ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಬಿಜೆಪಿ ವರಿಷ್ಟ ಅಮಿತ್ ಷಾ ಅವರು ಕುರುಬ ಸಮಾಜವನ್ನು ಕಡೆಗಣಿಸಿ ಮಾತನಾಡಿಲ್ಲ. ಕುರುಬ ಸಮುದಾಯವನ್ನು ಬಿಜೆಪಿಯಿಂದ ದೂರ ಮಾಡಲು ವಿರೋಧಿಗಳು ಹೂಡಿದ ತಂತ್ರ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ #Prahlad Joshi ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ, ಕಾರ್ಯಕರ್ತರೊಬ್ಬರು “ಅಮಿತ್ ಷಾ #Amith Shah ಅವರು ಕುರುಬ ಸಮಾಜವನ್ನು ಕಡೆಗಣಿಸಿ ಮಾತನಾಡಿದ್ದಾರೆ” ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎನ್ನುತ್ತಿದ್ದಂತೆ ಸಚಿವ ಜೋಶಿ ಅಚ್ಚರಿ ವ್ಯಕ್ತಪಡಿಸಿದರು.

ಕುರುಬ ಸಮುದಾಯದವರು ಸದಾ ಬಿಜೆಪಿ ಬೆಂಬಲಿಸುತ್ತಾ ಬಂದಿದ್ದಾರೆ. ರಾಜ್ಯದಲ್ಲಿ ಈಗ ಆ ಸಮುದಾಯದವರೇ ಸಿಎಂ ಇದ್ದಾರೆ. ಸಹಜವಾಗಿ ತಮ್ಮ ಸಮಾಜದವರನ್ನು ಸೆಳೆಯಲು ಯತ್ನಿಸಬಹುದು. ಬಿಜೆಪಿ ಬೆಂಬಲಿತ ಆ ಸಮುದಾಯವನ್ನು ಬಿಟ್ಟುಕೊಡಬೇಡಿ ಎಂದು ಅಮಿತ್ ಷಾ ನಮಗೆ ಸಲಹೆ ಮಾಡಿದರು. ಇದು ಸತ್ಯ ಸಂಗತಿ. ಮಿಕ್ಕಿದ್ದೆಲ್ಲ ಮಿತ್ಯ ಎಂದು ಜೋಶಿ ಸಮಾಜಯಿಷಿ ನೀಡಿದರು.

Also read: ಫಲಾನುಭವಿಗಳಿಗೆ ಮೋದಿ ಸರ್ಕಾರದ ಸೊಗಸಾದ ಕತೆ ಹೇಳಿದ ಸಿಎಂ ಸಿದ್ದರಾಮಯ್ಯ
ಕುರುಬ ಸಮುದಾಯವನ್ನು Kuruba Community ಬಿಜೆಪಿಯಿಂದ ಬೇರ್ಪಡಿಸಲು ಯತ್ನ: ವಿರೋಧಿಗಳು ಕುರುಬ ಸಮುದಾಯವನ್ನು ಬಿಜೆಪಿಯಿಂದ ಮುದ್ದಾಂ ಬೇರ್ಪಡಿಸಬೇಕೆಂದು ಹೀಗೆ ಏನೆಲ್ಲಾ ಶತಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಯಾರೂ ಕಿವಿಗೊಡಬೇಡಿ ಎಂದು ಕರೆ ನೀಡಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post