ಅಕಿ-ರಾನ ಪ್ರಯತ್ನಗಳು
ಸಮಾಜದಲ್ಲೇ ಬದಲಾವಣೆ ತರಲು ಜನರ ಜೀವನವನ್ನು ಸುಧಾರಿಸಲು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ ಎಂಬುದು ಪ್ರಚಲಿತದಲ್ಲಿರುವ ನಂಬಿಕೆ. ಈ ಮಾತಿಗೆ ಅಪವಾದವೆಂಬಂತೆ ಅಕಿರಾ ಎಂಬ ಒಬ್ಬನೇ ಸಾಕಷ್ಟು ಪ್ರಯತ್ನಪಟ್ಟು ಸುಮಾರು 50,000ಕ್ಕೂ ಹೆಚ್ಚು ಲ್ಯಾಂಡ್‌ಮೈನ್‌ಗಳನ್ನು ನಿಷ್ಕ್ರಿಯಗೊಳಿಸಿದ್ದಾನೆ.
ಕೇವಲ 10ನೆಯ ವಯಸ್ಸಿಗೆ ಬಲವಂತವಾಗಿ ಕೇಮರ್ ರೂಫ್‌ನಲ್ಲಿ ಬಾಲ ಸೈನಿಕನಾಗಿ ಲ್ಯಾಂಡ್‌ಮೈನ್ ಇಡುವುದನ್ನು ಕಲಿತ ಅಕಿರಾ, ಈಗ ತಾನೇ ಆ ಲ್ಯಾಂಡ್‌ಮೈನ್‌ಗಳನ್ನು ನಿಷ್ಕ್ರಿಯಗೊಳಿಸುತ್ತಿದ್ದಾನೆ. ಚಿಕ್ಕವಯಸ್ಸಿನಲ್ಲೇ ರೂಚ್ ನಡೆಸಿದ ದಾಳಿಯಲ್ಲಿ ತಂದೆತಾಯಿ ಯನ್ನು ಕಳೆದುಕೊಂಡ ಅಕಿರಾ, ಕೇಮರ್ ರೂಫ್ ಕ್ಯಾಂಪ್‌ಗೆ ಸೇರಿದ್ದ.
ಕಾಲಾಂತರದಲ್ಲಿ ಬಾಲ ಸೈನಿಕನಾಗಿದ್ದ ಈತ ವಿಯೆಟ್ನಾಂ ಕಾಂಬೋಡಿಯಾದ ಮೇಲೆ ನಡೆಸಿದ ಸೈನಿಕ ದಾಳಿಯಲ್ಲಿ ವಿಯೆಟ್ನಾಂನ ಸೈನಿಕರ ಬಳಿ ಬಂಧಿಯಾಗಿದ್ದ. 1979ರಲ್ಲಿ ಕೇಮರ್ ರೂಫ್ ಸರ್ಕಾರವನ್ನು ಕಿತ್ತೊಗೆದು ಅಧಿಕಾರಕ್ಕೇರಿದ್ದ People’s Republic of Kampucheaದ ಹೊಸ ಸೈನ್ಯದಲ್ಲಿ ಅಕಿರಾವನ್ನು ಸೇರಿಸಿಕೊಳ್ಳಲಾಗಿತ್ತು ಮತ್ತು ಥಾಯ್ಲೆಂಡ್ ಗಡಿಯುದ್ಧಕ್ಕೂ ಕಾಂಬೋಡಿಯಾದ ಪ್ರದೇಶಗಳಲ್ಲಿ ಲ್ಯಾಂಡ್‌ಮೈನ್‌ಗಳನ್ನು ಇಡುವ ಜವಾಬ್ದಾರಿಯನ್ನು ಈತನಿಗೆ ಕೊಡಲಾಗಿತ್ತು. ಮೂಲ ಹೆಸರು ‘ಇಯಾನ್ ಯೀಕ್’ (Eoun Yeak). ಈತನ ಕಾರ್ಯಕ್ಷಮತೆ, ದಕ್ಷತೆಯನ್ನು ಗಮನಿಸಿದ ಈತನ ಹಿರಿಯ ಅಧಿಕಾರಿಯೊಬ್ಬರು ಇವನನ್ನು ಜಪಾನಿನ ಭಾರಿ ಸಲಕರಣೆ ಉತ್ಪಾದಕ ಕಂಪೆನಿ ಅಕಿರಾಗೆ ಹೋಲಿಸಿ ಅಕಿರಾ ಎಂಬ ಹೆಸರನ್ನಿಟ್ಟರು.
1991ರಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆಯಲ್ಲಿ ಲ್ಯಾಂಡ್‌ಮೈನ್‌ಗಳನ್ನು ನಿಷ್ಕ್ರಿಯಗೊಳಿಸುವ ಕೆಲಸಕ್ಕೆ ಸೇರಿದ ಅಕಿರಾ, 1992ರಲ್ಲಿ ವಿಶ್ವಸಂಸ್ಥೆಯಲ್ಲಿನ ತನ್ನ ಕೆಲಸವನ್ನು ತೊರೆದ. ಆದರೆ ಆನಂತರವೂ ಸಹ ಅಕಿರಾ ಲ್ಯಾಂಡ್‌ಮೈನ್‌ಗಳನ್ನು ನಿಷ್ಕ್ರಿಯಗೊಳಿಸುವ ತನ್ನ ಕೆಲಸವನ್ನು ಮುಂದುವರೆಸಿಕೊಂಡು ಬಂದಿದ್ದಾನೆ.
(ಮುಂದುವರೆಯುವುದು)
Discussion about this post