ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ |
ಶೃಂಗೇರಿ ಪೀಠಾಧಿಪತಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು #Shri Bharathi Thirtha Mahaswami of Shringeri Mutt ಸನ್ಯಾಸ ದೀಕ್ಷೆ ಸ್ವೀಕರಿಸಿ 50 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ “ಸುವರ್ಣ ಭಾರತೀ” ಶೀರ್ಷಿಕೆಯಡಿ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳ ಸಾನಿಧ್ಯದಲ್ಲಿ ಅಮರಾವತಿಯ ಚಿಂತಾಮಣಿ ಮಠದಲ್ಲಿ ಪ್ರವಚನ ಜರುಗಿತು.
ಕಾರ್ಯಕ್ರಮದಲ್ಲಿ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಆಗಮಿಸಿದ್ದು, ಶ್ರೀ ಮಠದ ಭಕ್ತಾದಿಗಳು ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಶ್ರೀಗಳು ಶ್ರೀ ಶಂಕರಾಚಾರ್ಯರ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.
ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ಜೀವನ ಚರಿತ್ರೆಯ ಕುರಿತು ಒಂದು ಸಣ್ಣ ಕಥೆ ಮೂಲಕ ಚಿಂತಾಮಣಿ ಮಠದ ಶ್ರೀಶಿವಾನಂದ ಭಾರತೀ ಚಿಂತಾಮಣಿ ಮಹಾಸ್ವಾಮಿಗಳವರ ಪ್ರವಚನದಲ್ಲಿ ತಿಳಿಸಿದರು.
Also read: ಗಂಡನಿಂದ ಜೀವನಾಂಶ ಪಡೆಯಲು ಮುಸ್ಲಿಂ ಮಹಿಳೆ ಅರ್ಹಳು: ಸುಪ್ರೀಂ
ಕಾರ್ಯಕ್ರಮದ ನಂತರ ಶಂಕರಾಚಾರ್ಯರಿಗೆ ಮಹಾಮಂಗಳಾರತಿಯನ್ನು ನೆರವೇರಿಸಿ, ನೆರದಿದ್ದ ಎಲ್ಲಾ ಭಕ್ತರಿಗೆ ಸ್ವಾಮೀಜಿಗಳಿಂದ ಆಶೀರ್ವಾದ ಮೂಲಕ ಫಲವನ್ನ ನೀಡುವುದರ ಮೂಲಕ ಪ್ರಸಾದವನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಚಿಂತಾಮಣಿ ಮಠದ ಭಕ್ತರು ಹೊಸಪೇಟೆ ಮತ್ತು ಸುತ್ತಮುತ್ತಲಿನ ಬ್ರಾಹ್ಮಣ ಸಮಾಜದ ಸದಸ್ಯರು ಭಾಗವಹಿಸಿದ್ದರು.
ವರದಿ: ಮುರುಳಿಧರ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post