ಸಾಮಾಜಿಕ ಪರಿಣಾಮಗಳು
ಲ್ಯಾಂಡ್‌ಮೈನ್‌ಗಳು ಸಾಮಾಜಿಕ ಜನಜೀವನದ ಮೇಲೆ ತುಂಬಾ ಗಂಭೀರ ಪರಿಣಾಮವನ್ನೇ ಉಂಟುಮಾಡುತ್ತಿದೆ. ದೇಶದ ಜನಸಂಖ್ಯೆಯ ಬಹುಪಾಲು ಜನರು ಲ್ಯಾಂಡ್‌ಮೈನ್ ಸ್ಫೋಟದಿಂದಾಗಿ ಸಾವನ್ನಪ್ಪುತ್ತಿದ್ದಾರೆ ಮತ್ತು ಸಾವುಗಳು ಇಡೀ ಕುಟುಂಬವನ್ನೇ ಬಾಧಿಸುತ್ತದೆ. ICRC ಮಾಹಿತಿಯಂತೆ ಕೇವಲ ಶೇ. 25 ಪ್ರತಿಶತ ಗಾಯಾಳುಗಳು ಮಾತ್ರ 6 ಘಂಟೆಯೊಳಗೆ ಆಸ್ಪತ್ರೆ ತಲುಪಲು ಸಾಧ್ಯವಾಗುತ್ತಿದೆ.
ಕಡಿಮೆ ಆದಾಯವುಳ್ಳ ಕುಟುಂಬದಲ್ಲಿ ಸಂಸಾರದ ಆಧಾರಸ್ತಂಭವಾದ ವ್ಯಕ್ತಿಯೇ ಗಾಯಗೊಂಡು ದುಡಿಮೆಯಿಲ್ಲವಾದರೆ ಇಡೀ ಕುಟುಂಬವೇ ಸಂಕಷ್ಟಕ್ಕೊಳಗಾಗುತ್ತದೆ. ಸದ್ಯದ ಕಾಂಬೋಡಿಯಾ ಪರಿಸ್ಥಿತಿಯಲ್ಲಿ ಅಲ್ಲಿನ ಸರ್ಕಾರಕ್ಕೆ ಸರಿಯಾಗಿ ಪ್ರಾಥಮಿಕ ಚಿಕಿತ್ಸೆ ಕೊಡುವುದು ಸಹ ಸಾಧ್ಯವಾಗುತ್ತಿಲ್ಲ. ಇದು ಕಾಂಬೋಡಿಯಾದ ಪರಿಸ್ಥಿತಿಯಲ್ಲಿ ಇನ್ನು ಶೋಚನೀಯಗೊಳಿಸಿದೆ.
ರೈತರು ತಮ್ಮ ಭೂಮಿಯನ್ನು ಉಳುಮೆ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿಯಿದೆ. ಧೈರ್ಯ ಮಾಡಿ ಉಳುಮೆ ಮಾಡಲು ಮುಂದಾದರೂ ಯಾವ ಪರಿಸ್ಥಿತಿಯಲ್ಲಿ ಎಲ್ಲಿ ಲ್ಯಾಂಡ್‌ಮೈನ್ ಸಿಡಿಯುತ್ತದೊ ಸಾಧ್ಯವಿಲ್ಲ. ಹಾಗಾಗಿ ಆಹಾರದ ಕೊರತೆಯುಂಟಾಗಿದೆ ಮತ್ತು ಸಾಕಷ್ಟು ಅಪೌಷ್ಟಿಕತೆ ಕಾಡುತ್ತಿದೆ. ಸ್ಫೋಟದಲ್ಲಿ ಗಾಯಗೊಂಡು ಬದುಕುಳಿದವರಲ್ಲಿ ಶೇ. 87 ನಾಗರಿಕರು 15 ವರ್ಷ ಮೇಲ್ಪಟ್ಟವರು ಮತ್ತು ಸರಾಸರಿ 28 ವರ್ಷದ ಪುರುಷರು. ಇದೇ ಅಫ್ಘಾನಿಸ್ತಾನದ ಅಂಕಿಸಂಖ್ಯೆ ನೋಡುವುದಾದರೆ ಶೇ. 73ರಷ್ಟು 16ರಿಂದ 50 ವರ್ಷದೊಳಗಿನ ನಾಗರಿಕರು ಲ್ಯಾಂಡ್‌ಮೈನ್‌ಗೆ ಬಲಿಪಶುವಾಗುತ್ತಿದ್ದಾರೆ. ದುಡಿಯುವ ವಯಸ್ಸಿನ ಪುರುಷರು ಅಂಕವಿಕಲರಾಗಿ ನಿರುದ್ಯೋಗಿಯಾದಾಗ ಕುಟುಂಬದ ಆದಾಯ, ಮಕ್ಕಳ ವಿದ್ಯಾಭ್ಯಾಸ ಈ ಮೂಲಕ ಸಂಪೂರ್ಣ ಸಮಾಜವನ್ನೇ ಬಾಧಿಸುತ್ತದೆ.
ಆರ್ಥಿಕ 2002ರಲ್ಲಿ ನಡೆದ ಸರ್ವೇಯೊಂದರ ಮಾಹಿತಿಯಂತೆ ಶೇ. 20 ಅಂದರೆ ಸುಮಾರು 13908ರಲ್ಲಿ 2776 ಹಳ್ಳಿಗಳು ಲ್ಯಾಂಡ್‌ಮೈನ್‌ನ ಕರಿನೆರಳಿನಲ್ಲಿ ದಿನ ದೂಡುತ್ತಿವೆ. ಇಷ್ಟು ದೊಡ್ಡ ಸಂಖ್ಯೆಯ ಹಳ್ಳಿಗಳು ದೇಶದ ಆರ್ಥಿಕತೆಯ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನುಂಟು ಮಾಡಬಹುದು. ಕೃಷಿ ಭೂಮಿ, ಪಶುಪ್ರಾಣಿಗಳ ಮೇವಿನ ಪ್ರದೇಶ, ಅರಣ್ಯಗಳು ಜೊತೆಗೆ ಸುಮಾರು 85,000 ಕುಟುಂಬಗಳು ಆತಂಕದ ಜೀವನ ನಡೆಸುತ್ತಿವೆ. 2004ರ ಕಾಂಬೋಡಿಯನ್ ಸೋಷಿಯೋ ಏಕಾನಾಮಿಕ್ ಸರ್ವೇ ಪ್ರಕಾರ, ಯುದ್ಧ ಮತ್ತು ಲ್ಯಾಂಡ್‌ಮೈನ್‌ಗಳಿಂದ ಗಾಯಗೊಂಡವರ ಇತರೆ ಕಾರಣಗಳಿಂದ ಗಾಯಗೊಂಡ ಕುಟುಂಬಕ್ಕಿಂತ ಮೂರುಪಟ್ಟು ಹೆಚ್ಚು ಬಡತನದಲ್ಲಿ ಬದುಕುತ್ತಿವೆ.
(ಮುಂದುವರೆಯುವುದು)
Discussion about this post