ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಇಂದು ನನ್ನ ಸಮೀಪದ ಬಂಧುಗಳು, ನನ್ನ ಮಕ್ಕಳು ಮತ್ತು ಮಿತ್ರರೊಂದಿಗೆ ಹೊಸ ವಿಚಾರವೊಂದನ್ನು ಹಂಚಿಕೊಂಡೆ. ಒಳ್ಳೆಯ ನಡೆ-ನುಡಿ, ಸದ್ವಿಚಾರ ಮತ್ತು ಸಜ್ಜನಿಕೆಯ ಬದುಕು ಬೇಕೆಂಬ ವಿಷಯದಲ್ಲಿ ನೀವು-ನಾನು ಸಮಾನ ಮನಸ್ಕರು. ಹೀಗಾಗಿ, ನನ್ನ ಬಂಧುಗಳಲ್ಲಿ ಹಂಚಿಕೊಂಡ ಹೊಸ ಯೋಜನೆ ಕುರಿತು ತಮಗೂ ತಿಳಿಸಲು ಅಪೇಕ್ಷಿಸುತ್ತೇನೆ.
ನಮ್ಮಲ್ಲಿ, ವಿಶೇಷವಾಗಿ ಮಾಧ್ವ ಜಗತ್ತಿನಲ್ಲಿ ದಾಸ ಸಾಹಿತ್ಯ ಕೃತಿಗಳಿಂದ ಪ್ರಭಾವಿತರಾಗಿ ಸನ್ಮಾರ್ಗದಲ್ಲಿ ನಡೆಯುವ ಮಂದಿ ಬಹುಸಂಖ್ಯೆಯಲ್ಲಿದ್ದೇವೆ. ಭಕ್ತಿ-ಮುಕ್ತಿ ಮಾರ್ಗಕ್ಕೆ ತಲೆ ಬಾಗುವವರಿದ್ದೇವೆ. ದಾರ್ಶನಿಕರು ಮತ್ತು ಸಾಧಕರ ಅನುಭವಕ್ಕೆ ನಾವು ಮಣಿಯುತ್ತೇವೆ. ನಮ್ಮ ಹಿರಿಯರ ಕಾಲ ಇಂದಿಗಿಂತಲ ವಿಭಿನ್ನವಾಗಿದ್ದವು. ಅವರಿಗೆ ದಾಸರ ಚಿಂತನೆಗಳು ಅಮೃತ ಸಂಚಯವೆನಿಸಿತ್ತು, ದಾರಿ ದೀಪವಾಗಿದ್ದವು. ಅದೇ ಅವರಿಗೆ ಸಂಪತ್ತು, ಪೂಜೆ, ಪುನಸ್ಕಾರ, ವ್ರತ, ನಿಯಮ, ತಿಂಡಿ, ತೀರ್ಥ, ಹಾಸಿಗೆ, ಹೊದಿಕೆ, ಮನೆಯ ಹೆಬ್ಬಾಗಿಲು, ರಂಗೋಲಿ, ಜನನ, ಮರಣ ಎಲ್ಲಕ್ಕೂ ದಾಸರ ಹಿತವಚನಗಳು ಅಮೃತವಾಹಿನಿ ಆಗುತ್ತಿತ್ತು.
ಕಾಲ ಬದಲಾಗಿದೆ. ಇನ್ನೂ ಹೆಚ್ಚು ಹೆಚ್ಚಾಗಿ ಬದಲಾಗುವ ಕಾಲ ಬರಲಿದೆ. ಆಧುನಿಕ ಜನಜೀವನ ಮತ್ತು ಪರಿಸರಕ್ಕೆ ನಮ್ಮ ಹಿರಿಯರ, ಅಷ್ಟೇ ಏಕೆ ಜೀವಿತವಿರುವ ನಮ್ಮ ಬದುಕಿನ ಮೌಲ್ಯಗಳೂ ಸವಾಲಾಗಿ ಕಾಣುತ್ತಿವೆ.
ಕಾಲನ ನಡಿಗೆಯಲ್ಲಿ ಬದಲಾವಣೆ ಸಹಜ, ಅನಿವಾರ್ಯ. ಇಂತಹ ಬದಲಾದ ನಮ್ಮ ಸಂಸಾರ-ಬಳಗದಲ್ಲಿ ಹರಿದಾಸರುಗಳ ಚಿಂತನೆಯ ಮಹತ್ವವನ್ನು ಅಗತ್ಯತೆಗಳನ್ನು ಹರಿರಾಗಿಡಲು ಸುಲಭ ಮಾರ್ಗ ಬೇಕಾಗಿದೆ. ಗಂಭೀರ ಮತ್ತು ಭಾರವೆನಿಸುವ ಆಧ್ಯಾತ್ಮ-ಪರಲೋಕಗಳ ಕಲ್ಪನೆ ಈಗಿನವರಿಗೆ (ನಮ್ಮಲ್ಲಿಯೂ ಕೆಲವರಿಗೆ) ಬೇಕೆನಿಸುತ್ತಿಲ್ಲ. ಯುವ ಪೀಳಿಗೆಗಂತೂ ಬಲವಂತ ಮಾಡಿ ಏನನ್ನೂ ಕಲಿಸುವುದಾಗಲೀ, ಕುಡಿಸುವುದಾಗಲೀ ಸಾಧ್ಯವಿಲ್ಲ. ಇದಕ್ಕೊಂದು ಸುಲಭ ಮಾರ್ಗ ಹೀಗಿದೆ.
ಉದಾಹರಣೆಗೆ:
ಜೇಷ್ಠ ಶುದ್ಧ ಷಷ್ಠಿ. ವಿಜಯದಾಸರ ಪರಮಶಿಷ್ಯ ಮೋಹನದಾಸರ ಪುಣ್ಯದಿನ, ಜನ್ಮದಿನ ಎಂದರೂ ನಮ್ಮ ಮಕ್ಕಳಿಗೆ ಸಮ್ಮತ. ಭಕ್ತಿಯಲ್ಲಿ ಭಾಗಣ್ಣ(ಗೋಪಾಲದಾಸರು) ಶಕ್ತಿಯಲ್ಲಿ ತಿಮ್ಮಣ್ಣ(ವೇಣುಗೋಪಾಲ ದಾಸರು) ಮತ್ತು ಯುಕ್ತಿಯಲ್ಲಿ ಮೇಧಾವಿ ಮೋಹನ-ಇದು ಅಂದಿನ ಗಾದೆ ಮಾತಾಗಿತ್ತು.
ಮೊದಲು ಮೋಹನದಾಸರನ್ನು ಕುರಿತು ನಾವು ತಿಳಿದುಕೊಳ್ಳೋಣ: ದಾಸ ಶ್ರೇಷ್ಠ ಇಲ್ಲದೇ ಜನಪ್ರಿಯ ಕೃತಿಗಳನ್ನು ಆಯ್ಕೆ ಮಾಡಬೇಕು. ಒಂದಾದರೂ ಸರಿಯೆ: ಮನೆ-ಮಂದಿಯ ಮುಂದೆ ಓದೋಣ-ಇಷ್ಟೇ ಸಾಕು. ಶ್ರದ್ಧೆ, ಶುದ್ಧ ಮನಸ್ಸು ಮತ್ತು ಆತ್ಮ ನಿರ್ಭರ ಮನೋಭಾವ ಬೇಕು. ಪ್ರಯತ್ನಿಸಿ, ಪ್ರಯೋಗಾತ್ಮಕವಾಗಿ ನಿಮಗೆ ಒಂದು ಸ್ಯಾಂಪಲ್ ಹೀಗಿದೆ.
ಮೋಹನದಾಸರು
ಜನನ: ಕ್ರಿ.ಶ.1728
ಸ್ಥಳ: ಆನೆಗೊಂದಿ
ಸುಮಾರು 80 ವರ್ಷಗಳ ಕಾಲ ಬದುಕಿ ಬಾಳಿದ ದಾಸರು. ನೂರಾರು ಕೃತಿಗಳನ್ನು ರಚಿಸಿರಬಹುದೆಂದು ಸಂಶೋಧಕರು ತಿಳಿಸಿದ್ದಾರೆ. ದೊರೆತಿದ್ದು, 80 ಕೃತಿಗಳು. ಮೋಹನದಾಸರು ಜನಸಾಮಾನ್ಯರ ಸಲುವಾಗಿ ಕೀರ್ತನೆಗಳನ್ನು ಬರೆದವರು. ಸುಲಭವಾಗಿ ಅರ್ಥವಾಗುವ ಕಾವ್ಯ ಇವರದು.
ಕರ್ನಾಟಕದ ದೇಸಿ ಭಾಷೆಯ ಸೊಗಸು ಇವರ ಕೃತಿ ರಚನೆ ವೈಶಿಷ್ಟ್ಯತೆ. ಮೃದು-ಮಾಧುರ್ಯದ ಸುಲಭ ಪದಗಳಲ್ಲಿ ಧರ್ಮ-ನೀತಿಗಳ ಉಪದೇಶ ಇವರ ವಿಶೇಷತೆ. ಸಾಂಪ್ರದಾಯಿಕ ಹಬ್ಬ ಹರಿದಿನಗಳಿಗೆ ಬೇಕೆನಿಸುವ ಭಕ್ತಿ ಕೀರ್ತನೆ, ದೇವಸ್ತುತಿ, ಗುರು ಹಿರಿಯರನ್ನು ಕುರಿತ ಭಕ್ತಿ ಸಮರ್ಪಣೆ ಶ್ರೀಕೃಷ್ಣನ ಕಥೆ ಇವು ಮೋಹನದಾಸರ ಸಾಹಿತ್ಯ ಪ್ರಾಕಾರಗಳು.
ಮೋಹನದಾಸರು ಪ್ರಸಿದ್ದವಾದದ್ದು ’ಕೋಲು’ ಹಾಡಿನಿಂದ 217 ನುಡಿಗಳ ನೀಳವ್ಯ. ಪಂಚಮ ವೇದವಾದ ಮಹಾಭಾರತದ ರಸಕಾವ್ಯ. ಕೋಲಾಟಕ್ಕೆ ಹೇಳಿ ಮಾಡಿಸಿದ ಸುಮಧು ಕವನವದು.
ಒಂದು ಕೃತಿಯ ತುಣುಕು
ತಾರಮ್ಮಯ್ಯ ರಘುಕುಲ ರಾಮಚಂದಿರನ॥ಪ॥
ಈರೇಳು ವರುಷವು ಮೀರಿ ಪೋಗುಗಲಿದೆ ಸೇದದನ್ನೋಕೆ ಮಾರಸಿತನಕರೆ॥ಅಪ॥
ಪರ್ಣಶಾಲೆಯಂತೆ ಅಲ್ಲಿ ಸುವರ್ಣದ ಮೃತವಂತೆ.
ಕನ್ಯೆ ಸೀತಾಂಗನೆ ಬಯಸಿದಳಂತೆ ಸ್ವರ್ಣಾಂಬದ ಬೆನ್ನತ್ತಿ ಹೋದನಂತೆ॥
ಶರದಿಯನೆ ಹಾದಿ ಉಂಗುರ ಧರಣಿಸುತೆಗೆ ತೋರಿ॥
ತರುಪುರಗೋಪು ಉರುಹಿ ಚೋಡುಮಣಿ ಹಂಗೆ ಸಮರ್ಪಿಸಿ ಹರುಷದಲಿಹಣಂತೆ॥
ಸೇತುವೆಯನೆ ಕಟ್ಟಿ ಖುಳಗಲ ನಾಥನ ತರಿದೊಟ್ಟೀ
ಸೀತೆ ಸಹಿತ ಮೋಹನ ವಿಠಲ ಜಗನ್ನಾಥ ಹೊರಟನಂತೆ ಕುಂತೆ॥
ಲೇಖನ: ಪರಿಮಳ ಶೇಷ ಚಂದ್ರಿಕ
Get in Touch With Us info@kalpa.news Whatsapp: 9481252093
Discussion about this post