ನವದೆಹಲಿ: ಕಂಗನಾ ರಾವತ್ ನಿರ್ದೇಶಿಸಿ ಅಭಿನಯಿಸಿರುವ ಮಣಿಕರ್ಣಿಕಾ ಚಿತ್ರ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸನ್ನು ದೋಚುತ್ತಿದೆ.
ಜ.25ರಂದು ಬಿಡುಗಡೆಯಾದ ಚಿತ್ರಕ್ಕೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆಯೊಂದಿಗೆ, ಮಾಧ್ಯಮಗಳಿಂದಲೂ ಉತ್ತಮ ವಿಮರ್ಷೆ ಬಂದ ಹಿನ್ನೆಲೆಯಲ್ಲಿ ನೋಡುಗರ ಸಂಖ್ಯೆ ಏರಿಕೆಯಾಗುತ್ತಿದೆ.
ದೇಶದ ಬಾಕ್ಸ್ ಆಫೀಸ್’ನಲ್ಲಿ ಉತ್ತಮ ಕಲೆಕ್ಷನ್ ಕಂಡ ನಂತರ ಈಗ ವಿಶ್ವದಲ್ಲೂ ಸಹ ಭಾರೀ ಕಲೆಕ್ಷನ್ ಕಾಣುತ್ತಿದೆ.
ಪ್ರಮುಖ ಚಿತ್ರ ವಿಮರ್ಷಕ ತರಣ್ ಆದರ್ಶ್ ಈ ಕುರಿತಂತೆ ಟ್ವೀಟ್ ಮಾಡಿದ್ದು, ಜಾಗತಿಕ ಕಲೆಕ್ಷನ್ ಸಹ ಉತ್ತಮವಾಗಿದೆ ಎಂದಿದ್ದಾರೆ. ಈಗಾಗಲೇ ವಿಶ್ವದಲ್ಲಿ ಚಿತ್ರ 1.071 ಮಿಲಿಯನ್ ಡಾಲರ್ ಕಲೆಕ್ಷನ್ ಗಳಿಸಿದೆ.
#Manikarnika crosses $ 1 mn from international markets… Total till Sat [26 Jan 2019]: $ 1.071 mn [₹ 7.61 cr]…
Thu $ 117k
Fri $ 438k
Sat $ 516k
North America [$ 398k] and UAE-GCC [$ 360k] have performed best. #Overseas— taran adarsh (@taran_adarsh) January 27, 2019
ಇನ್ನು, ದೇಶದಾದ್ಯಂತ ಮೂರು ಸಾವಿರ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಮಣಿಕರ್ಣಿಕಾ, ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಜೀವನ, ದೇಶಕ್ಕಾಗಿ ಆಕೆಯ ತ್ಯಾಗ ಹಾಗೂ ಬಲಿದಾನದ ಮಹತ್ವವನ್ನು ಸಾರಿದೆ.
#OneWordReview…#Manikarnika: POWERFUL.
Rating: ⭐️⭐️⭐️½
Inspiring movie that has scale and soul… Kangana, take a bow. You’re terrific… First half could be tighter. Second half awe inspiring… Climax brilliant… Power, pride, patriotism – this has it all. #ManikarnikaReview pic.twitter.com/MLRnjBewws— taran adarsh (@taran_adarsh) January 24, 2019
Discussion about this post