No Result
View All Result
ಡಯಾಲಿಸಿಸ್ ಅಂತಿಮವಲ್ಲ | ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು
English Articles

A Second Chance at Life Through Deceased Organ Donation

by ಕಲ್ಪ ನ್ಯೂಸ್
February 3, 2026
0

Kalpa Media House  |  Bengaluru, Whitefield  | For 48-year-old Unnikrishnan, life for several years revolved around dialysis sessions, medications, and...

Read moreDetails
Bhaskara Parva: Generations of Journalism Students Reunite to Honour a Teacher Who Shaped Their Lives

Bhaskara Parva: Generations of Journalism Students Reunite to Honour a Teacher Who Shaped Their Lives

February 2, 2026
NITK Surathkal Inaugurates First Annual Sports Festival- ‘Endeavor 2026’

NITK Surathkal Inaugurates First Annual Sports Festival- ‘Endeavor 2026’

February 1, 2026
Samsung Sets Two Guinness World Records with its India

Samsung Sets Two Guinness World Records with its India

January 31, 2026
ಮೈಸೂರು | ಮಹಾರಾಣಿ ಮಹಿಳಾ ವಿದ್ಯಾರ್ಥಿನಿಯರಿಗೆ ಆಹಾರ ಹಾಗು ಆತಿಥ್ಯೋದ್ಯಮ ಕೌಶಲ್ಯ ತರಬೇತಿ

Maharani’s Science College Collaboration Empowers Students with Industry-Ready Skills

January 31, 2026
  • Advertise With Us
  • Grievances
  • About Us
  • Contact Us
Thursday, February 5, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಅದೃಷ್ಟಹೀನ ತುಳಸಿ ದೇವತೆಯಾದ ರೋಚಕ ಕಥೆ ಹೇಗೆ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 14, 2018
in Special Articles
0
ಅದೃಷ್ಟಹೀನ ತುಳಸಿ ದೇವತೆಯಾದ ರೋಚಕ ಕಥೆ ಹೇಗೆ?
Share on FacebookShare on TwitterShare on WhatsApp

ಹಿಂದೂ ಪುರಾಣಶಾಸ್ತ್ರಗಳಲ್ಲಿ ಉಲ್ಲೇಖಿಸಿರುವುದರ ಪ್ರಕಾರ, ತುಳಸಿಗಿರುವ ಮತ್ತೊಂದು ಹೆಸರು ವೃಂದಾ ಎಂದು. ಕಾಲನೇಮಿ ಎಂದು ಕರೆಯಲ್ಪಡುವ ರಾಕ್ಷಸ ರಾಜನ ಅತ್ಯಂತ ಸುಂದರಳಾದ ರಾಜಕುವರಿಯೇ ಈ ವೃಂದಾ.
ಈಕೆಯು ಶಿವನ ಶಕ್ತಿಸ್ವರೂಪದ ಭಾಗವೇ ಆದಂತಹ ಜಲಂಧರನನ್ನು ವರಿಸಿದಳು. ಜಲಂಧರನು ಭಗವಾನ್ ಶಂಕರನ ಮೂರನೆಯ ಕಣ್ಣಿನ ಅಗ್ನಿಯಿಂದ ಜನಿಸಿದವನಾಗಿದ್ದರಿಂದ, ಜಲಂಧರನು ಅಪರಿಮಿತವಾದ ಶಕ್ತಿಯುಳ್ಳವನಾಗಿದ್ದನು. ಈ ಜಲಂಧರನಿಗೆ ಪರಮ ಪವಿತ್ರಳೂ, ಆದ ರಾಜಕುಮಾರಿ ವೃಂದಾಳಲ್ಲಿ ಅನುರಕ್ತಿಯುಂಟಾಯಿತು.
ವೃಂದಾಳು ಭಗವಾನ್ ಶ್ರೀ ವಿಷ್ಣುವಿನ ಪರಮ ಭಕ್ತಳಾಗಿದ್ದು, ಜಲಂಧರನು ಎಲ್ಲ ದೇವ, ದೇವತೆಗಳನ್ನು ದ್ವೇಷಿಸುತ್ತಿದ್ದನು. ಆದರೂ ಕೂಡ, ವಿಧಿಯು ಇವರಿಬ್ಬರನ್ನೂ ಮದುವೆಯ ಬಂಧನದಲ್ಲಿ ಸಿಲುಕಿಸಿತ್ತು.
ವೃಂದಾಳನ್ನು ವಿವಾಹವಾದ ಬಳಿಕ, ಆಕೆಯ ಪಾವಿತ್ರ್ಯ ಹಾಗೂ ದೈವಭಕ್ತಿಯ ಕಾರಣದಿಂದಾಗಿ, ಜಲಂಧರನ ಶಕ್ತಿಯು ನೂರ್ಮಡಿಗೊಂಡಿತು. ಈತನ ಸಾಮರ್ಥ್ಯವು ಎಷ್ಟರಮಟ್ಟಿಗೆ ಹೆಚ್ಚಿತೆಂದರೆ, ಸ್ವಯಂ ಭಗವಾನ್ ಶಿವನಿಗೂ ಸಹ ಜಲಂಧರನನ್ನು ಸೋಲಿಸುವುದು ಅಸಾಧ್ಯದ ಮಾತಾಯಿತು. ಇದರಿಂದಾಗಿ, ಜಲಂಧರನ ಅಹಂಕಾರವು ಮತ್ತಷ್ಟು ಹೆಚ್ಚಾಯಿತು ಮತ್ತು ಅವನು ಭಗವಾನ್ ಶಿವನನ್ನೇ ಸೋಲಿಸಿ, ತಾನೇ ಬ್ರಹ್ಮಾಂಡದ ಯಜಮಾನನಾಗುವ ಮಹತ್ವಾಕಾಂಕ್ಷೆಯನ್ನು ಬೆಳೆಸಿಕೊಂಡನು.

ಜಲಂಧರನ ಶಕ್ತಿಯು ದಿನೇ ದಿನೇ ಹೆಚ್ಚುತ್ತಿದ್ದುದರಿಂದ, ದೇವತೆಗಳಿಗೆ ಅಭದ್ರತೆಯು ಕಾಡಲಾರಂಭಿಸಿತು. ಅವರೆಲ್ಲರೂ ಸಹಾಯಕ್ಕಾಗಿ ಭಗವಾನ್ ಶ್ರೀ ಮಹಾವಿಷ್ಣುವಿನ ಮೊರೆಹೊಕ್ಕರು. ಭಗವಾನ್ ವಿಷ್ಣುವು ಈಗ ನಿಜಕ್ಕೂ ಸಂಕಷ್ಟಕ್ಕೆ ಗುರಿಯಾದನು. ಯಾಕೆಂದರೆ, ವೃಂದಾಳು ವಿಷ್ಣುವಿನ ಪರಮ
ಭಕ್ತೆಯಾಗಿದ್ದಳು ಹೀಗಾಗಿ ಆಕೆಗೆ ಅನ್ಯಾಯವನ್ನು ಮಾಡುವಂತಿರಲಿಲ್ಲ. ಆದರೂ ಸಹ, ಜಲಂಧರನ ಕಾರಣದಿಂದ ಎಲ್ಲ ದೇವತೆಗಳಿಗೂ ವಿಪತ್ತು ಒದಗುವ ಪರಿಸ್ಥಿತಿ ಇದ್ದುದರಿಂದ, ಭಗವಾನ್ ಶ್ರೀವಿಷ್ಣುವು ಸಮಸ್ಯೆಯ ಪರಿಹಾರಕ್ಕೆಂದು ಉಪಾಯವೊಂದನ್ನು ಹೂಡಿದನು.
ಜಲಂಧರನು ಭಗವಾನ್ ಶಿವನೊಂದಿಗೆ ಕಾದಾಟದಲ್ಲಿ ತಲ್ಲೀನನಾಗಿದ್ದಾಗ, ವಿಷ್ಣುವು ಜಲಂಧರನ ರೂಪವನ್ನು ಧರಿಸಿಕೊಂಡು ವೃಂದಾಳ ಬಳಿಗೆ ಬಂದನು. ಮೊದಲ ನೋಟಕ್ಕೇ ವಿಷ್ಣುವನ್ನು ಗುರುತಿಸಲು ವೃಂದಾಳಿಗೆ ಸಾಧ್ಯವಾಗದಿದ್ದ ಕಾರಣ, ಆಕೆಯು ತನ್ನ ಪತಿ ಜಲಂಧರನೇ ಮರಳಿ ಬಂದನೆಂದು ಭ್ರಮಿಸಿ ಆತನನ್ನು ಸ್ವಾಗತಿಸಲು ಮುಂದಾದಳು. ಆದರೆ, ಅವಳು ಭಗವಾನ್ ಶ್ರೀ ವಿಷ್ಣುವನ್ನು ಸ್ಪರ್ಶಿಸಿದೊಡನೆಯೇ, ಆಕೆಗೆ ಈತನು ತನ್ನ ಪತಿಯಲ್ಲವೆಂದು ತಿಳಿಯಿತು. ಆಗ ಆಕೆಯ ಪಾವಿತ್ರ್ಯವು ನಷ್ಟಗೊಂಡು, ಜಲಂಧರನು ತನ್ನ ಅಮರತ್ವವನ್ನು ಕಳೆದುಕೊಂಡನು. ತನ್ನ ತಪ್ಪನ್ನು ಅರಿತ ವೃಂದಾಳು ಭಗವಾನ್ ಶ್ರೀ ವಿಷ್ಣುವಿನಲ್ಲಿ ತನ್ನ ನಿಜಸ್ವರೂಪವನ್ನು ತೋರಿಸೆಂದು ಕೇಳಿಕೊಂಡಳು. ತನ್ನ ಆರಾಧ್ಯದೈವದಿಂದಲೇ ತಾನು ಮೋಸಹೋಗಿರುವುದನ್ನು ತಿಳಿದು ವೃಂದಾಳು ಹೌಹಾರಿದಳು.
ವೃಂದಾಳ ಶಾಪ ಸ್ವಯಂ ಭಗವಾನ್ ವಿಷ್ಣುವೇ ತನ್ನ ಪತಿ ಜಲಂಧರನ ಮಾರುವೇಷದಲ್ಲಿ ಬಂದು ಮೋಸದಿಂದ ತನ್ನ ಪಾವಿತ್ರ್ಯವನ್ನು ಹಾಳುಗೆಡವಿದ್ದಕ್ಕಾಗಿ, ವೃಂದಾಳು ಭಗವಾನ್ ಶ್ರೀ ವಿಷ್ಣುವನ್ನು ಶಪಿಸುತ್ತಾಳೆ. ಭಗವಾನ್ ಶ್ರೀವಿಷ್ಣುವು ಶಿಲೆಯಾಗಿ ಹೋಗಲಿ ಎಂದು ಆಕೆಯು ಶಪಿಸುತ್ತಾಳೆ. ಭಗವಾನ್ ಶ್ರೀ ವಿಷ್ಣುವು ಅವಳ ಶಾಪವನ್ನು ಸ್ವೀಕರಿಸುತ್ತಾನೆ ಹಾಗೂ ತಾನೊಂದು ಸಾಲಿಗ್ರಾಮ ಶಿಲೆಯಾಗಿ ಪರಿವರ್ತಿತನಾಗುತ್ತಾನೆ. ಈ ಸಾಲಿಗ್ರಾಮ ಶಿಲೆಯು ಗಂಡಕಿ ನದಿಯ ಸಮೀಪದಲ್ಲಿ ಕಂಡುಬರುತ್ತದೆ.

ಇದಾದ ಬಳಿಕ, ತನ್ನ ಪತ್ನಿಯ ಪಾವಿತ್ರ್ಯದ ಬಲವನ್ನು ಕಳೆದುಕೊಂಡ ಜಲಂಧರನು ಶಿವನಿಂದ ಹತನಾಗುತ್ತಾನೆ. ವೃಂದಾಳೂ ಕೂಡ ತನ್ನ ಪತಿಯ
ಮರಣದಿಂದ ಖಿನ್ನಳಾಗಿ ತನ್ನ ಜೀವನವನ್ನು ಅಂತ್ಯಗೊಳಿಸಿಕೊಳ್ಳಲು ತೀರ್ಮಾನಿಸುತ್ತಾಳೆ.
ಭಗವಾನ್ ಶ್ರೀ ವಿಷ್ಣುವಿನ ವರ ವೃಂದಾಳ ಮರಣಕ್ಕೆ ಮುನ್ನ ಭಗವಾನ್ ಶ್ರೀ ವಿಷ್ಣುವು ಆಕೆಯನ್ನು ಹರಸಿ ಆಶೀರ್ವದಿಸುತ್ತಾನೆ ಹಾಗೂ ಆಕೆಗೆ ವರವೊಂದನ್ನು ಅನುಗ್ರಹಿಸುತ್ತಾನೆ. ಅದರ ಪ್ರಕಾರ, ಆಕೆಯು ತುಳಸಿ ಎಂಬ ಹೆಸರಿನಿಂದ ಪ್ರಸಿದ್ಧಳಾಗುತ್ತಾಳೆ ಹಾಗೂ ಯಾವಾಗಲೂ ಸಹ ಭಗವಾನ್ ಶ್ರೀ ವಿಷ್ಣುನೊಂದಿಗೆಯೇ ಆಕೆಯು ಪೂಜಿಸಲ್ಪಡುವಂಥವಳಾಗುತ್ತಾ ಭಗವಾನ್ ವಿಷ್ಣುವಿನ ಪೂಜೆಯು ತುಳಸಿಯಿಲ್ಲದೇ ಎಂದಿಗೂ ಪರಿಪೂರ್ಣವಾಗುವುದೇ ಇಲ್ಲ. ಹೀಗೆ, ಅನಂತರದಿಂದ, ತುಳಸಿಯು ಹಿಂದೂ ವಿಧಿವಿಧಾನಗಳ ಒಂದು ಅವಿಭಾಜ್ಯ ಅಂಗವಾಗಿದೆ.
ಅದೃಷ್ಟಹೀನ ದೇವತೆಯಾದ ತುಳಸಿಯು ಕಟ್ಟಕಡೆಗೆ ಅನುಗ್ರಹಿಸಲ್ಪಟ್ಟು ತುಳಸಿ ಎಂಬ ಹೆಸರಿನ ಪವಿತ್ರ ಸಸಿಯಾಗಿ ಹೆಚ್ಚು ಕಡಿಮೆ ಪ್ರತೀ ಮನೆಯ
ಅಂಗಳದಲ್ಲಿಯೂ ಪ್ರತಿಷ್ಟಾಪಿಸಲ್ಪಟ್ಟು, ಪ್ರತಿಯೊಬ್ಬರ ಅಂತರಂಗವನ್ನೂ ಕೂಡ ಶುದ್ಧೀಕರಿಸುವವಳಾಗಿದ್ದಾಳೆ.
ಮಾಹಿತಿ ಸಂಗ್ರಹ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
ಚಿತ್ರಕೃಪೆ: ಆನ್ಯಶೆಟ್ಟಿ

Tags: Goddess TulasiKannada ArticleKannada NewsLord VishnuSpecial ArticleTulasi Plantತುಳಸಿ ದೇವತೆತುಳಸಿ ಸಸಿ
Share196Tweet123Send
Previous Post

ಛತ್ತೀಸ್‌ಘಡದಲ್ಲಿ ಐಇಡಿ ಸ್ಫೋಟ: ನಾಲ್ವರು ಯೋಧರಿಗೆ ಗಾಯ

Next Post

ಇಟಲಿಯಲ್ಲಿ ದೀಪಿಕಾ-ರಣವೀರ್ ಕೊಂಕಣಿ ಶೈಲಿ ವಿವಾಹ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಇಟಲಿಯಲ್ಲಿ ದೀಪಿಕಾ-ರಣವೀರ್ ಕೊಂಕಣಿ ಶೈಲಿ ವಿವಾಹ

ಇಟಲಿಯಲ್ಲಿ ದೀಪಿಕಾ-ರಣವೀರ್ ಕೊಂಕಣಿ ಶೈಲಿ ವಿವಾಹ

Leave a Reply Cancel reply

Your email address will not be published. Required fields are marked *

  • Trending
  • Latest
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ಸಾಗರ ಮಾರಿಕಾಂಬಾ ಜಾತ್ರೆಗೆ ಯಶವಂತಪುರ-ತಾಳಗುಪ್ಪ 2 ಸ್ಪೆಷಲ್ ರೈಲುಗಳು | ಹೀಗಿದೆ ಡೀಟೇಲ್ಸ್

January 31, 2026
25 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಸೂಡಾ ಅಧ್ಯಕ್ಷ ಸುಂದರೇಶ್ ಗುದ್ದಲಿಪೂಜೆ

25 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಸೂಡಾ ಅಧ್ಯಕ್ಷ ಸುಂದರೇಶ್ ಗುದ್ದಲಿಪೂಜೆ

February 4, 2026
ಪ್ಲಾಸ್ಟಿಕ್ ಮುಕ್ತ ಪರಿಸರ ಸ್ನೇಹಿ ಮಾರಿಕಾಂಬಾ ಜಾತ್ರೆ ಆಚರಿಸಿ: ಪರ್ಯಾವರಣ ಟ್ರಸ್ಟ್ ಕರೆ

ಪ್ಲಾಸ್ಟಿಕ್ ಮುಕ್ತ ಪರಿಸರ ಸ್ನೇಹಿ ಮಾರಿಕಾಂಬಾ ಜಾತ್ರೆ ಆಚರಿಸಿ: ಪರ್ಯಾವರಣ ಟ್ರಸ್ಟ್ ಕರೆ

February 4, 2026
ಹಿಂದೂ ವಿವಾಹ ಪದ್ಧತಿ ಪಾಲಿಸದ ಮದುವೆಯು ಅಮಾನ್ಯ: ಸುಪ್ರೀಂ ಕೋರ್ಟ್

ಹಿಂದೂ ವಿವಾಹ ಪದ್ಧತಿ ಪಾಲಿಸದ ಮದುವೆಯು ಅಮಾನ್ಯ: ಸುಪ್ರೀಂ ಕೋರ್ಟ್

February 4, 2026
ನಟ ಅರ್ಜುನ್ ಕಪೂರ್ ಅವರ ‘ಸ್ಪೀಡ್ ಡೆಮನ್ಸ್ ದೆಹಲಿ’ ತಂಡದಲ್ಲಿ ಅಂತರಾಷ್ಟ್ರೀಯ ಸ್ಟಾರ್‌ಗಳ ಅಬ್ಬರ!

ನಟ ಅರ್ಜುನ್ ಕಪೂರ್ ಅವರ ‘ಸ್ಪೀಡ್ ಡೆಮನ್ಸ್ ದೆಹಲಿ’ ತಂಡದಲ್ಲಿ ಅಂತರಾಷ್ಟ್ರೀಯ ಸ್ಟಾರ್‌ಗಳ ಅಬ್ಬರ!

February 4, 2026
ವನ್ಯಜೀವಿ ಉಪಟಳಕ್ಕೆ ರೈತರು ಬಲಿ | ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಅರಣ್ಯ ಸಚಿವರಿಗೆ ಹೆಚ್‌ಡಿಕೆ ಮನವಿ

ವನ್ಯಜೀವಿ ಉಪಟಳಕ್ಕೆ ರೈತರು ಬಲಿ | ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಅರಣ್ಯ ಸಚಿವರಿಗೆ ಹೆಚ್‌ಡಿಕೆ ಮನವಿ

February 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL