ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ರಾಜ್ಯ ವಿಧಾನಸಭಾ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದ್ದು, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಎಪ್ರಿಲ್ 11ರ ನಾಳೆ ಕೊನೆಯ ದಿನವಾಗಿದೆ.
ಈವರೆಗೂ ಯಾರು ಹೆಸರು ಸೇರಿಸಿಲ್ಲವೋ, ಅಂತಹವರಿಗೆ ಇನ್ನು ಎರಡು ದಿನ ಮಾತ್ರ ಈ ಬಾರಿಯ ಚುನಾವಣೆಗೆ ಮತದಾನ ಮಾಡುವ ಸಲುವಾಗಿ ಕೊನೆಯ ಅವಕಾಶವಿದೆ.
ಹೆಸರು ಸೇರಿಸಲು ಯಾವ ದಾಖಲೆ ಬೇಕು?
ರಾಜ್ಯ ಅಥವಾ ಕೇಂದ್ರ ಸರ್ಕಾರ ಅಂಗೀಕರಿಸಿರುವ ಯಾವುದೇ ಅಧಿಕೃತ ಜನ್ಮ ದಿನಾಂಕ ಇರುವ ದಾಖಲೆಗಳನ್ನು ಅಂಗೀಕರಿಸಲಾಗುತ್ತದೆ.
ಹತ್ತೇ ನಿಮಿಷದಲ್ಲಿ ಹೆಸರು ಸೇರಿಸಿ:
ಹಂತ-1: ನಿಮ್ಮ ಮೊಬೈಲ್’ನ ಪ್ಲೇ ಸ್ಟೋರ್’ನಲ್ಲಿ ಎನ್’ಎಸ್’ವಿಪಿ ಆ್ಯಪ್ ಡೌನ್’ಲೋಡ್ ಮಾಡಿಕೊಳ್ಳಿ
ಹಂತ-2: ಡಿಸ್ಕೇಮರ್’ನಲ್ಲಿ ಐ ಅಗ್ರೀ ಸೆಲೆಕ್ಟ್ ಮಾಡಿ ನೆಕ್ಟ್ಸ್ ಬಟನ್ ಒತ್ತಿ
ಹಂತ-3: ನಿಮ್ಮ ಅನುಕೂಲಕರ ಭಾಷೆಯನ್ನು ಆಯ್ಕೆ ಮಾಡಿಕೊಂಡು ನೆಕ್ಟ್ ಒತ್ತಿ
ಹಂತ-4: ವೋಟರ್ ರಿಜಿಸ್ಟ್ರೇಷನ್ ಸೆಲೆಕ್ಟ್ ಮಾಡಿಕೊಳ್ಳಿ
ಹಂತ-5: ನ್ಯೂ ವೋಟರ್ ರಿಜಿಸ್ಟ್ರೇಷನ್(ಫಾರಂ-6) ಆಯ್ಕೆ ಮಾಡಿಕೊಳ್ಳಿ
ಹಂತ-6: ನಿಮ್ಮ ಮೊಬೈಲ್ ಸಂಖ್ಯೆ ಹಾಕಿ ಸೆಂಡ್ ಒಟಿಪಿ ಒತ್ತಿ
ಹಂತ-7: ನ್ಯೂ ಯೂಸರ್ ಆಯ್ಕೆಯಲ್ಲಿ ನಿಮ್ಮ ಮೊಬೈಲ್’ಗೆ ಬಂದ ಒಟಿಪಿ, ನಿಮ್ಮ ಇ-ಮೇಲ್ ಐಡಿ, ಪಾಸ್’ವರ್ಡ್ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ
ಹಂತ-8: ಮತ್ತೊಮ್ಮೆ ನಿಮ್ಮ ಮೊಬೈಲ್ ಸಂಖ್ಯೆ ಹಾಕಿ, ಹೊಸದಾಗಿ ಬರುವ ಒಟಿಪಿ ಹಾಗೂ ನಿಮ್ಮ ಪಾಸ್’ವರ್ಡ್ ಹಾಕಿಲಾಗಿನ್ ಆಗಿ
ಹಂತ-9: ನ್ಯೂ ವೋಟರ್ ರಿಜಿಸ್ಟ್ರೇಷನ್ ಸೆಲೆಕ್ಟ್ ಮಾಡಿ ಮುಂದಿನ ಸ್ಕ್ರೀನ್’ನಲ್ಲಿ ಕಾಣುವ ಲೆಟ್ಸ್ ಸ್ಟಾರ್ಟ್ ಬಟನ್ ಒತ್ತಿ
ಹಂತ-10: ಆರ್ ಯು ಅಪ್ಲೈಯಿಂಗ್ ಫಾರ್ ದಿ ವೋಟರ್ ಐಡಿ ಫಸ್ಟ್ ಟೈಮ್ ಎಂದು ಕೇಳುವ ಅವಕಾಶದಲ್ಲಿ ಎಸ್ ಐ ಆಮ್ ಅಪ್ಲೈಯಿಂಗ್ ಫಾರ್ ದಿ ಫಸ್ಟ್ ಟೈಮ್ ಎಂದು ಆಯ್ಕೆ ಮಾಕೊಂಡು ನೆಕ್ಟ್ಸ್ ಬಟನ್ ಒತ್ತಿ
ಹಂತ-11: ಮುಂದಿನ ಹಂತದಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರ, ಜನ್ಮದಿನಾಂಕ, ಜನ್ಮದಿನಾಂಕದ ದಾಖಲೆಯ ವಿವರ ನಮೂದಿಸಿ, ಪೂರಕ ದಾಖಲೆಗಳನ್ನು ಅಪ್’ಲೋಡ್ ಮಾಡಿ
ಹಂತ-12: ಮುಂದೆ ಕೇಳುವ ಎಲ್ಲ ವಿವರಗಳನ್ನು ನಮೂದಿಸಿದ ನಂತರ ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಒಂದು ನೊಂದಣಿ ಸಂಖ್ಯೆ ಅಥವಾ ರೆಫರೆನ್ಸ್ ನಂಬರ್ ಬರುತ್ತದೆ. ಅದನ್ನು ಬರೆದಿಟ್ಟುಕೊಳ್ಳಿ. ಈ ಸಂಖ್ಯೆ ನಿಮ್ಮ ಆನ್’ಲೈನ್ ಅರ್ಜಿಯ ಸ್ಟೇಟಸ್ ಏನಾಗಿದೆ ಎಂಬುದನ್ನು ತಿಳಿಯಲು ಅವಶ್ಯವಾಗಿರುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post