ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ |
ಇಂದಿನ ಜಾಗತಿಕ ಮಾನವ ಸಂಪನ್ಮೂಲ ವ್ಯವಸ್ಥೆಯಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಭಾವನಾತ್ಮಕ ಪೂರಕವಾಗಿ ಮುಂದುವರೆಯುತ್ತದೆ ಎಂದು ಸಲಹೆಗಾರ ಹಾಗೂ ತರಬೇತುದಾರರಾದ ಬೆಂಗಳೂರಿನ ಗಿರೀಶ್ ಹಿರೇಮಠ್ ಹೇಳಿದರು.
44ನೇ ಎನ್’ಐಪಿಎಂ – ನಾರ್ಥ್ ಕರ್ನಾಟಕ ಚಾಪ್ಟರ್ ವತಿಯಿಂದ ಹೊಟೇಲ್ ಮಲ್ಲಿಗೆ ಆವರಣದಲ್ಲಿ ಅದ್ದೂರಿಯಾಗಿ ನಡೆದ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಇಂದಿನ ಜಾಗತಿಕ ಮಾನವ ಸಂಪನ್ಮೂಲ ವ್ಯವಸ್ಥೆಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಎಷ್ಟರಮಟ್ಟಿಗೆ ಭಾವನಾತ್ಮಕವಾಗಿ ಪೂರಕವಾಗಿ ಮುಂದುವರಿಯುತ್ತಿದೆ ಎಂಬುದರ ಬಗ್ಗೆ ಮಾತನಾಡಿದರು. ನಂತರ ಸಮಿತಿಯ ಸದಸ್ಯರ ಜೊತೆಗೆ ಮತ್ತು ಭಾಗವಹಿಸಿದ ಸದಸ್ಯರ ಜೊತೆಗೆ ಪ್ರಶ್ನೋತ್ತರ ನಡೆಸಿದರು.
ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ವಕೀಲ ವಿಲಾಸ್ ದಾರ್ತಾ ಮಾತನಾಡಿ, ಕಾರ್ಖಾನೆಗಳಲ್ಲಿ ಅಥವಾ ಉದ್ದಿಮೆಗಳಲ್ಲಿ ಪ್ರಸ್ತುತ ಇರುವ ಇಂಡಸ್ಟಿçಯಲ್ ರಿಲೇಷನ್ ಮತ್ತು ಅದರಿಂದ ಉಂಟಾಗುವ ಸನ್ನಿವೇಶ ಇದರ ಬಗ್ಗೆ ಕುಲಂಕುಶವಾಗಿ ವಿಷಯವನ್ನು ಮಂಡಿಸಿದರು.
ಸದಸ್ಯರ ಜೊತೆಗೆ ತಮ್ಮ ಮುಂದೆ ಎದುರಾಗುತ್ತಿರುವ ಸಮಸ್ಯೆಗಳನ್ನು ತಿಳಿದು ಅದಕ್ಕೆ ಸಮಂಜಸವಾದ ಉತ್ತರವನ್ನು ತಮ್ಮ ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದರು.
ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಜನರಲ್ ಮ್ಯಾನೇಜರ್ ಎನ್.ಎಸ್. ಗೋವಿಂದರಾಜು ಮಾತನಾಡಿ, ಕರ್ನಾಟಕದ ಗ್ರಾಚುಟಿ ನಿಯಮಗಳು ಮತ್ತು ಅದರಿಂದ ಬರುವ ಸಮಸ್ಯೆ ಆದಾಯ ಮತ್ತು ಉಪಯೋಗಗಳ ಬಗ್ಗೆ ಚರ್ಚಿಸಿದರು. ನಂತರ ಸಮಸ್ಯೆಗೆ ಉತ್ತರವನ್ನು ತಮ್ಮ ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದರು.
ಧಾರವಾಡದ ಇಸ್ಕಾನ್ ಸಂಸ್ಥೆಯ ಭಗತ್ ಶ್ರವಣ್ ದಾಸ್ ಮಾತನಾಡಿ, ಒತ್ತಡದ ಯಾಂತ್ರಿಕ ಜೀವನದಲ್ಲಿ ಮನುಷ್ಯರು ನಗುವನ್ನ ಕಾಣುವುದು ಹೇಗೆ? ಅದಕ್ಕೆ ಬೇಕಾಗುವ 12 ಪ್ರಾಯೋಗಿಕ ಸಲಹೆಗಳನ್ನು ಬಳಸಿಕೊಳ್ಳುವುದರ ಮೂಲಕ ಸದಾ ನಗುವನ್ನು ಕಾಣುವುದು ಹೇಗೆ ಎಂಬುದನ್ನು ಕೂಲಂಕಶವಾಗಿ ಚರ್ಚಿಸಿದರು.
ನಾರ್ತ್ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಪಿ. ನಾರಾಯಣ ಮಾತನಾಡಿ, ಈ ತರಹದ ಉತ್ತಮವಾದ ಅನುಕೂಲ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಿನ ದಿನಗಳಲ್ಲಿ ಶ್ರಮಿಸಲಾಗುವುದು ಎಂದರು.
Also read: ವಿಶ್ವ ರಂಗಭೂಮಿ ದಿನಾಚರಣೆ | ಮಾ.26ರಿಂದ 28ವರೆಗೆ ಶಿವಮೊಗ್ಗ ರಂಗ ಹಬ್ಬ ಉತ್ಸವ
ಒಂದು ದಿನದ ಕಾರ್ಯಗಾರದಲ್ಲಿ ಉತ್ತರ ಕರ್ನಾಟಕ ಭಾಗದ ಸುಮಾರು 40 ಕಾರ್ಖಾನೆಗಳ ಮಾನವ ಸಂಪನ್ಮೂಲ ಮತ್ತು ಸಾಮಾನ್ಯ ಆಡಳಿತ ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದರು. ಹೊಸಪೇಟೆ ವಿಜಯನಗರ ಭಾಗದ ಎಂಎಸ್’ಡಬ್ಲ್ಯೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಆರ್.ವಿ. ಗುಮಾಸ್ತೆ, ಹೊಸಪೇಟೆ ಸ್ಟೀಲ್ಸ್ ಲಿಮಿಟೆಡ್ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಶುಭಂಕರ್ ಪಾಲ್, ಬಳ್ಳಾರಿ-ವಿಜಯನಗರ ಜಿಲ್ಲೆಯ ಕೈಗಾರಿಕೆ ಮತ್ತು ವಾಣಿಜ್ಯ ವಿಭಾಗದ ಅಧ್ಯಕ್ಷ ಅಶ್ವಿನ್ ಕೋತಂಬರಿ, ಪಿ. ನಾರಾಯಣ ಅಧ್ಯಕ್ಷರು, ವಿಜಯನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು, ಎನ್’ಐಪಿಎಂ ನಾರ್ಥ್ ಕರ್ನಾಟಕ ಚಾಪ್ಟರ್ ಹಾಗೂ ಕಾರ್ಯನಿರ್ವಾಹಕ ಉಪಾಧ್ಯಕ್ಷರು ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಅವರುಗಳು ಪಾಲ್ಗೊಂಡಿದ್ದರು.
ಒಂದು ದಿನದ ಕಾರ್ಯಗಾರದಲ್ಲಿ, ಎಸ್’ಎಲ್’ಆರ್ ಲಿಮಿಟೆಸ್, ಮಿನರಾ ಸ್ಟೀಲ್ಸ್ ಲಿಮಿಟೆಡ್, ಎಂಎಸ್ ಮೆಟಲ್ಸ್, ಹೊಸಪೇಟೆ ಸ್ಟೀಲ್ ಲಿಮಿಟೆಡ್ ಅಲ್ಟ್ರಾಟೆಕ್, ಎಂಎಸ್’ಪಿಎಲ್, ಜಿಂದಾಲ್, ಓರಿಯೆಂಟಲ್ ಸಿಮೆಂಟ್, ಅಲ್ಟಾçಟೆಕ್ ಸಿಮೆಂಟ್, ಬಿಕೆಜಿ ಮೈನಿಂಗ್ ಎಕ್ಸ್ ಇಂಡಿಯಾ, ಆರ್’ಟಿಪಿಎಸ್ ಮತ್ತು ಬಿಟಿಪಿಎಸ್ ಬಿಎಂಎಂ ಇಸ್ಪಾತ್ ಲಿಮಿಟೆಡ್ ಇನ್ನೂ ಅನೇಕ ಕಾರ್ಖಾನೆಗಳ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದರು.
ಆರಂಭದಲ್ಲಿ ಎನ್’ಐಪಿಎಂ ರಾಷ್ಟ್ರೀಯ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಸಂಸ್ಥಾಪನಾ ದಿನದ ಕಾರ್ಯಕ್ರಮಕ್ಕಾಗಿ ಶುಭಾಶಯಗಳನ್ನು ತಿಳಿಸಿದ ವಿಡಿಯೋವನ್ನು ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರದರ್ಶಿಸಲಾಯಿತು.
ಈ ಹಿಂದೆ ಎನ್’ಐಪಿಎಂ ನಾರ್ತ್ ಕರ್ನಾಟಕ ಚಾಪ್ಟರ್’ನಲ್ಲಿ ಸತತವಾಗಿ ಕಾರ್ಯ ಯೋಜನೆಗಳನ್ನು ಹಾಕಿಕೊಂಡು ಕೆಲಸ ನಿರ್ವಹಿಸಿದ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಸನ್ಮಾನಿಸುವುದರ ಮೂಲಕ ಶುಭಾಶಯಗಳನ್ನು ಕೋರಿದರು. ಕೊಪ್ಪಳದ ಕುಮಾರಿ ಸಹನಾ ದೇಸಾಯಿ ಅವರು ಭರತನಾಟ್ಯ ಪ್ರದರ್ಶಿಸಿದರು.
(ವರದಿ: ಮುರಳೀಧರ್ ನಾಡಿಗೇರ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post