಬಂತಾಗಿದೆ.
ಹೊಸಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನಿನ್ನೆಯಿಂದ ಪ್ರಾರಂಭವಾದ ಆನಂದ್ ಸಿಂಗ್ ರವರು ನೀಡಲಾಗುತ್ತಿರುವ ದಿನಸಿ ಪ್ಯಾಕೆಟ್ಗಳನ್ನು ಪಡೆಯಲು ಜನ ನೂಕುನುಗ್ಗಲು ದೇಶದ ಅತ್ಯಂತ ಮಾರಕ ಕೊರೋನಾ ವೈರಸ್ ಹೆಚ್ಚಳದ ಹಿನ್ನೆಲೆಯಲ್ಲಿ ಅನೇಕ ಜಾಗೃತಿ ಹಾಗೂ ಸುರಕ್ಷತಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡ ಹಂತದಲ್ಲಿ ಇಂದು ಹೊಸಪೇಟೆ ನಗರದಲ್ಲಿ ಸಾರ್ವಜನಿಕರು ನಿಯಮವನ್ನು ಉಲ್ಲಂಘಿಸಿ ಸರ್ಕಾರಕ್ಕೆ ಸೆಡ್ಡು ಹೊಡೆದು ನಿಂತಿರುತ್ತಾರೆ.
ಈವರೆವಿಗೂ ಹೊಸಪೇಟೆ ನಗರದಲ್ಲಿ ಕೊರೋನಾ ಪ್ರಕರಣದಲ್ಲಿ ಹೆಚ್ಚೆಚ್ಚು ಕಂಡುಬರುತ್ತಿದ್ದು ಹೆಚ್ಚಿನ ಸುರಕ್ಷತೆಯನ್ನು ಮನದಲ್ಲಿಟ್ಟು ಕೊಂಡು ಲಾಕ್ ಡೌನ್ ಹೇರಲಾಗಿದೆ. ಹೊಸಪೇಟೆ ನಗರವೊಂದರಲ್ಲೇ ಈ ವರೆಗೂ ಹತ್ತು ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಹೀಗಿದ್ದೂ ಇಲ್ಲಿನ ಅಧಿಕಾರಿ ವರ್ಗಕ್ಕೆ ಬುದ್ದಿ ಬಂದಂತೆ ಕಾಣುತ್ತಿಲ್ಲ. ಇತ್ತ ಇಲ್ಲಿನ ಜನರ ಅಗತ್ಯ ವಸ್ತುಗಳಿಗೆ ಪರದಾಡುತ್ತಿದ್ದಾರೆ. ಕೇವಲ ಆಹಾರದ ಕಿಟ್ ಪಡೆಯೋಕೆ ಪ್ರಾಣವನ್ನೂ ಲೆಕ್ಕಿಸದೇ ಜನ ಸಹಸ್ರೋಪಾದಿಯಲ್ಲಿ ಧಾವಿಸಿದ್ದು, ಆಹಾರ್ ಕಿಟ್ ಪಡೆಯಲು ನೂಕಾಟ ತಳ್ಳಾಟ ನಡೆಸಿದ್ದಾರೆ. ಇದನ್ನು ನೋಡಿದ ಸರ್ಕಾರಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸುಮ್ಮನೆ ನಿಂತು ಅಸಾಹಾಯಕರಾಗಿರುತ್ತಾರೆ.
ಹೊಸಪೇಟೆ ಬಳ್ಳಾರಿ ರಸ್ತೆಯ ಕಾರಿಗನೂರು ಪ್ರದೇಶದ ಸರ್ಕಾರಿ ಶಾಲೆಯ ಆವರಣದಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ಆಹಾರ ಕಿಟ್ ವಿತರಿಸುತ್ತಾರೆ ಎಂಬ ಸುದ್ದಿ ನಿನ್ನೆ ದಿನ ಸಾಯಂಕಾಲ ಹಬ್ಬಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಇಂದು ಬೆಳಗಿದ ತಕ್ಷಣ ಆಗಮಿಸತೊಡಗಿದರು. ಕಾರಿಗನೂರು ಮತ್ತು ಸುತ್ತಮುತ್ತಲಿನ ಹಳ್ಳಿಯ ಜನರು ಸಹ ಸೇರಿ ಈ ಘಟನೆಗೆ ಕಾರಣೀಭೂತರಾಗಿದ್ದಾರೆ. ಇತ್ತ ಹೊಸಪೇಟೆಗೆ ಎಸ್ ಆರ್ ನಗರದಲ್ಲಿಯೂ ಸಹಿತ ಈಗಾಗಲೇ ಹತ್ತು ಪ್ರಕರಣಗಳು ಪಾಸಿಟಿವ್ ಕಂಡು ಬಂದಿರುವ ಸ್ಥಳದಲ್ಲಿ ಸಹಿತ ಸಾರ್ವಜನಿಕರು ಇದೇ ರೀತಿ ರಸ್ತೆಯಲ್ಲಿ ಆಹಾರದ ಕಿಟ್ ಪಡೆಯಲು ನೂರಾರು ಜನ ಸೇರಿರುವಂತಹ ದೃಶ್ಯ ಕಣ್ಣ ಮುಂದೆ ಬಂದಿತು ಯಾರಿಂದ ಈ ತಪ್ಪು ನೆಡೆದಿದೆ ಎಂಬುದು ವಿಸ್ಮಯವಾಗಿದೆ. ಸರ್ಕಾರದ ಅಧಿಕಾರಿಗಳಿಂದಲೇ , ಸಾರ್ವಜನಿಕರಿದಲೇ ಅಥವಾ ಆನಂದ್ ಸಿಂಗ್ ರವರಿಂದಲೇ ನೀವೆ ಯೋಚಿಸಿ ?
ಬಡವರ ಪಾಲಿಗೆ ವರವಾಗಿ ಹಸಿವನ್ನು ಇಂಗಿಸಲು ನಿಂತು ಸುಮಾರು ಏಳು ಕೋಟಿ ಹಣದಲ್ಲಿ ಆನಂದ್ ಸಿಂಗ್ ಅವರು ಆಹಾರದ ಕಿಟ್ ನೀಡಲು ಮುಂದಾಗಿರುವುದು ತಪ್ಪಾ…?
ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ
Get in Touch With Us info@kalpa.news Whatsapp: 9481252093
Discussion about this post