ನವದೆಹಲಿ: ಲೋಕಸಭಾ ಚುನಾವಣೆಯ ಕಾವು ದೇಶದಲ್ಲೆಡೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಕೂಗೂ ಸಹ ಬಲವಾಗಿ ಕೇಳಿಬರುತ್ತಿದ್ದು, ಇವರಿಂದಲೇ ಅಭಿವೃದ್ಧಿ ಎಂದು ಬಿಜೆಪಿ ಹೇಳುತ್ತಿದೆ.
ಇದರ ಬೆನ್ನಲ್ಲೇ 2014ರ ಚುನಾವಣೆಯ ವೇಳೆ ಬಿಜೆಪಿ ಪ್ರಕಟಿಸಿದ್ದ ಪ್ರಣಾಳಿಕೆಯಲ್ಲಿ 549 ಭರವಸೆಗಳನ್ನು ನೀಡಿದ್ದು, ಐದು ವರ್ಷಗಳ ಅವಧಿಯಲ್ಲಿ ಇದರಲ್ಲಿ ಶೇ.98ರಷ್ಟು ಈಡೇರಿಸಿದೆ ಎಂದು ಹೇಳಲಾಗಿದೆ.
ಬಿಜೆಪಿ ಉಪಾಧ್ಯಕ್ಷ ವಿನಯ್ ಸಹಸ್ರಬುದ್ಧಿ ನೇತೃತ್ವ ಥಿಂಕ್ ಟ್ಯಾಂಕ್ ಸಾರ್ವಜನಿಕ ಯೋಜನಾ ಸಂಶೋಧನಾ ಕೇಂದ್ರ ಕರಡು ವರದಿ ತಯಾರಿಸಿದ್ದು, ಇದನ್ನು ಆಧರಿಸಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಇಎಸ್‌ಐಸಿ, ಇಪಿಎಫ್‌ಒ ಮತ್ತು ಎನ್’ಪಿಸಿಯಿಂದ ಅಂಕಿ ಅಂಶಗಳನ್ನು ಪಡೆದು ಈ ಕರಡು ವರದಿಯನ್ನು ಸಿದ್ದಪಡಿಸಲಾಗಿದೆ. 2014ರಲ್ಲಿ ನೀಡಿದ್ದ 549 ಭರವಸೆಯಲ್ಲಿ ಶೇ.98ರಷ್ಟನ್ನು ಈಡೇರಿಸಿದ್ದು, ಇದರಲ್ಲಿ ಪ್ರಮುಖವಾದವು ಹೀಗಿವೆ:
- ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 17 ಕೋಟಿ ಮಂದಿಗೆ ಲಾಭವಾಗಿದೆ
- ದೇಶದಲ್ಲಿ 4.67 ಕೋಟಿ ಜನರು ಉದ್ಯೋಗದಲ್ಲಿ ಔಪಚಾರಿಕ ವಲಯಗಳನ್ನು ಸೇರಿದ್ದಾರೆ
- 2014ರಲ್ಲಿ ದೇಶದಲ್ಲಿದ್ದ 8.48 ಶೇಕಡಾದಷ್ಟು ಹಣದುಬ್ಬರವನ್ನು ಶೇಕಡಾ 2.5ಕ್ಕೆ ತಗ್ಗಿಸಲಾಗಿದೆ
- ಬೆಲೆ ಏರಿಕೆ ಸಮಸ್ಯೆ ಬಗ್ಗೆ ಗಮನಹರಿಸಿ, ನಿಯಂತ್ರಣಗೊಳಿಸಲಾಗಿದೆ
- ಜನಧನ್ ಖಾತೆ ಮೂಲಕ 35 ಕೋಟಿ ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಯಡಿ ತರಲಾಗಿದೆ
- ದೇಶದಾದ್ಯಂತ 3.18 ಲಕ್ಷ ಸರ್ಕಾರಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ
- ಆಧಾರ್ ಸಂಖ್ಯೆ ಮೂಲಕ ಫಲಾನುಭವಿಗಳಿಗೆ ನೇರ ವರ್ಗಾವಣೆಯಿಂದ ಸರ್ಕಾರದ ಇ ಮಾರುಕಟ್ಟೆಯಡಿಯಲ್ಲಿ 22 ಸಾವಿರದ 420 ಕೋಟಿ ಜನರಿಗೆ ಅನುಕೂಲವಾಗಿದೆ
- ಪ್ರತಿದಿನ 134 ಕಿಮೀ ಉದ್ದದ ರಸ್ತೆ ನಿರ್ಮಾಣವಾಗುತ್ತಿದೆ
- ದಿನವೊಂದಕ್ಕೆ ಸರಾಸರಿ 39 ಕಿಮೀ ಉದ್ದದ ಹೆದ್ದಾರಿ ರಸ್ತೆ ನಿರ್ಮಾಣ
- ದೇಶದಾದ್ಯಂತ 9.79 ಕೋಟಿ ಶೌಚಾಲಯ ನಿರ್ಮಾಣ ಮಾಡಲಾಗಿದೆ
- 2.55 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ
- 7.65 ಕೋಟಿ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಲಾಗಿದೆ
- ಲೋಕ್ ಪಾಲ್ ಸಂಸ್ಥೆ ರಚನೆ, ರಾಷ್ಟ್ರೀಯ ಆರೋಗ್ಯ ಸಂಸ್ಥೆ, ಯುಐಡಿಎಐ, ಜಿಎಸ್’ಟಿ ಕೌನ್ಸಿಲ್, ಸಿಎಂ ಉಪ ಗುಂಪುಗಳ ರಚನೆ
Discussion about this post