ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಜೋಗ: ಜೋಗದ ಬಸ್ ನಿಲ್ದಾಣ ಬಳಿ ಇರುವ ಬಾಲಾಜಿ ಹೊಟೇಲ್ ಮಾಲೀಕ ತಮ್ಮ ಕಟ್ಟಡದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರವಿಕುಮಾರ್(32) ಎಂಬ ವ್ಯಕ್ತಿಯೇ ಹೋಟೆಲ್ ಮಾಲೀಕನಾಗಿದ್ದು, ನಿನ್ನೆ ರಾತ್ರಿ ತಮ್ಮ ಹೊಟೇಲ್ ಆವರಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಅವಿವಾಹಿತರಾಗಿದ್ದ ಇವರು, ವ್ಯವಹಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದರು ಎನ್ನಲಾಗಿದೆ. ರವಿಕುಮಾರ್ ಪಾನ್ ಯೋಗೀಶ್ ಅವರ ತಮ್ಮನಾಗಿದ್ದು, ಆತ್ಮಹತ್ಯೆಗೆ ಸಾಲ ಬಾಧೆ ಕಾರಣ ಎನ್ನಲಾಗಿದೆ.
ಈ ಕುರಿತು ಜೋಗ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
Get in Touch With Us info@kalpa.news Whatsapp: 9481252093















