ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ |
ಇಲ್ಲಿನ ತುಂಗಭದ್ರಾ ಅಣೆಕಟ್ಟೆಯ 19 ನೇ ಗೇಟ್ ಚೈನ್ ತುಂಡಾಗಿ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದ್ದು, 35 ಸಾವಿರ ಕ್ಯುಸೆಕ್ಸ್ ಗೂ ಅಧಿಕ ನೀರು ಪೋಲಾಗುತ್ತಿದೆ.
ಘಟನೆ ಪರಿಣಾಮ, ಈ ಭಾಗದಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಎಲ್ಲ ರೀತಿಯ ಮುನ್ನೆಚ್ಚರಿಕೆ ತುರ್ತು ಕ್ರಮ ಕೈಗೊಳ್ಳಲಾಗಿದೆ.
ರಾತ್ರಿ 11:10 ರ ಸುಮಾರಿಗೆ ತುಂಗಭದ್ರಾ ಅಣೆಕಟ್ಟಿನ ಗೇಟ್ ನಂ:-19 ರ ಚೈನ್ ಲಿಂಕ್ ಕಟ್ ಆಗಿದ್ದು,ಗೇಟ್ ಕಾಣಿಸುತ್ತಿಲ್ಲ, ಭಾರೀ ಪ್ರಮಾಣದ ನೀರು (ಗೇಟ್ ನಂ:-19 ರಿಂದಲೇ ಸರಿಸುಮಾರು 35000 ಕ್ಯೂಸೆಕ್ಸ್) ನದಿಗೆ ಹೋಗುತ್ತಿದೆ.
ಈ ಅವಘಡದ ಹಿನ್ನೆಲೆಯಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು, ಸಚಿವರೊಂದಿಗೆ ಹಾಗೂ ಜಲಸಂಪನ್ಮೂಲ ಇಲಾಖೆಯ ಮುಖ್ಯಕಾರ್ಯದರ್ಶಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿ, ಅಣೆಕಟ್ಟಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಲು ಸೂಚಿಸಿದರು.
ನದಿ ಪಾತ್ರದ ಗ್ರಾಮಗಳ ಸಾರ್ವಜನಿಕರಿಗೆ ಜಾಗರೂಕತೆಯಿಂದಿರಲು ಸೂಚಿಸುವಂತೆ ಕ್ರಮವಹಿಸಲು ತಿಳಿಸಿದರು.
ಗೇಟ್ ನಂ.19 ರಿಂದ ಅಂದಾಜು 35 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಒಟ್ಟು 48 ಸಾವಿರ ಕ್ಯೂಸೆಕ್ ನದಿಗೆ ಬಿಡಲಾಗುತ್ತಿದೆ.
ತುರ್ತು ಮುನ್ನೆಚ್ಚರಿಕೆಗಳು
ನೀವು ತುಂಗಭದ್ರಾ ಅಣೆಕಟ್ಟಿನ ಕೆಳಗಿರುವ ಅಪಾಯದ ಪ್ರದೇಶದಲ್ಲಿದ್ದರೆ, ನಿಮ್ಮನ್ನು ಮತ್ತು ನಿಮ್ಮ ಪ್ರೀತಿಪಾತ್ರರನ್ನು ರಕ್ಷಿಸಲು ತ್ವರಿತವಾಗಿ ಕಾರ್ಯನಿರ್ವಹಿಸುವುದು ಬಹಳ ಮುಖ್ಯ.
ಅಣೆಕಟ್ಟು ಮತ್ತು ನದಿ ತೀರದಿಂದ ದೂರವಿರಿ. ನೀವು ಅಪಾಯದಲ್ಲಿರುವ ಪ್ರದೇಶದಲ್ಲಿದ್ದರೆ ಆಸ್ತಿಯನ್ನು ಸುರಕ್ಷಿತಗೊಳಿಸಿ. ಎಚ್ಚರಿಕೆ ನೀಡಿದರೆ ತಕ್ಷಣವೇ ಹೈಯರ್ ಗ್ರೌಂಡ್‌ಗೆ ತೆರಳಿ. ನಿರೀಕ್ಷಿಸಬೇಡಿ.
ಸ್ಥಳಾಂತರಿಸುವ ಮಾರ್ಗಗಳನ್ನು ಬಳಸಿ ಮತ್ತು ಪ್ರವಾಹ ಪ್ರದೇಶಗಳ ಮೂಲಕ ಚಾಲನೆ ಮಾಡುವುದನ್ನು ತಪ್ಪಿಸಿ.
ಎಮರ್ಜೆನ್ಸಿ ಕಿಟ್
ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಿ: ನೀರು, ಆಹಾರ, ಪ್ರಥಮ ಚಿಕಿತ್ಸೆ, ಔಷಧಗಳು, ದಾಖಲೆಗಳು, ಬ್ಯಾಟರಿ, ರೇಡಿಯೋ, ಚಾರ್ಜರ್‌ಗಳು, ನಗದು ಮತ್ತು ಸಾಕುಪ್ರಾಣಿಗಳ ಸರಬರಾಜುಗಳನ್ನು ಸೇರಿಸಿ.
ಸಾಧ್ಯವಾದರೆ ಅನಿಲ, ವಿದ್ಯುತ್ ಮತ್ತು ನೀರನ್ನು ಆಫ್ ಮಾಡಿ. ಬೆಲೆಬಾಳುವ ವಸ್ತುಗಳನ್ನು ಮೇಲಿನ ಮಹಡಿಗಳಿಗೆ ಸರಿಸಿ. ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿ.
ಚಲಿಸುವ ನೀರಿನ ಮೂಲಕ ನಡೆಯಬೇಡಿ. ಪ್ರವಾಹದ ನೀರನ್ನು ಕುಡಿಯಬೇಡಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post